ಕನ್ನಡಪ್ರ ವಾರ್ತೆ ಕಲಬುರಗಿ
ಬಸವ ಜಯಂತಿ ಅಂಗವಾಗಿ ಕನ್ನಡಪ್ರಭ ಹೊರತಂದಿರುವ ಬಸವಪ್ರಭ ವಿಶೇಷ ಸಂಚಿಕೆಯನ್ನು ದಾಸೋಹ ಮಹಾ ಮನೆಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಬಸವಣ್ಣನವರು 12 ನೇ ಶತಮಾನದಲ್ಲಿಯೇ ಸಮ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದವರು. ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದವರು. ಇಂದಿನ ಪಳಿಗೆಗೆ ಇಂತಹ ಮಹಾತ್ಮರ ಕಾರ್ಯಗಳು ಸದಾ ನೆನಪಿರಬೇಕು. ಅಂತಹ ಕೆಲಸ ಪತ್ರಿಕೆಯವರು ಮಾಡಿದ್ದೀರಿ ಎಂದು ಕನ್ನಡಪ್ರಭ ಸಂಚಿಕೆಯನ್ನು ಹೊಗಳಿದರು.ಸಿಚಂಕೆಯಲ್ಲಿ ಮಡಿ ಬಂದಿರುವ ಪ್ರತಿಯೊಂದು ಲೇಖನ ಬಸವೇಶ್ವರರ ಕುರಿತಂತೆ ತುಂಬ ಮಾಹಿತಿಗಳನ್ನು ಓದುರಿಗೆ ನೀಡಿದೆ. ಇಂತಹ ಕೆಲಸಕ್ಕಾಗಿತಾವು ದಾಸೋಹ ಪೀಠದ ಪರವಾಗಿ ಕನ್ನಡಪ್ರಭ ತಂಡಕ್ಕೆ ಶುಭ ಹಾರೈಸೋದಾಗಿಯೂ ಮಾತೋಶ್ರಿಯವರು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಸಿದ್ದ ಕನ್ನಡಪ್ರಭ ಪತ್ರಿಕೆಯ ಸಂಪಾದಕ ಸಮನ್ವಯ ವಿಶೇಷ ಸಂಚಿಕೆ ಬಿವಿ ಮಲ್ಲಿಕಾರ್ಜುನಯ್ಯ ಅವರು ಮಾತನಾಡುತ್ತ ಕನ್ನಡಪ್ರಭ ಸದಾಕಾಲ ಹೊಸತನದೊಂದಿಗೆ ಜನರ ಮುಂದೆ ಬರುವುದನ್ನು ಮೈಗೂಡಿಸಿಕೊಂಡು ಬಂದಿದೆ. ಪತ್ರಿಕೆಯ ಹೊಸ ಪ್ರಯತ್ನಗಳಿಗೆ ಕಲಬುರಗಿಯ ಮಹಾ ದಾಸೋಹ ಪೀಠದಿಂದ ಸದಾಕಾಲ ಬೆಂಬಲ ಇದೆ ಎಂದು ಹೇಳುತ್ತ ಬಸವೇಶ್ವರರನ್ನು ಹೊಸ ರೂಪದಲ್ಲಿ ಪರಿಚಯಿಸಲು ಉದ್ದೇಶದಿಂದ ಬಸವ ಪ್ರಭ ಹೊರತಂದಿರೋದಾಗಿ ಹೇಳಿದರು.
ಕಲಬುರಗಿ ಜನಮನ ಸೆಳೆದ ಬಸವ ಪ್ರಭ ಸಂಚಿಕೆ: ಕನ್ನಡಪ್ರಭ ಹೊರ ತಂದಿರುವ ಬಸ ಪ್ರಭ ವಿಶೇಷ ಸಂಚಿಕೆ ಕಲಬುರಗಿಯಲ್ಲಿ ಜನಮನ ಸೆಳೆದಿದೆ. ಅದರಲಲೂ ಬಸವ ಭಕ್ತರೆಲ್ಲರೂ ಸಂಚಿಕೆಯನ್ನು ಕಂಡು ಓದಿ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಅನೇಕರು ಪತ್ರಿಕೆಯ ಕಚೇರಿಗೆ ಕರೆ ಮಾಡಿ ಹೊರ ತಂದಿರುವ ಬಸವಪ್ರಭ, ಅದರಲ್ಲಿನ ಲೇಖನಗಳು ತುಂಬ ಚಿಂತನಪೂರ್ಣವಾಗಿವೆ ಎಂದು ಅಭಿನಂದಿಸಿದ್ದಾರೆ.