ಕನ್ನಡಪ್ರಭ ವಾರ್ತೆ ಇಂಡಿ
ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ, ತಾಲೂಕು ಆಡಳಿತ, ನಗರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರ ಇಂಡಿ ಆಶ್ರಯದಲ್ಲಿ ನಡೆದ ನೂತನ ನಗರಸಭೆ ಕಾರ್ಯಾಲಯ ಹಾಗೂ ನಗರ ಯೋಜನಾ ಪ್ರಾಧಿಕಾರ ಇಂಡಿ ಕಚೇರಿಗಳ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಿಎಂ ಸಿದ್ದರಾಮಯ್ಯನವರು ಸಚಿವರಗಿಂತ ಹೆಚ್ಚು ಪ್ರೀತಿ ಶಾಸಕರಿಗೆ ಮಾಡುತ್ತಾರೆ. ಯಶವಂತರಾಯಗೌಡರು ತಂದಿರುವ ಕೆಲಸಗಳು ನಿಲ್ಲಿಸಲಾರದೇ ತ್ವರಿತವಾಗಿ ಮಾಡಿಕೊಡುವಷ್ಟು ವಿಶ್ವಾಸ ಗಳಿಸಿದ್ದಾರೆ. ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ರಾಜ್ಯದ ವಿವಿಧ ತಾಲೂಕಿನ ಹಲವಾರು ಜನರು ಕಷ್ಟಪಡುತ್ತಿದ್ದಾರೆ. ಆದರೆ ಶಾಸಕ ಪಾಟೀಲರು ಹೊಂದಿರುವ ಕ್ಷೇತ್ರದ ಮೇಲಿನ ಅಭಿವೃದ್ಧಿ ಕಳಕಳಿಯಿಂದ ಸಿಎಂ ಮೇಲೆ ಒತ್ತಡ ಮಾಡಿದ್ದರಿಂದ ಇಂದು ಇಂಡಿ ಪುರಸಭೆ ನಗರಸಭೆನ್ನಾಗಿ ಮೇಲ್ದರ್ಜೆಗೆ ಏರಿದೆ ಎಂದರು.ತಾಲೂಕು ಕ್ರೀಡಾಂಗಣಕ್ಕೆ ಡಾ.ಅಂಬೇಡ್ಕರ್ ಹೆಸರು ನಾಮಕರಣ ಮಾಡಿದ್ದು ಸಂತಸವಾಗಿದೆ. ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕಾಗಿ ಕೊಡುಗೆ ನೀಡಿದ್ದಾರೆ ಎಂದು ಕೆಲವರು ಹೇಳುತ್ತಿರುವುದು ಸರಿಯಲ್ಲ. ಅಂಬೇಡ್ಕರ್ ಇಡೀ ದೇಶದ ಸಮಸ್ತ ಜನರ ಅಭ್ಯುದಯಕ್ಕಾಗಿ ಸಂವಿಧಾನ ಬರೆದಿದ್ದಾರೆ. ರಾಜನ ಮಗ ರಾಜ, ಡಿಸಿ ಮಗ ಡಿಸಿ ಆಗುವ ಕಾಲವೊಂದಿತ್ತು. ಆದರೆ ಡಾ.ಅಂಬೇಡ್ಕರ್ ಬರೆದ ಸಂವಿಧಾನದಿಂದ ಬಡವನ ಮಗನೂ ಸಹ ಡಿಸಿ ಆಗಬಹುದು ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದರು.
ಶಾಸಕ ವಿಠಲ ಕಟಕದೊಂಡ ಮಾತನಾಡಿ, ಇಂಡಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಈ ದಿನ ಸುವರ್ಣಾಕ್ಷರಗಳಿಂದ ಬರೆದಿಡುವ ದಿನವಾಗಿದೆ. ಶಾಸಕ ಯಶವಂತರಾಯಗೌಡರು ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಎಲ್ಲವನ್ನೂ ಮಾಡಿದ್ದಾರೆ. ಜಿಲ್ಲೆಯಲ್ಲಿ 24 ಗಂಟೆ ಕುಡಿಯುವ ನೀರು ಸರಬರಾಜು ಮಾಡುವ ನಗರ ಇಂಡಿ, ಇಂಡಿ ಜಿಲ್ಲೆಯನ್ನಾಗಿ ಮಾಡುವುದು ಒಂದೇ ಬಾಕಿ ಇದೆ. ಮುಂದಿನ ದಿನದಲ್ಲಿ ಅದನ್ನು ಮಾಡುತ್ತಾರೆ ಎಂಬ ಭರವಸೆ ಇದೆ. ಅವರ ಹಿಂದೆ ನಾನೂ ಇರುತ್ತೇನೆ ಎಂದರು.
ನಗರದ ಭವಿಷ್ಯ ರೂಪಿಸುವ ಸರ್ಕಾರದ ಯೋಜನೆಗಳು ಅನುಷ್ಠಾನಗೊಳಿಸುವ ಸಂಸ್ಥೆ ಮೇಲ್ದರ್ಜೆಗೆ ಏರಿದ ಸುದಿನ ಇಂದು. ಸಿಎಂ ಸಿದ್ದರಾಮಯ್ಯನವರ 13 ವರ್ಷಗ ಆಡಳಿತದಲ್ಲಿ ಇಂಡಿ ಕ್ಷೇತ್ರದ ಅಭಿವೃದ್ಧಿಗೆ ಬೇಡಿದಷ್ಟು ಅನುದಾನ ನೀಡಿದ್ದಾರೆ. ರಾಜ್ಯದ ಕೊನೆಯ ತಾಲೂಕು ಆಗಿದ್ದರಿಂದ ರಾಜ್ಯದ ಜನ ಇಂಡಿಯ ಕಡೆಗೆ ತಿರುಗಿ ನೋಡುವಂತೆ ಅಭಿವೃದ್ಧಿ ಪಡಿಸಲಾಗುತ್ತದೆ. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಿಂದ ಶೇ.79 ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.
ಕೃಷಿ ಎಡಿ ಮಹಾದೇವಪ್ಪ ಏವೂರ, ಎಚ್.ಎಸ್.ಪಾಟೀಲ, ಎಇಇ ಶಿವಾಜಿ ಬನಸೋಡೆ, ಎಸ್.ಆರ್.ಮೇಂಡೆಗಾರ, ಬಸವರಾಜ ರಾವೂರ, ಗೀತಾ ಗುತ್ತರಗಿಮಠ, ಭೀಮಾಶಂಕ ಮೂರಮನ, ಶೇಖರ ಶಿವಶರಣ, ಗಣಪತಿ ಬಾಣಿಕೋಲ, ರವಿ ಹೊಸಮನಿ, ಸೋಮಶೇಖರ ಮ್ಯಾಕೇರಿ, ತುಕಾರಾಮ ಗುನ್ನಾಪೂರ, ಮಲ್ಲು ಮಡ್ಡಿಮನಿ, ಧರ್ಮು ಸಾಲೋಟಗಿ, ಸದಾಶಿವ ಆಲಮೇಲ, ಶೆಟ್ಟು ಶಿವಪೂರ, ಅವಿನಾಶ ಬಗಲಿ, ಸತೀಶ ಕುಂಬಾರ, ಅತೀಕ ಮೋಮಿನ, ಮುಸ್ತಾಕ ಇಂಡಿಕರ, ರಾಯಿಸ್ ಅಷ್ಟೇಕರ, ಧರ್ಮರಾಜ ವಾಲಿಕಾರ, ಸಂತೋಷ ಪರಸೇನವರ, ಕಲ್ಲಪ್ಪ ಅಂಜುಟಗಿ, ರಾಜು ಹಳ್ಳದಮನಿ, ದತ್ತು ಕೋಳಿ, ಸುಭಾಷ ಬಾಬರ, ನಿರ್ಮಲಾ ತಳಕೇರಿ, ನಾಗೇಂದ್ರ ಮೇತ್ರಿ, ಯಲ್ಲಪ್ಪ ಬಂಡೇನವರ, ನಾಗೇಶ ತಳಕೇರಿ ಮೊದಲಾದವರು ಪಾಲ್ಗೊಂಡಿದ್ದರು.
ಇಂಡಿ ಕ್ರೀಡಾಂಗಣಕ್ಕೆ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಕ್ರೀಡಾಂಗಣ ನಾಮಕರಣ, ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಇಂಡಿ ನಗರದ ವಿವಿಧ ವಾರ್ಡ್‌ಗಳ ರಸ್ತೆ ಸುಧಾರಣೆ, ಇಂಡಿ ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ಕಟ್ಟಡ, ಇಂಡಿ ತಾಲೂಕಿನ ಹೊರ್ತಿ ಗ್ರಾಮದ ಕೆರೆ ದುರಸ್ತಿ ಹಾಗೂ ಸುಧಾರಣೆ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಇಂಡಿ ನಗರದಲ್ಲಿ ಸಾಹಿತ್ಯ ಭವನ, ಡಿಜಿಟಲ್ ಗ್ರಂಥಾಲಯ ಸೇರಿ ಸುಮಾರು ₹20.15 ಕೋಟಿ ಅನುದಾನದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು.