ಆತಿಥ್ಯ ನೀಡುವುದರಲ್ಲಿ ಬಂಟರ ಸಮುದಾಯ ಪ್ರಸಿದ್ಧಿ

KannadaprabhaNewsNetwork |  
Published : Jun 17, 2025, 04:01 AM ISTUpdated : Jun 17, 2025, 04:02 AM IST
ಲಕ್ಷ್ಮೀ ಹೆಬ್ಬಾಳಕರ್‌ | Kannada Prabha

ಸಾರಾಂಶ

ಯಾವುದೇ ಭೇದ ಭಾವವಿಲ್ಲದೇ ಆತಿಥ್ಯ ನೀಡುವುದರಲ್ಲಿ ಬಂಟರ ಸಮುದಾಯ ಹೆಸರು ವಾಸಿ. ಈ ಸಮುದಾಯದವರು ಅತ್ಯಂತ ಶ್ರಮಜೀವಿಗಳು, ಅತಿಥಿ ದೇವೋಭವ ಎನ್ನುವ ಹಾಗೆ ಅತಿಥಿಗಳನ್ನು ದೇವರ ರೀತಿ ಭಾವಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಯಾವುದೇ ಭೇದ ಭಾವವಿಲ್ಲದೇ ಆತಿಥ್ಯ ನೀಡುವುದರಲ್ಲಿ ಬಂಟರ ಸಮುದಾಯ ಹೆಸರು ವಾಸಿ. ಈ ಸಮುದಾಯದವರು ಅತ್ಯಂತ ಶ್ರಮಜೀವಿಗಳು, ಅತಿಥಿ ದೇವೋಭವ ಎನ್ನುವ ಹಾಗೆ ಅತಿಥಿಗಳನ್ನು ದೇವರ ರೀತಿ ಭಾವಿಸುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ನಗರದ ಬಂಟರ ಯಾನೆ ನಾಡವರ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 4ರ ನ್ಯೂ ಗಾಂಧಿ ನಗರದಲ್ಲಿ ನವೀಕೃತಗೊಂಡಿರುವ ಬಂಟರ ಭವನದ ಉದ್ಘಾಟನಾ ಸಮಾರಂಭ ಹಾಗೂ ಮಾಣಿಕ್ಯ ಸಂಭ್ರಮದಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಮನೆಬಿಟ್ಟು ಹೋಗಿ ಸ್ವಂತ ಕಾಲಮೇಲೆ ನಿಲ್ಲುವ ಸ್ವಾಭಿಮಾನಿಗಳು. ದೇಶದ ವಿವಿಧೆಡೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ವಿವರಿಸಿದರು.ಸಂಸ್ಕೃತಿ, ಕಲೆ‌ಯಲ್ಲಿ ನಿಮ್ಮ‌ ಸಮಾಜಕ್ಕೆ ಇರುವ ಆಸಕ್ತಿ ನೋಡಿ ಮಂತ್ರಮುಗ್ಧಳಾಗಿದ್ದೇನೆ. ಈ ಸಮುದಾಯದವರು ನಿಸ್ವಾರ್ಥಗಳು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ. ಉಡುಪಿ ಶ್ರೀಕೃಷ್ಣ, ಕಟೀಲು ದುರ್ಗಾಪರಮೇಶ್ವರಿ, ಕಾಪು ಮಾರಿಗುಡಿ ದೇವರ ದರ್ಶನ ಭಾಗ್ಯ ನನಗೆ ಸಿಗುತ್ತಿದೆ. ಭೂತಾರಾಧನೆ ಸೇರಿದಂತೆ ಕರಾವಳಿಯ ಸಂಸ್ಕೃತಿ ಬಂಟರ ಸಮುದಾಯದವರಿಂದ ಶ್ರೀಮಂತವಾಗಿದೆ ಎಂದು ಶ್ಲಾಘಿಸಿದರು.ಭಗವಂತನ ಕೃಪಾಶೀರ್ವಾದ ನಿಮ್ಮ‌ ಮೇಲಿದೆ. ಯಾವುದೇ ಊರಿಗೆ ಹೋದರೂ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನೋಡುತ್ತೀರಿ. ಎಲ್ಲರನ್ನು ಒಟ್ಟಿಗೆ ಕರೆದೊಯ್ಯುತ್ತೀರಿ. ಇದು ಬಂಟರ ಸಮುದಾಯದವರಿಗೆ ಇರುವ ಕಲೆ ಎಂದರು.ಕಾರ್ಯಕ್ರಮದಲ್ಲಿ ಸಿಎಂಡಿ‌ ಆ್ಯಂಡ್‌ ಎಂಆರ್ ಜಿ ಗ್ರೂಪ್‌ನ ಡಾ.ಕೆ ಪ್ರಕಾಶ ಶೆಟ್ಟಿ, ಶಾಸಕರಾದ ಆಸಿಫ್ ಸೇಠ್, ಉದ್ಯಮಿಗಳಾದ ಜಯಶೀಲ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ ಬೋಜ್ ಶೆಟ್ಟಿ, ಸಂಗೀತ ನಿರ್ದೇಶಕರಾದ ಗುರುಕಿರಣ್, ಡಾ.ಮಹಾಬಳೇಶ್ ಶೆಟ್ಟಿ, ಗೌರವಾಧ್ಯಕ್ಷರಾದ ವಿಠ್ಠಲ ಹೆಗ್ಡೆ, ಅಧ್ಯಕ್ಷರಾದ ವಿಜಯ ಶೆಟ್ಟಿ, ಶ್ರೀಧರ್ ಶೆಟ್ಟಿ, ಹಸ್ತ ಶೆಟ್ಟಿ, ಪ್ರಸನ್ನ ಶೆಟ್ಟಿ, ಚೇತನ ಶೆಟ್ಟಿ, ಕರುಣಾಕರ್ ಶೆಟ್ಟಿ, ಪ್ರಣಯ ಶೆಟ್ಟಿ ಬಂಟ ಸಮುದಾಯದ ಅನೇಕರು ಉಪಸ್ಥಿತರಿದ್ದರು.ಶಾಂತಿ ಗ್ರ್ಯಾಂಡ್‌ ಹೋಟೆಲ್‌ನ ಮಾಲೀಕರಾದ ಸುರೇಶ ಶೆಟ್ಟಿಯವರಿಂದ ಸಂಗೀತ ಗಾಯನ ಜನಮನ ಸೂರೆಗೊಂಡಿತು. ಕುಮಾರಿ ಸಾನ್ವಿ ಸುರೇಶ ಶೆಟ್ಟಿಯವರಿಂದ ನಡೆದ ಡ್ಯಾನ್ಸ್‌ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.ಬಂಟರ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇಡೀ ವಿಶ್ವದ ಹೃದಯವನ್ನು ಗೆದ್ದಿದ್ದೀರಾ. ದೇಶಕ್ಕೆ ರಾಜ್ಯಕ್ಕೆ ಬಂಟರು ಗುರುತರ ಕಾಣಿಕೆ ನೀಡಿದ್ದಾರೆ.‌ ಸ್ವಾತಂತ್ರ್ಯ ಹೋರಾಟಕ್ಕೆ, ಕಲೆ‌, ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಹೃದಯ ಶ್ರೀಮಂತಿಕೆ ಮರೆವ, ಆತಿಥ್ಯಕ್ಕೆ ಹೆಸರಾದ ಸಮಾಜ ನಿಮ್ಮದು. ಹೋಟೆಲ್ ಉದ್ಯಮ‌ವನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿ ಬಂಟರು ನಿಸ್ಸೀಮರು.

-ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ