ಕನ್ನಡಪ್ರಭ ವಾರ್ತೆ ಕಿತ್ತೂರು
ಕಿತ್ತೂರು ತಾಲೂಕಿನ ಬಸಾಪೂರ ಗ್ರಾಮದ ಈರಪ್ಪ ಪಕ್ಕೀರಪ್ಪ ಬಬಲಿ (48) ಮೃತ ಕಲಾವಿದ. ಕಿತ್ತೂರು ವಿಜಯೋತ್ಸವ ಅಂಗವಾಗಿ ವೇದಿಕೆಯಲ್ಲಿ ಶನಿವಾರ ರಾತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಭಜನಾ ಸ್ಪರ್ಧೆ ನಡೆಯಿತು. ವೇದಿಕೆಯಲ್ಲಿ ತಂಡದೊಂದಿಗೆ ಭಾಗಿಯಾಗಿ ವೇದಿಕೆಯಿಂದ ನಿರ್ಗಮಿಸುವ ಸಮಯದಲ್ಲಿ ತೀವ್ರ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ಕೂಡಲೇ ಕಲಾವಿದನನ್ನು ಸರ್ಕಾರಿ ತಾಲೂಕಾಸ್ಪತ್ರೆಗೆ ಒಯ್ಯಲಾಯಿತಾದರೂ ಅಷ್ಟೊತ್ತಿಗಾಗಲೇ ಅಸುನೀಗಿದ್ದಾರೆ ಎಂದು ವೈದ್ಯರು ಖಚಿತಪಡಿಸಿದರು. ಕಲಾವಿದ ಈರಪ್ಪನಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತ ಕಲಾವಿದನ ಮನೆಗೆ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಬೇಟಿ ನೀಡಿ ಸಾಂತ್ವನ ಹೇಳಿದರು.