ತಗ್ಗಿದ ಪುಷ್ಯ ಮಳೆ ಅಬ್ಬರ: ನಿಲ್ಲದ ಭದ್ರೆಯ ರೌದ್ರಾವತಾರ

KannadaprabhaNewsNetwork |  
Published : Aug 03, 2026, 01:15 AM IST
೦೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಡೋಬಿಹಳ್ಳದ ದಡದಲ್ಲಿರುವ ಸಂತೆ ಮಾರುಕಟ್ಟೆ ಸಂಕೀರ್ಣಕ್ಕೆ ಭದ್ರಾ ನದಿಯ ಪ್ರವಾಹದ ನೀರು ನುಗ್ಗಿರುವುದು. | Kannada Prabha

ಸಾರಾಂಶ

ಬಾಳೆಹೊನ್ನೂರು3-4 ದಿನಗಳಿಂದ ಸುರಿಯುತ್ತಿದ್ದ ಪುಷ್ಯ ಮಳೆಯ ಅಬ್ಬರ ಬಾಳೆಹೊನ್ನೂರು, ಖಾಂಡ್ಯ ಹೋಬಳಿಯ ವಿವಿಧೆಡೆಭಾನುವಾರ ಬೆಳಗ್ಗಿನ ಬಳಿಕ ಕೊಂಚ ಬಿಡುವು ನೀಡಿದೆ. ಮಳೆ ಕಡಿಮೆಯಾದರೂ ಭದ್ರಾ ನದಿಯ ರೌದ್ರಾವತಾರ ಕಡಿಮೆಯಾಗಿಲ್ಲ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

3-4 ದಿನಗಳಿಂದ ಸುರಿಯುತ್ತಿದ್ದ ಪುಷ್ಯ ಮಳೆಯ ಅಬ್ಬರ ಬಾಳೆಹೊನ್ನೂರು, ಖಾಂಡ್ಯ ಹೋಬಳಿಯ ವಿವಿಧೆಡೆಭಾನುವಾರ ಬೆಳಗ್ಗಿನ ಬಳಿಕ ಕೊಂಚ ಬಿಡುವು ನೀಡಿದೆ. ಮಳೆ ಕಡಿಮೆಯಾದರೂ ಭದ್ರಾ ನದಿಯ ರೌದ್ರಾವತಾರ ಕಡಿಮೆಯಾಗಿಲ್ಲ.

ಎಡೆಬಿಡದೆ ಸುರಿದ ಮಳೆಯಿಂದ ಪ್ರವಾಹದ ಆತಂಕ ಸೃಷ್ಟಿಯಾಗಿತ್ತು. ಶನಿವಾರವಂತೂ ಇಡೀ ದಿನ ಧಾರಾಕಾರವಾಗಿ ಬಂದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ಮುಂದುವರಿದಿತ್ತು. ಭದ್ರಾ ನದಿ ಉಗಮ ಸ್ಥಾನವಾದ ಗಂಗಾಮೂಲ, ಕುದುರೆಮುಖ, ಕಳಸ ಭಾಗದಲ್ಲೂ ಕಳೆದೆರಡು ದಿನಗಳಿಂದ ವ್ಯಾಪಕವಾಗಿ ಮಳೆಯಾಗಿದ್ದು, ಭದ್ರಾನದಿ ಹರಿವು ಅಪಾಯ ಮಟ್ಟ ಮೀರಿತ್ತು. ಭದ್ರಾ ನದಿಯ ನೀರು ಏರಿಕೆಯಾದಂತೆ ಬಾಳೆಹೊನ್ನೂರಿನ ಭದ್ರಾ ನದಿ ಅಸುಪಾಸಿನ ತೋಟ, ಗದ್ದೆಗಳಿಗೆ ಭದ್ರೆಯ ಪ್ರವಾಹದ ನೀರು ನುಗ್ಗಿದ್ದು, ಜಲಾವೃತಗೊಂಡಿದ್ದವು.

ಪಟ್ಟಣದ ಡೋಬಿ ಹಳ್ಳದ ದಂಡೆಯ ಕೃಷಿ ಉತ್ಪನ್ನ ಮಾರುಕಟ್ಟೆಯ ಸಂತೆ ಮಾರುಕಟ್ಟೆ ಸಂಕೀರ್ಣಗಳಿಗೂ ಸಹ ಪ್ರವಾಹದ ನೀರು ನುಗ್ಗಿದ್ದು, ಭಾನುವಾರ ಸಂಜೆವರೆಗೂ ನೀರು ಇಳಿದಿರಲಿಲ್ಲ. ಶನಿವಾರ ರಾತ್ರಿ ದೋಬಿಹಳ್ಳದ ಪಕ್ಕದ ಲ್ಲಿರುವ ಎನ್.ಆರ್.ಪುರ ರಸ್ತೆಯ ಹೋಟೆಲ್‌ವೊಂದಕ್ಕೆ ಸಹ ನೀರು ನುಗ್ಗಿದ್ದು, ಭಾನುವಾರ ಬೆಳಗಿನ ವೇಳೆಗೆ ನೀರು ಇಳಿಕೆಯಾಗಿತ್ತು.

ಐತಿಹಾಸಿಕ ಖಾಂಡ್ಯ ಕ್ಷೇತ್ರದಲ್ಲೂ ಮಳೆಯ ಅಬ್ಬರ ಹೆಚ್ಚಾಗಿದ್ದು, ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನದ ಸಮೀಪದ ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿತ್ತು. ಶನಿವಾರ ಕಳಸ-ಹೊರನಾಡು-ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಬೈರೇಗುಡ್ಡದ ಬಳಿಯಲ್ಲಿ ಬೃಹತ್ ಗಾತ್ರ ಮರ ರಸ್ತೆಗೆ ಉರುಳಿದೆ. ಕೆಲ ಕಾಲ ಸಂಚಾರ ಕಡಿತ ಗೊಂಡಿತ್ತು.

ಬಾಳೆಹೊನ್ನೂರು, ಖಾಂಡ್ಯ, ಮೇಗುಂದಾ ಹೋಬಳಿಯ ವಿವಿಧೆಡೆಗಳ ಮಳೆ ವಿವರ: ಹಿರೇಗದ್ದೆ ೪.೭೦, ಸಂಗಮೇಶ್ವರಪೇಟೆ ೩.೪೫, ಮೇಲ್ಪಾಲ್ ೫.೬೦, ಮಾಗುಂಡಿ ೨.೨೫, ಬಿಕ್ಕರಣೆ ೧.೬೫, ಅರಳೀಕೊಪ್ಪ ೫.೯೫, ಜಕ್ಕಣಕ್ಕಿ ೩.೧೫, ಉಜ್ಜಿನಿ ೫.೯೦, ಕರಗಣೆ ೩.೦೫, ಕೆಳಕುಡಿಗೆ ೧೧.೧೦, ಕೊಳಲೆ ೨.೨೫, ಹುಣಸೇಹಳ್ಳಿ ೨.೭೫, ಹುಯಿಗೆರೆ ೨.೬೫, ಮೇಗರಮಕ್ಕಿ ೫.೧೪, ಬನ್ನೂರು ೩.೩೨, ಕುಂಬರಕೋಡು ೩.೪೫, ಸಿಗಸೆ ೬.೬೦, ಗೇರುಬೈಲು ೪.೩೫, ಮೇಲ್ಪಾಲ್ ೭.೩೫, ನೇಮನಹಳ್ಳಿ ೩.೩೦, ಬರಗಲ್ ೩.೮೦, ಕಾರ್ಕಿ ೨.೬೦, ಕಾರ್‌ಗದ್ದೆ ೩.೨೦ ಇಂಚು ಮಳೆಯಾಗಿದೆ.೦೨ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಡೋಬಿಹಳ್ಳದ ದಡದ ಸಂತೆ ಮಾರುಕಟ್ಟೆ ಸಂಕೀರ್ಣಕ್ಕೆ ಭದ್ರಾ ನದಿ ಪ್ರವಾಹದ ನೀರು ನುಗ್ಗಿರುವುದು.೦೨ಬಿಹೆಚ್‌ಆರ್ ೨:

ಬಾಳೆಹೊನ್ನೂರಿನ ಭದ್ರಾ ನದಿಯ ದಡದಲ್ಲಿರುವ ಅಡಕೆ ತೋಟಕ್ಕೆ ಪ್ರವಾಹದ ನೀರು ನುಗ್ಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜಕೀಯ ಕ್ಷೇತ್ರದಲ್ಲೂ 2ಎ‌ ಮೀಸಲಾತಿ ನೀಡಿ
ದೇಶದ ಆರ್ಥಿಕ ಪ್ರಗತಿಗೆ ಯುವಶಕ್ತಿ ಕೊಡುಗೆ ಅಮೂಲ್ಯ: ಡಾ.ಎಂ.ಆರ್.ಹುಲಿನಾಯ್ಕರ್‌