ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಕಮ್ಯೂನಿಸ್ಟ್ ಪಕ್ಷವನ್ನು ಇಲ್ಲವಂತಾಗಿಸುವ ಹುನ್ನಾರ ನಿರಂತರವಾಗಿ ನಡೆಯುತ್ತಿದೆ. ಆದರೆ ಅದು ಯಾರಿಂದಲೂ ಸಾಧ್ಯವಿಲ್ಲ. ಬಡತನ, ತಾರತಮ್ಯ, ಭ್ರಷ್ಟಾಚಾರ, ಕೋಮುವಾದ ನಾಶವಾಗುವವರೆಗೂ ಕಮ್ಯೂನಿಸಂ ಇದೇ ಇರುತ್ತದೆ ಎಂದು ಸಿಪಿಐಎಂ ಮುಖಂಡರು ತಿಳಿಸಿದರು.ರೈತ ಹುತಾತ್ಮರ ಸ್ಮರಣಾರ್ಥ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ರ್‍ಯಾಲಿ ನಡೆಸಿದ ಸಿಪಿಎಂ ಕಾರ್ಯಕರ್ತರು ನಂತರ ಪ್ರವಾಸಿ ಮಂದಿರದ ಬಳಿ ಇರುವ ಹುತಾತ್ಮರ ಸ್ಮಾರಕಗಳಿಗೆ ನಮನ ಸಲ್ಲಿಸಿದರು.
ಗುಂಡಿಗೆ ಬಲಿಯಾದ ರೈತರುಬಳಿಕ ಮಾತನಾಡಿದ ಮುಖಂಡರು 1980 ಆಗಸ್ಟ್ 7 ರಂದು ನಡೆದ ನರಗುಂದ, ನವಲಗುಂದ ರೈತ ಹೋರಾಟವನ್ನು ಬೆಂಬಲಿಸಿ ಪಟ್ಟಣದ ಕಮ್ಯೂನಿಸ್ಟ್ ನಾಯಕರ ನೇತೃತ್ವದಲ್ಲಿ ನಡೆದ ರೈತರ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ತಾಲೂಕಿನ ರೈತ ದದ್ದಿಮಪ್ಪ, ಆದಿನಾರಾಯಣರೆಡ್ಡಿ ಹುತಾತ್ಮರಾಗಿ 45 ವರ್ಷ ಕಳೆದಿದೆ. ಹೋರಾಟಗಾರರನ್ನು ಬಲಿತೆಗೆದುಕೊಂಡ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್, ಬಿಜೆಪಿ ಒಂದೇಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎಂದಿಗೂ ಬಡಜನರ ಪರವಾಗಿಲ್ಲ ಎಂಬುದು ಸ್ಪಷ್ಟವಾಗಿದೆ, ಬಡವರ, ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟಗಳ ಮೂಲಕ ಜನರ ಸಮಸ್ಯೆಗಳ ಬಗೆಹರಿಸುವ ಏಕೈಕ ಪಕ್ಷ ಸಿಪಿಎಂ. ಆದರೆ ಇಲ್ಲಿ ಪಕ್ಷವನ್ನು ಮುಗಿಸುವಂತಹ ಹುನ್ನಾರಗಳು ನಡೆಯುತ್ತಿವೆಯಾದರೂ ಅದು ಅವರಿಂದ ಸಾಧ್ಯವಾಗ ಕೆಲಸ ಎಂದ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎನ್. ರಘುರಾಮರೆಡ್ಡಿ, ಚೆನ್ನರಾಯಪ್ಪ, ಎಂ.ಪಿ.ಮುನಿವೆಂಕಟಪ್ಪ, ಅಶ್ವತ್ಥಪ್ಪ, ಡಿ.ಟಿ. ಮುನಿಸ್ವಾಮಿ, ಮುಸ್ತಾಫ, ಈಶ್ವರರೆಡ್ಡಿ, ರಫೀಕ್, ರೈತ ಮುಖಂಡ ಟಿ.ಲಕ್ಷ್ಮೀನಾರಾಯಣರೆಡ್ಡಿ, ಜಿ. ಕೃಷ್ಣಪ್ಪ, ಇಮ್ರಾನ್, ನರಸಿಂಹರೆಡ್ಡಿ, ವೆಂಕಟರಾಮರೆಡ್ಡಿ ಹಾಜರಿದ್ದರು.