ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ನಿಧನರಾದ ಮಣಿಪಾಲದ ಪ್ರಣವ್ ಹೆಗ್ಡೆ (41) ಅವರ ಕುಟುಂಬವು ಮೃತರ ಅಂಗಾಂಗಗಳನ್ನು ದಾನ ಮಾಡಿ ಹಲವು ರೋಗಿಗಳಿಗೆ ಹೊಸ ಬದುಕು ನೀಡಿದೆ.
ಬಳಿಕ ಕುಟುಂಬದವರು ಸ್ವಇಚ್ಛೆಯಿಂದ ಮುಂದೆ ಬಂದು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆಪ್ತರನ್ನು ಕಳೆದುಕೊಂಡ ನೋವಿನ ಸಂದರ್ಭದಲ್ಲೂ ಈ ಕುಟುಂಬ ಇತರರಿಗೆ ಜೀವ ನೀಡುವ ಅಪರೂಪದ ಧೈರ್ಯ ಮತ್ತು ವಿಶಾಲ ಮನಸ್ಸನ್ನು ತೋರಿಸಿತು.
ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಬೆಂಗಳೂರು ಇವರ ಸಮನ್ವಯದೊಂದಿಗೆ ಅಂಗಾಂಗಗಳನ್ನು ಹಂಚಿಕೆ ಮಾಡಲಾಯಿತು. ಯಕೃತ್ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಕಣ್ಣಿನ ಪೊರೆಗಳನ್ನು (ಕಾರ್ನಿಯಾ) ಅತ್ತಾವರದ ಕೆಎಂಸಿಗೆ ನೀಡಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆ ಒಂದು ಮೂತ್ರಪಿಂಡವನ್ನು ಉಳಿಸಿಕೊಂಡಿತು.ಮಾಹೆ ಬೋಧನಾ ಆಸ್ಪತ್ರೆಗಳ ಸಿಇಓ ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಭರವಸೆ ಮೂಡಿಸಿದ ಪ್ರಣವ್ ಹೆಗ್ಡೆ ಅವರ ಕುಟುಂಬದ ಈ ಉದಾರ ನಡೆಗೆ ಆಸ್ಪತ್ರೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.