ಕನ್ನಡ ಬೆಳವಣಿಗೆಗೆ ಸಂಘಟನೆಗಳ ಕೊಡುಗೆ ಅಪಾರ

KannadaprabhaNewsNetwork |  
Published : Dec 01, 2025, 01:00 AM IST
ಸಿಕೆಬಿ-1  ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು  | Kannada Prabha

ಸಾರಾಂಶ

ರಾಜ್ಯೋತ್ಸವ ಅಪ್ಪು ಹೆಸರಲ್ಲಿ ಮಾಡುತ್ತಿದ್ದಾರೆ. ಇದು ಸಂತೋಷ, ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ವರ್ಷ ಕಾಲ ಕರ್ನಾಟಕಕ್ಕೆ ಸೂತಕ ಇತ್ತು. ಕನ್ನಡದ ಬೆಳವಣಿಗೆ ಪುಸ್ತಕದಲ್ಲಿ ಇಲ್ಲ, ಜನರಲ್ಲಿದೆ. ಜನಪದದಲ್ಲಿದೆ. ವಚನ, ಭಕ್ತಿಪಂಥ, ತತ್ವಪದ, ಏಕೀಕರಣ, ರಾಷ್ಟ್ರೀಯ ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ಭಾಷೆ ಬೆಳೆದಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಾಡು ನುಡಿ ಭಾಷೆ ಸಾಹಿತ್ಯದ ಬೆಳವಣಿಗೆಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಮಂಚನಬಲೆ ಎಂ.ಶ್ರೀನಿವಾಸ್ ತಿಳಿಸಿದರು. ನಗರದ ಕನ್ನಡ ಭವನದಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆಸಿಕೊಟ್ಟ ಅಪ್ಪು ಅಜರಾಮರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೈಸೂರು ಮಹಾರಾಜರು, ಸರ್ಕಾರ ಮತ್ತು ಸಾಹಿತ್ಯ ಪರಿಷತ್ತಿನ ಜತೆ ಜತೆಗೆ ಸಂಘ ಸಂಸ್ಥೆಗಳ ಬದ್ಧತೆ, ಹೋರಾಟದ ಫಲವಾಗಿ ನಾಡಿನ ರಕ್ಷಣೆ ಜತೆ ಸಾಹಿತ್ಯ ಸಂಸ್ಕೃತಿ ಉಳಿದು ಬೆಳೆಯಲು ಸಾಧ್ಯವಾಗಿದೆ ಎಂದರು.

ಮನೆಯಲ್ಲಿ ಕನ್ನಡ ಮಾತನಾಡಿ

ದಸಂಸ ರಾಜ್ಯ ಸಂಚಾಲಕ ಕೆ.ಸಿ. ರಾಜಾಕಾಂತ್ ಮಾತನಾಡಿ, ಕಾವೇರಿ ಚಳವಳಿಗೆ ಬಯಲು ಸೀಮೆಯ ಜನರೂ ಸ್ಪಂದಿಸಿದ್ದಾರೆ. ಆದರೆ ನಮ್ಮ ಸಮಸ್ಯೆ ಕಾವೇರಿ ಕಣಿವೆಯ ಜನತೆಗೆ ಅರ್ಥ ಆಗುವುದಿಲ್ಲ ಯಾಕೆ. ನಮ್ಮಂತೆ ಎಲ್ಲರೂ ಕೂಡಿ ದನಿಯೆತ್ತಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಕೋಡಿರಂಗಪ್ಪ ಮಾತನಾಡಿ, ರಾಜ್ಯೋತ್ಸವ ಅಪ್ಪು ಹೆಸರಲ್ಲಿ ಮಾಡುತ್ತಿದ್ದಾರೆ. ಇದು ಸಂತೋಷ, ಅವರು ಅಕಾಲಿಕ ಮರಣಕ್ಕೆ ತುತ್ತಾದಾಗ ವರ್ಷ ಕಾಲ ಕರ್ನಾಟಕಕ್ಕೆ ಸೂತಕ ಇತ್ತು. ಕನ್ನಡದ ಬೆಳವಣಿಗೆ ಪುಸ್ತಕದಲ್ಲಿ ಇಲ್ಲ, ಜನರಲ್ಲಿದೆ. ಜನಪದದಲ್ಲಿದೆ. ವಚನ, ಭಕ್ತಿಪಂಥ, ತತ್ವಪದ, ಏಕೀಕರಣ, ರಾಷ್ಟ್ರೀಯ ಹೋರಾಟ ಹೀಗೆ ಅನೇಕ ಮಜಲುಗಳಲ್ಲಿ ಭಾಷೆ ಬೆಳೆದಿದೆ ಎಂದು ಹೇಳಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕರ್ನಾಟಕ ರಕ್ಷಣಾ ವೇದಿಕೆಯ 3ನೇ ವರ್ಷದ ಕನ್ನಡ ರಾಜ್ಯೋತ್ಸವದಲ್ಲಿ ವಿವಿಧ ಕ್ಷೇತ್ರದ ೧೧ ಮಂದಿಗೆ 10 ಸಾವಿರ ನಗದು, ಸ್ಮರಣಿಕೆ,ಮೈಸೂರು ಪೇಟ ಹಾರ ತುರಾಯಿ ಸ್ಮರಣಿಕೆಯೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಮಾಜಿಕ ಕ್ಷೇತ್ರ-ಟಿ ಶ್ರೀನಿವಾಸಪ್ಪ,ಕನ್ನಡ ಚಳವಳಿ-ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಚಿತ್ರಸಾಹಿತಿ- ವರದರಾಜು, ಮಾಧ್ಯಮ ಕ್ಷೇತ್ರ- ವಿ.ರವಿಕುಮಾರ್,ಎನ್.ಎಂ.ನಾರಾಯಣಸ್ವಾಮಿ,ಉನ್ನತ ಶಿಕ್ಷಣ ಕ್ಷೇತ್ರ-ಮುನಿರಾಜು ಎಂ ಅರಿಕೆರೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ-ಎಂ.ಎನ್.ವೆAಕಟೇಶಪ್ಪ, ಹನುಮಂತಪ್ಪ, ಗಾಯತ್ರಿ ಮತ್ತು ಸಂಗೀತ ಕ್ಷೇತ್ರ- ಮಹಾಲಿಂಗಯ್ಯ ಮಠದ್, ಛಾಯಾಗ್ರಹಣ ಕ್ಷೇತ್ರ-ಶ್ರೀನಿವಾಸ್ ಅವರನ್ನು ಗೌರವಿಸಲಾಯಿತು.

ಚಿತ್ರ ಸಾಹಿತಿ ವರದರಾಜು, ಉದ್ಯಮಿ ಶ್ರೀನಿವಾಸಪ್ಪ, ಆರ್ ಪಿಐ ನ ಜಿ.ಸಿ.ವೆಂಕಟರೋಣಪ್ಪ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ ಮಾತನಾಡಿದರು ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ಸಮಿತಿ ಗೌರವಾಧ್ಯಕ್ಷ ಟಿ.ಶ್ರೀನಿವಾಸ್, ತಾಲೂಕು ಅಧ್ಯಕ್ಷ ಗಂಗಾಧರ್, ಬೊಮ್ಮನಹಳ್ಳಿ ವೇಣು, ಜಿಲ್ಲಾ ಖಜಾಂಚಿ ಜಾಣ್ ಲಕ್ಷ್ಮಣ್, ಮಾನವ ಹಕ್ಕುಗಳ ಸಂಘದ ಟಿ.ಆರ್.ಕೃಷ್ಣಪ್ಪ, ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ವಿಷಯಗಳ ಮುಂದಿಟ್ಟು ಫೆ.2ನೇ ವಾರ ಬೃಹತ್‌ ಪ್ರತಿಭಟನೆ: ಎಂ. ಗುರುಮೂರ್ತಿ ಮಾಹಿತಿ
ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟನೆ