ದೇಹಕ್ಕೆ ಅಯೋಡಿನ್‌ ಕೊರತೆ ಆಗಬಾರದು

KannadaprabhaNewsNetwork |  
Published : Oct 27, 2024, 02:03 AM IST
ಸಿಕೆಬಿ-6  ವಿಶ್ವ ಅಯೋಡಿನ್ ದಿನ ಹಾಗೂ ಸಪ್ತಾಹ ದಿನಾಚರಣೆ  ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್  ಮಾತನಾಡಿದರು | Kannada Prabha

ಸಾರಾಂಶ

ಆಯೋಡಿನ್ ಕೊರತೆಯಿಂದ ಗರ್ಭಿಣಿಯರಲ್ಲಿ ಗರ್ಭಪಾತ, ಪ್ರಸವ ಪೂರ್ವ ಸಾಯುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತದೆ. ಆಯೋಡಿನ್ ಕೊರತೆಯಿಂದಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕುಂಠಿತ ಬೆಳವಣಿಗೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕಿವುಡು, ಮೂಕತನ, ಮೆಳ್ಳೆಗಣ್ಣು ಇನ್ನಿತರೆ ನ್ಯೂನತೆಯನ್ನು ಕಾಣಿಸಿಕೊಳ್ಳುತ್ತವೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವಿಟಮಿನ್ ಮತ್ತು ಪ್ರೊಟೀನ್ ಯುಕ್ತ ಸಮತೋಲಿತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೊಬ್ಬ ಮನುಷ್ಯನ ಬೆಳವಣಿಗೆಗೆ ಅಯೋಡಿನ್ ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಮಹೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಾಪಸಂದ್ರ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ "ವಿಶ್ವ ಅಯೋಡಿನ್ ದಿನ ಹಾಗೂ ಸಪ್ತಾಹ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಹಕ್ಕೆ ಅಯೋಡಿನ್‌ ಅಗತ್ಯ

ಆಯೋಡಿನ್ ಕೊರತೆಯಿಂದ ಗರ್ಭಿಣಿಯರಲ್ಲಿ ಗರ್ಭಪಾತ, ಪ್ರಸವ ಪೂರ್ವ ಸಾಯುವ ಮಕ್ಕಳ ಪ್ರಮಾಣ ಹೆಚ್ಚಾಗುತ್ತದೆ. ಆಯೋಡಿನ್ ಕೊರತೆಯಿಂದಾಗಿ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕುಂಠಿತ ಬೆಳವಣಿಗೆ, ಕಲಿಕೆಯಲ್ಲಿ ಹಿಂದುಳಿಯುವಿಕೆ, ಕಿವುಡು, ಮೂಕತನ, ಮೆಳ್ಳೆಗಣ್ಣು ಇನ್ನಿತರೆ ನ್ಯೂನತೆಯನ್ನು ಕಾಣಬಹುದಾಗಿದೆ. ನಿಶ್ಯಕ್ತಿ, ಗಳಗಂಡ ರೋಗ, ಕೆಲಸದಲ್ಲಿ ಆಲಸ್ಯ ಇಂತಹ ಕಾಯಿಲೆಗಳು ಆಯೋಡಿನ್ ಕೊರತೆಯಿಂದಾಗಿ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಮಾನಸಿಕ ಹಾಗೂ ದೈಹಿಕ ವಿಕಲತೆ ತಡೆಗಟ್ಟಲು ಅಯೋಡಿನ್‌ಯುಕ್ತ ಉಪ್ಪನ್ನೇ ಬಳಸಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ಅಯೋಡಿನ್‌ ಕೊರತೆಯ ನ್ಯೂನತೆಗಳ ತಡೆಗಟ್ಟಲು ಉಪ್ಪಿನ ಪ್ಯಾಕೆಟ್ ಖರೀದಿಸುವ ಮುನ್ನ ಆಯೋಡಿನ್ ಅಂಶ ಇದೆಯೇ ಎಂದು ಖಚಿತ ಪಡಿಸಿಕೊಂಡು ಖರೀದಿಸಬೇಕು. ಸಾರ್ವಜನಿಕರು ಆಯೋಡಿನ್‌ಯುಕ್ತ ಉಪ್ಪನ್ನ ಪ್ರತಿನಿತ್ಯ ಆಹಾರದಲ್ಲಿ ಉಪಯೋಗಿಸುವುದರಿಂದ ಅಯೋಡಿನ್‌ ಕೊರತೆಯಿಂದ ಬರುವ ರೋಗಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಅಯೋಡಿನ್‌ ಕುರಿತು ಮಾಹಿತಿ

ಈ ವೇಳೆ ಶಾಲಾ ಮಕ್ಕಳಿಗೆ ಮತ್ತು ಆಶಾ ಕಾರ್ಯರ್ತೆಯರಿಗೆ ಸ್ಥಳೀಯ ಸಾರ್ವಜನಿಕರಿಗೆ ಅಯೋಡಿನ್ ಅವಶ್ಯಕತೆ ಬಗ್ಗೆ ಮತ್ತು ಇಲಿ ಜ್ವರ ನಿಯಂತ್ರಣದ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ಹರೀಶ್ ,ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ,ಮುಖ್ಯೋಪಾದ್ಯಾಯನಿ ಕೃಷ್ಣಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗೂ ಶಾಲಾ ಬೋಧಕ ಮತ್ತು ಬೋಧಕೇತರ ವರ್ಗದವರು, ಆಶಾ ಕಾರ್ಯರ್ತೆಯರು, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌