ಕನ್ನಡಪ್ರಭ ವಾರ್ತೆ ರಾಯಚೂರು
ಪ್ರತಿಭಟನೆ ಸ್ಥಳಕ್ಕೆ ಸಚಿವರು ಭೇಟಿ: ಕುಮಾರಿ ಅಶ್ವಿನಿ ತಮ್ಮಾರೆಡ್ಡಿ, ಭೂಮಾನಂದ, ರಾಣಿಮ್ಮ ಅತ್ಯಾಚಾರ- ಕಗ್ಗೊಲೆ ದೌರ್ಜನ್ಯ ವಿರೋಧಿ ಸಂಘಟನೆಗಳ ಒಕ್ಕೂಟ ರಾಯಚೂರು ವತಿಯಿಂದ ಹೊಕ್ರಾಣಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಸ್ಥಳಕ್ಕೆ ಸಚಿವರು, ಶಾಸಕರು ಸೇರಿ ವಿವಿಧ ಗಣ್ಯರು ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ಘಟನೆಗಳು ನಡೆದಿದ್ದು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ಗಮನಕ್ಕೆ ತರಲಾಗಿದ್ದು, ಪ್ರಕರಣಗಳ ತನಿಖೆಯವನ್ನು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.ಹದ್ದಿನಾಳ ಗ್ರಾಮಕ್ಕೆ ಸಚಿವ, ಸಂಸದ, ಶಾಸಕರ ಭೇಟಿ: ದೇವದುರ್ಗ:ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ಇತ್ತೀಚಿಗೆ ಕೊಲೆಯಾಗಿರುವ ಭೂಮಾನಂದನ ಗ್ರಾಮಕ್ಕೆ ಸಚಿವ,ಸಂಸದ,ಶಾಸಕರ ತಂಡ ಸೋಮವಾರ ಭೇಟಿ ನೀಡಿ ಕುಟುಂಬಸ್ತರಿಗೆ ಸಾಂತ್ವನ ತಿಳಿಸಿದರು. ಸಂಘಟನೆ ಮುಖಂಡರು ಹಾಗೂ ಭೂಮಾನಂದನ ಕುಟುಂಬಸ್ತರು ಮಾತನಾಡಿ, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ.ಆರೋಪಿಗಳು ಮತ್ತು ಅವರ ಬೆಂಬಲಿಗರಿಂದ ಜೀವ ಭಯವಿದೆ.ಸಾಕ್ಷಿಗಳನ್ನು ಬೆದರಿಸಲಾಗುತ್ತಿದೆ.ಠಾಣೆಯಲ್ಲಿ ಕೇವಲ 8ಜನರ ಹೆಸರಿದೆ.ಅದರಲ್ಲಿ ಮುಖ್ಯ ಪ್ರಚೋದಕ,ಕೊಲೆಗೆ ಸ್ಪೂರ್ತಿ ನೀಡಿದ ಭೀಮರಾಯ ಹದ್ದಿನಾಳರ ಬಂಧನ ಇನ್ನೂ ಆಗಿಲ್ಲ.ಅವರಿಗೆ ಬೆಂಬಲಿಸುತ್ತಿರುವವರು ಯಾರು?ರಾಜಕಾರಣಿಗಳೇ,ಅಧಿಕಾರಿಗಳೇ, ಎಂಬುದು ತನಿಖೆ ಯಾಗಬೇಕು.ಇನ್ನೂ ಕೆಲ ಹೆಸರುಗಳನ್ನು ನೀಡಲಿದ್ದು,ಕೊಲೆ ಪ್ರಕರಣದಲ್ಲಿ ಸೇರ್ಪಡೆಗೊಳಿಸಬೇಕು. ನೊಂದ ಕುಟುಂಬಕ್ಕೆ ಹೆಚ್ಚಿನ ಪರಿಹಾರ,ಉದ್ಯೋಗ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಪ್ರಕರಣದ ಕುರಿತು ಸಿಎಂರೊಂದಿಗೆ ಚರ್ಚಿಸಿ ಹೆಚ್ಚಿನ ಪರಿಹಾರ ಮತ್ತು ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ಕಲ್ಪಿಸುವ ಕುರಿತು ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದರು.
ನಾನೂ ಕುಟುಂಬ ಸದಸ್ಯಳಿದ್ದಂತೆ. ಕಾನೂನು ವಿಚಾರಣೆ ಇರುವುದರಿಂದ ಹಸ್ತಕ್ಷೇಪ ಬೇಡ ಎಂಬ ಹಿನ್ನೆಲೆಯಲ್ಲಿ ಬಂದಿಲ್ಲ. ಬೇರೆ ಅರ್ಥ ಬೇಡ. ಆರೋಪಿಗಳಿಗೆ ಕಠಿಣ ಶಿಕ್ಷೆ,ಭೂಮಾನಂದನ ಪತ್ನಿಗೆ ಉದ್ಯೋಗ,ಮಕ್ಕಳಿಗೆ ಶಿಕ್ಷಣದ ಭರವಸೆ ಜೊತೆಗೆ ಸರಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕೆಂದು ಉಸ್ತುವಾರಿ ಸಚಿವ ಅಜಯ ಧರ್ಮಸಿಂಗರಿಗೆ ಶಾಸಕಿ ಕರೆಮ್ಮ ಜಿ.ನಾಯಕ ಮನವಿ ಮಾಡಿದರು.
ಕೊಲೆಗೀಡಾದ ಮಹಿಳೆ ಕುಟುಂಬ ಭೇಟಿ ಮಾಡಿದ ಸಚಿವ: ಲಿಂಗಸುಗೂರು:ಇತ್ತಿಚೀಗೆ ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಕೊಲೆಗೀಡಾದ ದಲಿತ ಮಹಿಳೆ ಕುಟುಂಬ ವರ್ಗ ಭೇಟಿ ಮಾಡಿ ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತ್ರಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಸಾಂತ್ವನ ಹೇಳಿದರು.
ಜಿಲ್ಲೆಯಲ್ಲಿ ನಡೆದ ದಲಿತರ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ತಕ್ಷಣವೇ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರೊಂದಿಗೆ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಡಿಸಿಆರ್ ವಿಭಾಗಕ್ಕೆ ಅಗತ್ಯ ಸಿಬ್ಬಂದಿಗಳ ನೇಮಕ ಹಾಗೂ ದಲಿತರ ರಕ್ಷಣೆ ಕುರಿತು ಚರ್ಚಿಸಲಾಗಿದೆ. ಈಲ್ಲಾಡಳಿತ ನಿರ್ಲಕ್ಷ್ಯ ವಹಿ ಸದೇ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಕರಡಕಲ್ ದಲಿತ ಮಹಿಳೆಗೆ ವಸತಿ, ಜಮೀನು, ಸರ್ಕಾರಿ ನೌಕರಿ ಸೇರಿದಂತೆ ಸೌಲತ್ತುಗಳನ್ನು ಒದಗಿಸ ಲಾಗುವುದು ಈಗಾಗಲೇ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ನೆರವು ನೀಡಲಾಗುವುದು ಎಂದು ತಿಳಿಸಿದರು.