ಕನ್ನಡ ಪ್ರಭ ಅಜ್ಜಂಪುರ ಪೌರ ಕಾರ್ಮಿಕರ ಸೇವೆ ಅವಿಸ್ಮಮರಣೀಯವಾದುದು ಎಂದು ಕೆ.ಪಿ.ಸಿ.ಸಿ ಸದಸ್ಯರಾದ ಜಿ. ನಟರಾಜು ಅಜ್ಜಂಪುರ ಪಟ್ಟಣ ಪಂಚಾಯಿತಿ ಆವರಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ದಲಿತ ಮುಖಂಡ ಹೆಬ್ಬೂರು ಶಿವಣ್ಣ ಮಾತನಾಡಿ, ಪೌರ ಕಾರ್ಮಿಕರ ಮಕ್ಕಳು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಆಶಯದಂತೆ ಉನ್ನತ ಶಿಕ್ಷಣ ಪಡೆದು ಉನ್ನತ ಅಧಿಕಾರಿ ಹುದ್ದೆ ಪಡೆಯಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಸೂದ್ ಅಹಮ್ಮದ್, ಜೋಗಿ ಪ್ರಕಾಶ್, ಮತ್ತು ತಹಸೀಲ್ದಾರ್ ಶಿವಶರಣಪ್ಪ ಕಟ್ಟೋಳಿ, ಮುಖ್ಯ ಅಧಿಕಾರಿ ಟಿ.ಜಿ ರಮೇಶ್, ನಗರ ಕಾಂಗ್ರೆಸ್ ಅಧ್ಯಕ್ಷರಾದ ತಿಪ್ಪೇಶ್ ಮಡಿವಾಳ್, ಪೌರ ಕಾರ್ಮಿಕರ ಅಧ್ಯಕ್ಷರಾದ ಎಸ್. ಗಿರೀಶ್, ಉಪಾಧ್ಯಕ್ಷರಾದ ಕೆ. ತಿಪ್ಪೆಶ್, ಸಿಬ್ಬಂದಿಗಳಾದ ವಿನೋದ್ ರಾಜ್, ಶ್ರೀನಿಧಿ, ಶ್ಯಾಂ, ರುಚಿತ್, ಪರಮೇಶ್ ಭಾಗವಹಿಸಿದ್ದರು.ಈ ವೇಳೆ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಪೌರ ಕಾರ್ಮಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೂ ಹಾಗೂ ಸಭೆಯಲ್ಲಿ ಹಾಜರಿದ್ದ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.
ಸಭೆಯ ಆರಂಭಕ್ಕೂ ಮುನ್ನ ಡಾ. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ರವರ ಭಾವ ಚಿತ್ರವನ್ನು ತೆರೆದ ವಾಹನದಲ್ಲಿ ವಾದ್ಯಗೋಷ್ಠಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಮೋಹನ್ ಜಾದವ್ ರವರು ನಿರೂಪಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.