ಬರ ಪರಿಹಾರ ಕೈಗೊಳ್ಳದ ಕಾಂಗ್ರೆಸ್‌ ಸರ್ಕಾರ

KannadaprabhaNewsNetwork |  
Published : Apr 29, 2024, 01:32 AM IST
ಬರ ಪರಿಹಾರ ಕೈಗೊಳ್ಳದ ಕಾಂಗ್ರೆಸ್‌ ಸರ್ಕಾರ | Kannada Prabha

ಸಾರಾಂಶ

ರಾಜ್ಯದಲ್ಲಿ ಜನ, ಜಾನುವಾರು ನೀರು, ಮೇವಿಲ್ಲದೇ ಪರದಾಡುತ್ತಿದ್ದು, ಜನರು ಗುಳೇ ಹೊರಟಿದ್ದರೂ ಬರ ಎದುರಿಸುವ ಯಾವುದೇ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಮಾಜಿ ಸಚಿವ, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯದಲ್ಲಿ ಜನ, ಜಾನುವಾರು ನೀರು, ಮೇವಿಲ್ಲದೇ ಪರದಾಡುತ್ತಿದ್ದು, ಜನರು ಗುಳೇ ಹೊರಟಿದ್ದರೂ ಬರ ಎದುರಿಸುವ ಯಾವುದೇ ಕೆಲಸವನ್ನೂ ಕಾಂಗ್ರೆಸ್ ಸರ್ಕಾರ ಮಾಡಿಲ್ಲ ಎಂದು ಮಾಜಿ ಸಚಿವ, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ದೂರಿದ್ದಾರೆ.

ನಗರದಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಂಪೂರ್ಣ ನಿಷ್ಕ್ರಯವಾಗಿದ್ದು, ಕೋವಿಡ್‌ನಿಂದಾಗಿ ಇಡೀ ವಿಶ್ವವೇ ತಲ್ಲಣಿಸಿತ್ತು. ಕೋಟ್ಯಾಂತರ ಜನರು ವಿಶ್ವಾದ್ಯಂತ ಪ್ರಾಣ ಕಳೆದುಕೊಂಡರು. ಆದರೆ, ಮೋದಿ ದೂರದೃಷ್ಟಿಯಿಂದ ದೊಡ್ಡ ಪ್ರಮಾಣದ ಸಾವು, ನೋವು ಸಂಭವಿಸಿಲ್ಲ ಎಂದರು.

ದೇಶದ 140 ಕೋಟಿ ಜನರ ಜೀವ ರಕ್ಷಣೆ ಮಾಡಿದ್ದು ನರೇಂದ್ರ ಮೋದಿ. ಇಂತಹ ಮೋದಿಯವರ ಋಣ ತೀರಿಸುವ ಅವಕಾಶ ಬಂದಿದೆ. ಪ್ರತಿಯೊಬ್ಬ ಮತದಾರರೂ ತಮ್ಮ ಅಮೂಲ್ಯ ಮತ ನೀಡುವ ಮೂಲಕ ನರೇಂದ್ರ ಮೋದಿ ಋಣ ತೀರಿಸಬೇಕು ಎಂದು ಅವರು ಮನವಿ ಮಾಡಿದರು.

ದೇಶದ ಜನರ ಹಿತಕ್ಕಾಗಿ ಪ್ರತಿಯೊಬ್ಬ ಮತದಾರರೂ ಬಿಜೆಪಿಗೆ ಮತ ನೀಡಬೇಕು. ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸಲು ದಾವಣಗೆರೆಯಲ್ಲಿ ತಮಗೆ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿಯವರಿಗೆ ಮತ ನೀಡಿ, ಭಾರೀ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಮೋದಿ ನಾರಿ ಶಕ್ತಿಯನ್ನು ಸದೃಢಗೊಳಿಸಲು ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ. ಆದರೆ, ಕಾಂಗ್ರೆಸ್ಸಿನವರು ಅದೇ ನಾರಿ ಶಕ್ತಿಯನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ.

- ಗಾಯತ್ರಿ ಸಿದ್ದೇಶ್ವರ, ದಾವಣಗೆರೆ ಬಿಜೆಪಿ ಅಭ್ಯರ್ಥಿ. ಸುಭದ್ರ ಸರ್ಕಾರವಿದ್ದಾಗ ಜಗತ್ತು ಸಹ ನಂಬುತ್ತದೆ. ವಿಶ್ವದೆಲ್ಲೆಡೆ ಭಾರತಗ ಗೌರವ, ಜಯಕಾರ ಕೇಳಿ ಬರುತ್ತಿದೆಯೋ ಇಲ್ಲವೋ? ಇದು ಮೋದಿ ಮಾಡಿದ್ದಲ್ಲ. ಇದು ನಿಮ್ಮ ಮತ ಮಾಡಿದ್ದು. ನಿಮ್ಮ ಮತದ ತಾಕತ್ತನ್ನು 10 ವರ್ಷದಿಂದ ದೇಶದ ಎಲ್ಲಾ ಜನರು ನೋಡಿದ್ದಾರೆ. ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ ಇಡೀ ರಾಜ್ಯದ ಆಶೀರ್ವಾದ ಕೇಳಲು ಬಂದಿರುವೆ. ನಿಮ್ಮ ಆಶೀರ್ವಾದದ ಯಾವುದೇ ಕೊರತೆ ಇಲ್ಲವೆಂಬ ವಿಶ್ವಾಸವು ನನಗಿದೆ.

- ನರೇಂದ್ರ ಮೋದಿ, ಪ್ರಧಾನ ಮಂತ್ರಿ. ಪ್ರಧಾನಿ ನರೇಂದ್ರ ಮೋದಿಗೆ ಶ್ರೀರಾಮನ ಬೆಳ್ಳಿ ಮೂರ್ತಿ ಕಾಣಿಕೆ ನೀಡಿ, ಗೌರವಿಸಲಾಯಿತು. ಶ್ರೀರಾಮ ಮೂರ್ತಿ ನೆನಪಿನ ಕಾಣಿಕೆಯನ್ನು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ಬಳಿಕ ದಾವಣಗೆರೆಗೆ ಆಗಮಿಸುತ್ತಿರುವ ಪ್ರಧಾನಿಗೆ ಶ್ರೀರಾಮನ ಮೂರ್ತಿ ಕಾಣಿಕೆ ನೀಡಿ, ಸಂಸದ ಜಿಎಂ ಸಿದ್ದೇಶ್ವರ, ಸಹೋದರರು, ಕುಟುಂಬ ವರ್ಗ ಸನ್ಮಾನಿಸಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!