ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಬೆಂಕಿ : ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಅಪಾರ ನಷ್ಟ

KannadaprabhaNewsNetwork |  
Published : Aug 19, 2024, 12:54 AM ISTUpdated : Aug 19, 2024, 11:15 AM IST
18ಮಾಗಡಿ1 : ಮಾಗಡಿ ಪಟ್ಟಣದ ಕಲ್ಯಾಗೇಟ್ ಸಮೀಪದ ಲಕ್ಷ್ಮೀ ನರಸಿಂಹ ರವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಬೆಂಕಿಗೆ ಆವುತಿಯಾಗಿರುವುದು. | Kannada Prabha

ಸಾರಾಂಶ

ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

  ಮಾಗಡಿ  :  ಮನೆಯಲ್ಲಿ ಚಾರ್ಜ್‌ಗೆ ಹಾಕಿದ್ದ ಎಲೆಕ್ಟಿಕ್ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿದ್ದ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಮುಂಜಾನೆ ನಡೆದಿದೆ.

ಪಟ್ಟಣದ ಕಲ್ಯಾಗೇಟ್‌ ಗವಿ ಗಂಗಾಧರೇಶ್ವರ ದೇವಸ್ಥಾನದ ಮುಖ್ಯರಸ್ತೆಯ ನಿವಾಸಿ ಲಕ್ಷ್ಮೀನರಸಿಂಹ ಭಾನುವಾರ ಮುಂಜಾನೆ 5 ಗಂಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಬೈಕ್‌ಗೆ ಚಾರ್ಜ್ ಹಾಕಿ ಮಲಗಿದ್ದಾರೆ. ಚಾರ್ಜ್ ಹಾಕಿದ ಅರ್ಧ ಗಂಟೆಗೆ ಸುಟ್ಟ ವಾಸನೆ ಬಂದಿದ್ದು, ಎದ್ದು ನೋಡುವಷ್ಟರಲ್ಲಿ ಬೆಂಕಿ ಹತ್ತಿಕೊಂಡಿತ್ತು.

ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ನೆರೆಹೊರೆಯವರ ಸಹಾಯದಿಂದ ಬೈಕ್‌ ಅನ್ನು ಮನೆಯ ಹೊರಗೆ ತಂದು ನಂದಿಸಿಲಾಯಿತು. ಈ ವೇಳೆ ಬೈಕ್ ಮಾಲೀಕರ ಕೈಕಾಲು, ಮುಖಕ್ಕೆ ಬೆಂಕಿ ತಗುಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದಿದ್ದಾರೆ. ಬೈಕ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮನೆಯಲ್ಲಿದ್ದ ವಾಶಿಂಗ್ ಮಷಿನ್, ಯುಪಿಎಸ್ ಸೇರಿದಂತೆ ಪೀಠೋಪಕರಣಗಳು ಸಂಪೂರ್ಣ ನಾಶವಾಗಿದೆ. ಲಕ್ಷ್ಮಿನರಸಿಂಹ ಅವರು ಮನೆಯಲ್ಲಿ 2 ಮಗ್ಗ ಹಾಕಿಕೊಂಡು ಬಟ್ಟೆ ನೇಯ್ದು ಜೀವನ ನಡೆಸುತ್ತಿದ್ದರು. ನೆರೆಹೊರೆಯವರು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದರಿಂದ ಬಾರಿ ಅನಾಹುತ ತಪ್ಪಿದೆ. ಬೈಕ್ ಜತೆಗೆ ಮನೆಯಲ್ಲಿದ್ದ ವಸ್ತುಗಳು ಹಾನಿಯಾಗಿ ಲಕ್ಷಾಂತರ ರು. ನಷ್ಟವಾಗಿದೆ.

ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣದ ಹೊಸಪೇಟೆಯಲ್ಲಿ ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಿದ್ದರು. ಈಗ ಎಲೆಕ್ಟ್ರಿಕ್ ಬೈಕ್ ಶೋರೂಮ್ ಅನ್ನು ಮುಚ್ಚಲಾಗಿದೆ. ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿ ಈ ರೀತಿ ಬೈಕ್ ಗಳು ಏಕಾಏಕಿ ಚಾರ್ಜ್ ಹಾಕಿರುವ ಸಮಯದಲ್ಲಿ ಸುಟ್ಟು ಹೋದರೆ ಬೈಕು ಖರೀದಿಸಿದ ಮಾಲೀಕರು ಏನಾಗಬೇಕು. ಗುಣಮಟ್ಟದ ಬ್ಯಾಟರಿಗಳನ್ನು ಅಳವಡಿಸಬೇಕು. ಈಗ ಮಾಗಡಿಯಲ್ಲಿ ಶೋ ರೂಮ್ ಕೂಡ ಇಲ್ಲದಿರುವುದರಿಂದ ನಾವು ಯಾರಿಗೆ ದೂರು ನೀಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ಬಗ್ಗೆ ಮಾಗಡಿ ಠಾಣೆಯಲ್ಲಿ ದೂರು ನೀಡಲಾಗುತ್ತದೆ ಎಂದು ಬೈಕ್ ಮಾಲೀಕ ಲಕ್ಷ್ಮೀನರಸಿಂಹ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರು-ಹೈದ್ರಾಬಾದ್‌ ಹೈಸ್ಪೀಡ್‌ ರೈಲಿಗೆ ಒಪ್ಪಿಗೆ?
ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಇನ್ಮುಂದೆ ‘ಸಮಗ್ರ ಪ್ರಗತಿ ಪತ್ರ’