ಈಜುಲು ಹೋದ ಬಾಲಕ ನೀರು ಪಾಲು

KannadaprabhaNewsNetwork |  
Published : Oct 13, 2023, 12:15 AM IST

ಸಾರಾಂಶ

ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಹಲಸೂರು ಗ್ರಾಮದ ಚೆನ್ನೇಗೌಡನ ಕೆರೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲಾಗಿದ್ದಾನೆ.

ಕನಕಪುರ: ತಾಲೂಕಿನ ಸಾತನೂರು ಹೋಬಳಿಯ ಹಲಸೂರು ಗ್ರಾಮದ ಚೆನ್ನೇಗೌಡನ ಕೆರೆಯಲ್ಲಿ ಈಜಲು ಹೋದ ಬಾಲಕ ನೀರು ಪಾಲಾಗಿದ್ದಾನೆ. ದರ್ಶನ್(12) ಮೃತ ಬಾಲಕ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಾಣಸಮುದ್ರದ ದರ್ಶನ್‌ ಸಾತನೂರಿನ ಹಲಸೂರು ಗ್ರಾಮದ ತಮ್ಮ ಅಜ್ಜಿ ಶಿವಮ್ಮ ಮನೆಯಲ್ಲಿದ್ದು ವ್ಯಾಸಂಗ ಮಾಡುತ್ತಿದ್ದನು. ದಸರಾ ರಜೆ ಇದ್ದ ಕಾರಣ ಬುಧವಾರ ತನ್ನ ಸ್ನೇಹಿತರ ಜೊತೆ ಚೆನ್ನಮ್ಮನಕೆರೆಗೆ ಈಜಲು ಹೋದಾಗ 15ರಿಂದ 25ಅಡಿಯಷ್ಟು ನೀರು ಇದ್ದದ್ದರಿಂದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ