ಬಡ ಮಕ್ಕಳ ಶೈಕ್ಷಣಿಕ ಪ್ರಗತಿಯೇ ಸಂಸ್ಥೆಯ ಗುರಿ

KannadaprabhaNewsNetwork |  
Published : Dec 31, 2023, 01:30 AM IST
ವಿಜೆಪಿ ೨೯ವಿಜಯಪುರ ಹೋಬಳಿಯ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಅರುಂಧತಿ ಸೇವಾ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿದ್ದ ೨೦೨೪ರ ದಿನದರ್ಶಿಕೆಗಳನ್ನು ಬಿಡುಗಡೆಗೊಳಿಸಿದ ಶಾಲಾ ಮಕ್ಕಳು.   | Kannada Prabha

ಸಾರಾಂಶ

ವಿಜಯಪುರ: ಕಳೆದ 12 ವರ್ಷಗಳಿಂದ ಸಾರ್ವಜನಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಅರುಂಧತಿ ಸೇವಾ ಸಂಸ್ಥೆಯು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಾ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಾಲಿಗೆ ಮುನಿರಾಜು ತಿಳಿಸಿದರು.

ವಿಜಯಪುರ: ಕಳೆದ 12 ವರ್ಷಗಳಿಂದ ಸಾರ್ವಜನಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುವ ಅರುಂಧತಿ ಸೇವಾ ಸಂಸ್ಥೆಯು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತಾ ಬಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಾಲಿಗೆ ಮುನಿರಾಜು ತಿಳಿಸಿದರು.

ಹೋಬಳಿಯ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಅರುಂಧತಿ ಸೇವಾ ಸಂಸ್ಥೆ ಏರ್ಪಡಿಸಿದ್ದ 2024ರ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೌರವಾಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಸಂಸ್ಥೆಯು ಪ್ರತಿ ವರ್ಷವೂ ದೇವನಹಳ್ಳಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 250-300 ಮಕ್ಕಳಿಗೆ ಒಂದು ಸಾವಿರ ರು.ಗಳಂತೆ ಪ್ರತಿಭಾ ಪುರಸ್ಕಾರ ನೀಡಿ ಅವರನ್ನು ಗೌರವಿಸುತ್ತಿದೆ ಎಂದು ತಿಳಿಸಿದರು.

ಸಂಸ್ಥೆಯ ಖಜಾಂಚಿ ಡಿ.ಎಂ.ವೇಣುಗೋಪಾಲ್ ಮಾತನಾಡಿ, ಸಂಸ್ಥೆ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಾರಾಯಣಪುರ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕ ಪಿ.ಎಮ್.ಕೊಟ್ರೇಶ್, ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಮಂಜುನಾಥ್, ಉಪಾಧ್ಯಕ್ಷ ಮುನಿಕೃಷ್ಣಪ್ಪ, ಹಿರಿಯ ಉಪಾಧ್ಯಕ್ಷ ಅಮರನಾರಾಯಣಪ್ಪ, ನಿರ್ದೇಶಕರಾದ ಮುನಿಕೃಷ್ಣಪ್ಪ, ಎನ್ ನರಸಿಂಹಮೂರ್ತಿ, ವೆಂಕಟಪ್ಪ, ಪ್ರಕಾಶ್, ಶ್ರೀನಿವಾಸ್ ಹಾಗೂ ಶಾಲಾ ಶಿಕ್ಷಕರಾದ ಗಂಗರಾಜು, ವೆಂಕಟೇಶಪ್ಪ, ಬಾಲಚಂದ್ರ, ಸುಷ್ಮಾ, ಯಾಸ್ಮಿನ್, ಪ್ರತಿಭಾ, ಸೌಂದರ್ಯ, ಕೃಷ್ಣಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ