ತಾಂತ್ರಿಕ ವಿಶ್ವವಿದ್ಯಾಲಯದ ಪಠ್ಯಕ್ರಮ ಜಗತ್ತಿಗೆ ಮಾದರಿ

KannadaprabhaNewsNetwork |  
Published : Mar 27, 2026, 01:15 AM IST
0000 | Kannada Prabha

ಸಾರಾಂಶ

ನಮ್ಮ ವಿಶ್ವವಿದ್ಯಾಲಯದ ಬೋಧನಾ ಮತ್ತು ಪಠ್ಯಕ್ರಮ ಜಗತ್ತಿಗೆ ಮಾದರಿಯಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್. ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುನಮ್ಮ ವಿಶ್ವವಿದ್ಯಾಲಯದ ಬೋಧನಾ ಮತ್ತು ಪಠ್ಯಕ್ರಮ ಜಗತ್ತಿಗೆ ಮಾದರಿಯಾಗಿದೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿದ್ಯಾಶಂಕರ್.ಎಸ್. ಅಭಿಪ್ರಾಯಪಟ್ಟಿದ್ದಾರೆ.ನಗರದ ಶಿರಾ ರಸ್ತೆಯ ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಗುರುವಾರ ಶ್ರೀದೇವಿ ಕಾಲೇಜಿನ ಆವರಣದಲ್ಲಿ ನಡೆದ ಶ್ರೀ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.ಕೃತಕ ಬುದ್ಧಿಮತ್ತೆ ಬೆಳೆದಷ್ಟು ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಎಂಬ ಆತಂಕದಲ್ಲಿ ಸತ್ಯಾಂಶವಿಲ್ಲ ಆದರೆ ಕೃತಕ ಬುದ್ಧಿಮತ್ತೆಯನ್ನು ಮೀರಿ ಬೆಳೆಯುವಂತಹ ಅವಕಾಶಗಳನ್ನು ನಾವು ಸೃಷ್ಟಿಸಿಕೊಳ್ಳದೆ ಹೋದಲ್ಲಿ ಮನುಷ್ಯ ಬೇಡವಾದ ವಸ್ತುವಾಗುತ್ತಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗಾಗಿ 2030ರ ವೇಳೆಗೆ ಕೃತಕ ಬುದ್ಧಿಮತ್ತೆಯನ್ನು ನಿಯಂತ್ರಿಸುಲು ಇಂದಿನಿಂದಲೇ ನಮ್ಮ ಪ್ರಯತ್ನಗಳನ್ನು ಮತ್ತು ಹೊಸ ಹೊಸ ಅಲೋಚನೆ, ಸಂಶೋಧನೆ ಮತ್ತು ನಾವೀನ್ಯತೆಗೆ ಹೆಚ್ಚು ಗಮನಕೊಡಬೇಕು ಎಂದರು.ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಠ್ಯಕ್ರಮ ಶೈಕ್ಷಣಿಕ ಕ್ರಮಕ್ರಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠವಾಗಿದೆ. ಹೀಗಾಗಿ ನಮಗೆ ಮಾನ್ಯತೆ ಕೊಡಿ ಎಂದು. ಸೌದಿಅರೇಬಿಯಾ, ಅಸ್ಟ್ರೇಲಿಯಾ, ದಕ್ಷಿಣ ಅಮೇರಿಕಾ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳು ಮನವಿ ಮಾಡುತ್ತಿವೆ. ಬರುವ 2030ರ ವೇಳೆಗೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಈಗ ಮಾಡುತ್ತಿರುವ ಕೆಲಸಗಳು ಇರುವುದಿಲ್ಲ ಬದಲಾಗಿ ಹೊಸ ಹೊಸ ಉದ್ಯೋಗಗಳು ಹುಟ್ಟಿಕೊಳ್ಳುತ್ತವೆ ಎಂದರು.ಜಗತ್ತಿನಲ್ಲಿ ಜ್ಞಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ವಿದ್ಯಾರ್ಥಿಗಳು ಗುರಿಯೊಂದಿಗೆ ಜ್ಞಾನ ಸಂಪಾದನೆ-ಸಾಧನೆಗೆ ಗಮನ ಕೊಡಬೇಕು. ಸಿನಿಮಾ ಹೀರೋಗಳು ನಿಮ್ಮ ಅದರ್ಶವಲ್ಲ ಬದಲಿಗೆ ನೀವೇ ಹೀರೋಗಳಾಗಿ ಸಾಧನೆ ಮಾಡಿ ಎಂದರು. ಶ್ರೀದೇವಿ ಎಂಜಿನಿಯರಿಂಗ್ ಕಾಲೇಜುನ್ನು ರಾಜ್ಯದ ಮಾದರಿ ಕಾಲೇಜನ್ನಾಗಿ ಪರಿವರ್ತಿಸುವಲ್ಲಿ, ರೂಪಿಸುವಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ತುಮಕೂರು ಸುತ್ತಮುತ್ತಲಿನ ಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದರು.ಗೌರವ ಅತಿಥಿಗಳಾಗಿ ಗ್ರೀನ್‌ವೇ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಎನ್.ಎಲ್.ಎಸ್.ಮೂರ್ತಿರವರು ಮಾತನಾಡುತ್ತಾ ಹೆಚ್ಚಿನ ಕೌಶಲ್ಯ ಬೆಳೆಸಿಕೊಂಡರೆ ಕೃತಕ ಬುದ್ಧಿಮತ್ತೆಯಿಂದ ಪಾರಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ ಎಂದರು.ಮುಖ್ಯ ಅತಿಥಿಯಾಗಿದ್ದ ಸಿ.ಎನ್.ಮಹಾಂತೇಶ್‌ ಮಾತನಾಡಿ ಯುವ ಜನಾಂಗ ಹೊಸ ಚಿಂತನೆಗೆ ಹೆಚ್ಚಿನ ಒತ್ತು ಕೊಡಬೇಕು. ಪ್ರತಿ ಮೂರು ಮತ್ತು ಆರು ತಿಂಗಳಿಗೊಮ್ಮೆ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಚಿಂತನೆ ಮಾಡುವ ಮತ್ತು ಹೊಸದನ್ನು ಕಲಿಯುವ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್‌ರವರು ಮಾತನಾಡುತ್ತಾ ತಾಂತ್ರಿಕ ಶಿಕ್ಷಣದಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಅತ್ಯುತ್ತಮ ಕೆಲಸ ಮಾಡಿದೆ. ಮಾಡುತ್ತಲೂ ಇದೆ. ಅದರ ಪಠ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ, ಬೇಡಿಕೆ ಹೆಚ್ಚಾಗುತ್ತಿರುವುದು ತಾಂತ್ರಿಕ ಶಿಕ್ಷಣದಲ್ಲಿ ದೇಶದ ಸಾಧನೆ ಬೇರೆಯವರಿಗೆ ಮಾದರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಂಬಿಕಾ ಎಂ ಹುಲಿನಾಯ್ಕರ್‌ ಎಂ.ಎಸ್.ಪಾಟೀಲ್‌, ಡಾ.ನರೇಂದ್ರ ವಿಶ್ವನಾಥ್‌, ಡಾ.ರಮಣ್ ಹುಲಿನಾಯ್ಕರ್, ಡಾ.ಲಾವಣ್ಯ, ಡಾ.ಎನ್.ಚಂದ್ರಶೇಖರ್, ಡಾ.ಕಿರಣ್.ಜಿ.ಎಂ. ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೇನುಹುಳು ದಾಳಿ ತಡೆಗೆ ಕ್ರಮ ಕೈಗೊಳ್ಳಿ
ರಾಜ್ಯ ಸರ್ಕಾರದ ನೀತಿ ಖಂಡಿಸಿ ಮಾದಿಗ ಹೋರಾಟ ಸಮಿತಿಯಿಂದ ಪ್ರತಿಭಟನೆ