ಕ್ಷೌರಿಕ ಸಮಾಜ ಗೌರವಕ್ಕೆ ಅರ್ಹವಾದ ಸಮಾಜ-ಶಾಸಕ ಪಠಾಣ

KannadaprabhaNewsNetwork |  
Published : Aug 09, 2026, 02:30 AM IST
ಪೊಟೋಪೈಲ್ ನೇಮ್ ೮ಎಸ್‌ಜಿವಿ೨   ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ಸರ್ಕಾರಿ ವಿವಿಧ ಇಲಾಖೆಗಳ ಸಂಕೀರ್ಣದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ವಿವಿಧ ಇಲಾಖೆಗಳ ಹಾಗೂ ತಾಲೂಕ ಹಡಪದ ಸಮಾಜದ ಸಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ೮೯೨ ನೇ ಜಯಂತ್ಯೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಕಮಿಟಿಯ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಯಾಸಿರ ಅಹ್ಮದಖಾನ ಪಠಾಣ ಉದ್ಘಾಟಿಸಿದರು. | Kannada Prabha

ಸಾರಾಂಶ

ಕ್ಷೌರಿಕ ಸಮಾಜ ಗೌರವಕ್ಕೆ ಅರ್ಹವಾದ ಸಮಾಜ. ಈ ಸಮಾಜ ತಮ್ಮ ವೃತ್ತಿಯಿಂದ ಮನುಷ್ಯ ಮನುಷ್ಯವಾಗಿ ಕಾಣುವಂತೆ ಮಾಡುವ ಸಮಾಜವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.

ಶಿಗ್ಗಾಂವಿ: ಕ್ಷೌರಿಕ ಸಮಾಜ ಗೌರವಕ್ಕೆ ಅರ್ಹವಾದ ಸಮಾಜ. ಈ ಸಮಾಜ ತಮ್ಮ ವೃತ್ತಿಯಿಂದ ಮನುಷ್ಯ ಮನುಷ್ಯವಾಗಿ ಕಾಣುವಂತೆ ಮಾಡುವ ಸಮಾಜವಾಗಿದೆ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವಿವಿಧ ಇಲಾಖೆಗಳ ಸಂಕೀರ್ಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಿವಿಧ ಇಲಾಖೆಗಳ ಹಾಗೂ ತಾಲೂಕು ಹಡಪದ ಸಮಾಜದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣನವರ ೮೯೨ನೇ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಕಮಿಟಿಯ ನೂತನ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರು ಜನ್ಮ ತಾಳದಿದ್ದರೆ ಹಲವಾರು ಮಹನೀಯರು ಬೆಳಕಿಗೆ ಬರುತ್ತಿರಲಿಲ್ಲ, ಅಲ್ಲಿಂದಲೇ ಸಮಾಜ ತಿದ್ದುವ ಕಾರ್ಯ ಪ್ರಾರಂಭವಾಯಿತು, ದಾರ್ಶನಿಕರ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ತಿಳುವಳಿಕೆ ಬರುತ್ತದೆ, ಕುನ್ನೂರ ಗ್ರಾಮದಲ್ಲಿ ಹಡಪದ ಅಪ್ಪಣ್ಣನವರ ದೇವಸ್ಥಾನ ಕೆಲಸ ಪ್ರಗತಿಯಲ್ಲಿದೆ, ಈಗಾಗಲೇ ೫-೬ ಸಮಾಜಗಳಿಗೆ ನಿವೇಶನವನ್ನು ಗುರುತಿಸಲಾಗಿದೆ, ಸದ್ಯದಲ್ಲಿಯೇ ಅವುಗಳಿಗೆ ಅನುಮೋದನೆ ತಂದು ವ್ಯವಸ್ಥಿತವಾಗಿ ಸಮುದಾಯ ಭವನಗಳನ್ನು ಸ್ಥಾಪಿಸಲಾಗುವುದು, ಶಿಶುನಾಳ ಶರೀಫರ ಪ್ರಾಧಿಕಾರ ರಚನೆ ಮಾಡಿ ರಾಜ್ಯದಲ್ಲಿ ಅವರ ಹೆಸರಿನಲ್ಲಿ ೩೫ ರೆಸಿಡೆನ್ಸಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ, ಗುಡ್ಡದ ಚನ್ನಾಪೂರದಲ್ಲಿ ಚನ್ನಕೇಶವ ಮತ್ತು ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣವಾಗುತ್ತಿರುವದು ನನ್ನ ಭಾಗ್ಯವಾಗಿದೆ, ಬದುಕಿನ ಸಂಸ್ಕಾರ ನೀಡಿದ ಎಲ್ಲ ಮಹನೀಯರ ಬಗ್ಗೆ ಕೆಲಸ ಮಾಡುವುದು ಪುಣ್ಯದ ಕಾರ್ಯವಾಗಿದೆ ಎಂದರು.

ಸೀತಾಗೀರಿಯ ಸದ್ಗುರು ಸಮರ್ಥ ಎ.ಸಿ. ವಾಲಿ ಮಹಾರಾಜರು ಮಾತನಾಡಿ, ತುಳಿತಕ್ಕೊಳಗಾದವರನ್ನು ನಾಡಿಗೆ ಪರಿಚಯಿಸಿದವರು ಹಡಪದ ಅಪ್ಪಣ್ಣನವರು, ಅವರಿಗೆ ನಿಜಸುಖಿ ಎಂದು ಬಿರುದು ನೀಡಿದವರು ಬಸವಣ್ಣನವರು, ಸುಖ ನಮ್ಮಲ್ಲಿರುವುದು ಎಂದು ತಿಳಿಸಿದರು.

ರಾಜ್ಯ ಸಮಿತಿಯ ಸದಸ್ಯ ಮಲ್ಲಿಕಾರ್ಜುನ ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು ಮತ್ತು ರಾಜ್ಯ ಕಮಿಟಿಯ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ದೇವಣ್ಣ ಮುಂಡರಗಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಸ್.ಎಫ್. ಮಣಕಟ್ಟಿ, ಕುರುಬ ಸಮಾಜದ ಅಧ್ಯಕ್ಷ ಚಂದ್ರಣ್ಣ ಮಾಯಣ್ಣನವರ, ಡಿ.ಎಸ್. ಮಾಳಗಿ, ಅಣ್ಣಪ್ಪ ಲಮಾಣಿ, ಮಂಜುನಾಥ ತಿಮ್ಮಾಪೂರ, ಶಂಭುಲಿಂಗ ಆಜೂರ, ಗೌಸಖಾನ್ ಮುನಶಿ, ಶಂಭು ನೆರ್ತಿ, ಯಲ್ಲಪ್ಪ ತಳವಾರ, ಬಸುವರಾಜ ಜೆಕ್ಕಿನಕಟ್ಟಿ, ಅಶೋಕ ಕಾಳೆ, ಮಾಜಿ ರಾಜ್ಯಾಧ್ಯಕ್ಷ ಸಿದ್ದಣ್ಣ, ಗಂಗಾಧರ ಯಮ್ಮಿಗನೂರ, ಉಳವಪ್ಪ ಹಡಪದ, ಎಂ.ಎಸ್. ಮಾಗಿ, ಮಲ್ಲಿಕಾರ್ಜುನ ಸ್ವಾಮಿ, ಕಜಾವೆ ರಾಜ್ಯಾಧ್ಯಕ್ಷ ಮಂಜುನಾಥ ದುಗ್ಗತ್ತಿ, ಮಲ್ಲಿಕಾರ್ಜುನ ಕುಡಲ, ಫಕ್ಕಿರಪ್ಪ, ಗುಡ್ಡಪ್ಪ ಮಲ್ಲೂರ, ಮಾಂತೇಶ ಹಂಪಣ್ಣನವರ, ಸುರೇಶ ಕಿತ್ತೂರ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥ ಕ್ಷೌರದ, ಗೌರವಾಧ್ಯಕ್ಷ ಗುರುಪಾದಪ್ಪ ಹಡಪದ, ರಾಜ್ಯ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಡಪದ, ಮಹಲಿಂಗಪ್ಪ ಹಡಪದ, ಶಿವಕುಮಾರ ಮಡ್ಲಿಕರ, ಬಸವರಾಜ ಹಡಪದ, ಮುತ್ತಪ್ಪ ಕ್ಷೌರದ, ಶಿವಣ್ಣ ಕ್ಷೌರದ, ವಿವಿಧ ಮುಖಂಡರುಗಳಾದ ಅರ್ಜುನ ಹಂಚಿನಮನಿ, ಶಿವಾನಂದ ಮ್ಯಾಗೇರಿ, ಫಕ್ಕಿರಪ್ಪ ಕುಂದೂರ, ಕಾಳಪ್ಪ ಬಡಿಗೇರ, ಶಿವಾನಂದ ಬಾಗೂರ, ಅಶೋಕ ಕಾಳೆ, ಬಸವರಾಜ ಜಕ್ಕನಕಟ್ಟಿ, ಪ್ರಮೋದ ಚಲವಾದಿ, ಮಾಲತೇಶ ಹಡಪದ, ಪ್ರಶಾಂತ ಬಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ನಾಡು-ನುಡಿ ನಮ್ಮ ಅಸ್ಮಿತೆಯ ಪ್ರತೀಕ: ಬಿ.ಎನ್. ವಾಸರೆ
ಭಾರತ ಸೇವಾದಳದಿಂದ ಉತ್ತಮ ನಾಗರಿಕರ ಸೃಷ್ಟಿ: ಎಂ.ಬಿ. ಪೈ