ಆಡಳಿತ ಮಂಡಳಿಗೆ ಹೊಸ ಮಾರ್ಗಸೂಚಿ, ನಿಯಮಗಳ ಅರಿವಿರಲಿ

KannadaprabhaNewsNetwork | Published : Mar 7, 2025 12:46 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಸಹಕಾರ ಸಂಘಗಳು ಗಣನೀಯವಾಗಿ ಮೆಲುಗೈ ಸಾಧಿಸುತ್ತಿವೆ. ಆದ್ದರಿಂದ ಸರ್ಕಾರದ ಹೊಸ ಹೊಸ ಯೋಜನೆಗಳು ಮತ್ತು ದಿನಕ್ಕೊಂದು ಕಾನೂನು ತಿದ್ದುಪಡಿ ಬರುವುದರಿಂದ ಸಹಕಾರ ಸಂಘದ ಉನ್ನತಿಗೆ ತರಬೇತಿ ಶಿಬಿರ ಅವಶ್ಯಕತೆ ಇದೆ ಎಂದು ದಾವಣಗೆರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ಡಿ.ಎಸ್. ಸುರೇಂದ್ರ ಹೇಳಿದ್ದಾರೆ.

- ಹೊನ್ನಾಳಿಯಲ್ಲಿ ಜಿಲ್ಲಾಮಟ್ಟದ ವಿಶೇಷ ತರಬೇತಿ ಶಿಬಿರದಲ್ಲಿ ನಿರ್ದೇಶಕ ಸುರೇಂದ್ರ ಸಲಹೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಇತ್ತಿಚಿನ ದಿನಗಳಲ್ಲಿ ಸಹಕಾರ ಸಂಘಗಳು ಗಣನೀಯವಾಗಿ ಮೆಲುಗೈ ಸಾಧಿಸುತ್ತಿವೆ. ಆದ್ದರಿಂದ ಸರ್ಕಾರದ ಹೊಸ ಹೊಸ ಯೋಜನೆಗಳು ಮತ್ತು ದಿನಕ್ಕೊಂದು ಕಾನೂನು ತಿದ್ದುಪಡಿ ಬರುವುದರಿಂದ ಸಹಕಾರ ಸಂಘದ ಉನ್ನತಿಗೆ ತರಬೇತಿ ಶಿಬಿರ ಅವಶ್ಯಕತೆ ಇದೆ ಎಂದು ದಾವಣಗೆರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ಡಿ.ಎಸ್. ಸುರೇಂದ್ರ ಹೇಳಿದರು.

ತಾಲೂಕಿನ ಗೋಲ್ಲರಹಳ್ಳಿ ಹಾಲು ಶೀಥಲೀಕರಣ ಘಟಕದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾಮಂಡಳಿ, ಸಹಕಾರ ಇಲಾಖೆ ಮತ್ತು ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ ಆಶ್ರಯದಲ್ಲಿ ಅವಳಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ಕೃಷಿಯೇತ್ತರ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಜಿಲ್ಲಾಮಟ್ಟದ ವಿಶೇಷ ತರಬೇತಿ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಹೊಸ ಮಾರ್ಗಸೂಚಿಗಳು ಮತ್ತು ನೀತಿ ನಿಯಮಗಳನ್ನು ತಿಳಿದುಕೊಂಡು ರೈತರಿಗೆ ಮಾಹಿತಿ ನೀಡಬೇಕಾಗಿದೆ. ಈ ರೀತಿಯ ತರಬೇತಿ ಕಾರ್ಯಾಗಾರಗಳು ಪ್ರಸ್ತುತ ಅತ್ಯಂತ ಅವಶ್ಯಕ ಮತ್ತು ತರಬೇತಿ ಕಾರ್ಯಕ್ರಮ ನಿರಂತರ ನಡೆಯುವಂತೆ ಕಾರ್ಯರೂಪಿಸಲು ಒಕ್ಕೂಟದ ಅಧ್ಯಕ್ಷರಿಗೆ ಮನವಿ ಮಾಡಿದರು.

ಮುಖ್ಯ ಅತಿಥಿ, ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ ಮಾತನಾಡಿ, ತರಬೇತಿಗೆ ವಯಸ್ಸಿನ ಮಿತಿ ಇಲ್ಲ. ಸಮಾಜದಲ್ಲಿ ಪ್ರತಿನಿತ್ಯ ಸಂಭವಿಸುವ ಬದಲಾವಣೆಗೆ ನಾವೆಲ್ಲರೂ ಹೊಂದಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿ ಸಹಕಾರಿ ಆಗುತ್ತದೆ. ಆದ್ದರಿಂದ ಇಂತಹ ತರಬೇತಿ ಕಾರ್ಯಾಗಾರ ಸದುಪಯೋಗ ಪಡೆಯಲು ತಿಳಿಸಿದರು.

ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಸರ್ಕಾರ ಕಂಪ್ಯೂಟರೀಕರಣಗೊಳಿಸಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘದ ಅಧ್ಯಕ್ಷರು ಸಹ ಅದರ ಬಗ್ಗೆ ಅರಿವು ಪಡೆಯುವ ಅವಶ್ಯಕತೆ ಇದೆ. ಇತ್ತೀಚೆಗೆ ಹಲವಾರು ಸಹಕಾರ ಸಂಘಗಳಲ್ಲಿ ಚುನಾವಣೆ ಜರುಗಿದ್ದು, ನೂತನ ಆಡಳಿತ ಮಂಡಲಿ ರಚನೆಯಾಗಿದೆ. ಇಂತಹ ಆಡಳಿತ ಮಂಡಲಿ ಸದಸ್ಯರಿಗೆ ಕಾಲಕಾಲಕ್ಕೆ ಬದಲಾದ ಕಾಯ್ದೆ ಕಾನೂನಿನ ತಿದ್ದುಪಡಿಗಳ ಬಗ್ಗೆ ತರಬೇತಿ ನೀಡುವುದು ಒಕ್ಕೂಟದ ಆಶಯವಾಗಿದೆ. ಮಹಾಮಂಡಳ ವತಿಯಿಂದ ಜರುಗಿಸಲಾಗುವ ತರಬೇತಿ ಕಾರ್ಯಕ್ರಮಗಳಿಗೆ ಭಾಗವಹಿಸಬೇಕು ಎಂದು ತಿಳಿಸಿದರು.

ಅತಿಥಿಗಳಾಗಿ ಜಿಲ್ಲಾ ಸಹಕಾರ ಒಕ್ಕೂಟ ಉಪಾಧ್ಯಕ್ಷೆ ಎಚ್.ಜಿ. ಮಂಜುಳ ಗಣೇಶ್, ನಿರ್ದೇಶಕರಾದ ಎಂ.ಜಿ. ಷಣ್ಮುಖಪ್ಪ, ಕೆ.ಎಚ್. ಮಹೇಶ್, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಜಿ. ನವೀನ್‌ಕುಮಾರ್, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಗುರುರಾಜ್ ಜಿ. ಅಂಬೇಕರ್, ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ, ಜಿಲ್ಲಾ ಸಹಕಾರ ಒಕ್ಕೂಟ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್. ಸಂತೋಷ್ ಕುಮಾರ್, ಜಿಲ್ಲಾ ಸಹಕಾರ ಒಕ್ಕೂಟ ವ್ಯವಸ್ಥಾಪಕ ಕೆ.ಎಂ. ಜಗದೀಶ್, ವಿ.ರಂಗನಾಥ ಮತ್ತು ಆರ್. ಸ್ವಾಮಿ ಮತ್ತಿತರರು ಹಾಜರಿದ್ದರು.

- - - -6ಎಚ್.ಎಲ್.ಐ5:

ಕಾರ್ಯಕ್ರಮವನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ಡಿ.ಎಸ್. ಸುರೇಂದ್ರ ಉದ್ಘಾಟಿಸಿದರು.

Share this article