ದಾಂಪತ್ಯ ಜೀವನಕ್ಕೆ ಕಾಲಿಟ್ಟ 118 ಜೋಡಿ-

KannadaprabhaNewsNetwork |  
Published : Feb 08, 2024, 01:30 AM IST
3 | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಸಮುದಾಯದ 4, ಪ.ಜಾತಿಯ 61, ಪ.ಪಂಗಡ 26, ಹಿಂದುಳಿದ ವರ್ಗದ 18, ಅಂತರಜಾತಿ 11 ಜೋಡಿ ಇದ್ದವು. ಈ ಪೈಕಿ ತಮಿಳುನಾಡಿನ 23 ಜೋಡಿ, ನಾಲ್ಕು ವಿಶೇಷ ಚೇತನರು ಮತ್ತು ಒಂದು ಜೋಡಿಯ ಮರು ಮದುವೆಯೂ ಆಯಿತು. ಹೆಸರು ನೋಂದಾಯಿಸಿಕೊಂಡ 20 ಜೋಡಿಗಳ ಪೈಕಿ, ಎರಡು ಜೋಡಿಗಳು ಗೈರು ಆಗಿದ್ದರಿಂದ 118 ಜೋಡಿಗಳಷ್ಟೇ ಮದುವೆಯಾದರು.

- ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹಕನ್ನಡಪ್ರಭ ವಾರ್ತೆ ಮೈಸೂರು

ಹನ್ನೊಂದು ಜೋಡಿ ಅಂತರ್ಜಾತಿ, ನಾಲ್ಕು ವಿಶೇಷಚೇತನರು ಮತ್ತು ಒಂದು ಮರು ಮದುವೆ ಸೇರಿ ನೂರ ಹದಿನೆಂಟು ಜೋಡಿಗಳು ಬುಧವಾರ ಸುತ್ತೂರಿನಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಸಾಮೂಹಿ ವಿವಾಹದಲ್ಲಿ ಸಂಪ್ರದಾಯ ಬದ್ಧವಾಗಿ 118 ಜೋಡಿಗಳು ಮದುವೆಯಾದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ತಿರುವನಂತಪುರ ಶಾಂತಗಿರಿ ಆಶ್ರಮದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿ, ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಅಮೇರಿಕ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಡಾ. ಅಮರನಾಥ ಗೌಡ ಸೇರಿ ಹಲವು ಗಣ್ಯರು ಈ ವೇಳೆ ಹಾಜರಿದ್ದು ಹರಸಿದರು.

ವೀರಶೈವ ಲಿಂಗಾಯತ ಸಮುದಾಯದ 4, ಪ.ಜಾತಿಯ 61, ಪ.ಪಂಗಡ 26, ಹಿಂದುಳಿದ ವರ್ಗದ 18, ಅಂತರಜಾತಿ 11 ಜೋಡಿ ಇದ್ದವು. ಈ ಪೈಕಿ ತಮಿಳುನಾಡಿನ 23 ಜೋಡಿ, ನಾಲ್ಕು ವಿಶೇಷ ಚೇತನರು ಮತ್ತು ಒಂದು ಜೋಡಿಯ ಮರು ಮದುವೆಯೂ ಆಯಿತು. ಹೆಸರು ನೋಂದಾಯಿಸಿಕೊಂಡ 20 ಜೋಡಿಗಳ ಪೈಕಿ, ಎರಡು ಜೋಡಿಗಳು ಗೈರು ಆಗಿದ್ದರಿಂದ 118 ಜೋಡಿಗಳಷ್ಟೇ ಮದುವೆಯಾದರು.

ವಧುವಿಗೆ ಮಾಂಗಲ್ಯ, ಕಾಲುಂಗರ, ಸೀರೆ, ಕುಪ್ಪಸ, ವರನಿಗೆ ಶರ್ಟು, ಪಂಚೆ, ವಲ್ಲಿಯನ್ನು ಉಚಿತವಾಗಿ ನೀಡಲಾಯಿತು. ಎಲ್ಲರಿಗೂ ಉಪಾಹಾರ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ದೂರದೂರಿಂದ ಬಂದಿದ್ದ ವಧುವರರ ಕಡೆಯವರಿಗೆ ಸೀಮಿತ ವಸತಿ ವ್ಯವಸ್ಥೆಯನ್ನು ಕೂಟ ಶ್ರೀಮಠದ ವತಿಯಿಂದ ಕಲ್ಪಿಸಲಾಗಿತ್ತು.

ಈ ವೇಳೆ ವೇದಿಕೆಯಲ್ಲಿ ಉದ್ಯಮಿ ಮೂಲಚಂದ್, ಶಾಸಕ ರಾಮಮೂರ್ತಿ, ಯುಎಸ್ಎ ಮೇರಿಲ್ಯಾಂಡ್ ನ ವಿ. ವೀರಪ್ಪನ್, ಅಮೇರಿಕಾದ ವಾಷಿಂಗ್ಟನ್ ನ ಶಿವಾನಂದ್, ಕೆಪಿಎಸ್ಸಿ ಸದಸ್ಯ ಪ್ರಭುದೇವ ಇದ್ದರು.

2000 ರಿಂದ 2023ರವರೆಗೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ 3076 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 457 ಜೋಡಿಗಳು ದಂಪತಿಗಳಾಗಿದ್ದಾರೆ. ಒಟ್ಟಾರೆ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 3533 ಜೋಡಿಗಳ ವಿವಾಹವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ