ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತೋತ್ಸವ ನಡೆಯುವ ಮಲ್ಲಿಕ್ಯಾತನಹಳ್ಳಿ (ಬ್ಲಫ್) ವೇದಿಕೆ ಬಳಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಅಂದು ಸಂಜೆ ೬ ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿರುವರು. ಸಚಿವರಾದ ಎನ್.ಚಲುವರಾಯಸ್ವಾಮಿ, ಎಚ್.ಕೆ.ಪಾಟೀಲ್, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ, ಬಿ.ಎಸ್.ಸುರೇಶ್ ಭಾಗವಹಿಸುವರು ಎಂದರು.
ಬೆಳಗ್ಗೆ ೧೧ ಗಂಟೆಯಿಂದ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾದ್ವಿನಿ ಕೊಪ್ಪ, ರವಿ ಮೂರೂರು, ಹನುಮಂತರವರಿಂದ ಜಾನಪದ ಸಂಗೀತ ಕಾರ್ಯಕ್ರಮ, ಶಿವರಾಜ್ ಕೆ.ಆರ್.ಪೇಟೆ ಅವರಿಂದ ಕಾಮಿಡಿ ಶೋ ನಡೆಯಲಿದೆ. ಸಂಜೆ ೭.೩೦ ರಿಂದ ಅರ್ಜುನ್ ಜನ್ಯ ತಂಡದಿಂದ ಸಂಗೀತ ಕಾರ್ಯಕ್ರಮ, ಖ್ಯಾತ ಗಾಯಕಿ ಮಂಗ್ಲಿ, ನಟಿ ರಾಗಿಣಿ ದ್ವಿವೇದಿ, ಮಾನ್ವಿತಾ ಹರೀಶ್ ಇತರರು ಪಾಲ್ಗೊಳ್ಳುವರು.ಸೆ.೧೪ರಂದು ಮಧ್ಯಾಹ್ನ ೩ ಗಂಟೆಯಿಮದ ಸವಿತಕ್ಕ, ಶ್ರೀಹರ್ಷ, ಕಂಬದ ರಂಗಯ್ಯ, ಮಲ್ಲಿಕಾರ್ಜುನ ಕೆಂಕೆರೆ ಅವರಿಂದ ಜನಪದ ಸಂಗೀತ, ರಾಜ್ ಇವೆಂಟ್ಸ್‌ನಿಂದ ಡ್ರಮ್ ಫ್ಯೂಷನ್ ಮ್ಯೂಸಿಕ್ ಕಾರ್ಯಕ್ರಮ. ಗಂಗಾವತಿ ಪ್ರಾಣೇಶ್ ತಂಡದಿಂದ ಕಾಮಿಡಿ ಶೋ, ಗುರುಕಿರಣ್ ತಂಡದಿಂದ ಸಂಗೀತ, ಹರ್ಷಿಕಾ ಪೂಣಚ್ಚ ಮತ್ತು ಭಾವನಾರಾವ್ ಅವರಿಂದ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಇತರರಿದ್ದರು.ಈ ಬಾರಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ
ಗಗನಚುಕ್ಕಿಯನ್ನು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ೧೦೦ ಕೋಟಿ ರು. ವೆಚ್ಚದಲ್ಲಿ ಸುರಂಗ ಮತ್ಸ್ಯಾಲಯ ನಿರ್ಮಿಸಲು ಯೋಜನೆ ಸಿದ್ಧಪಡಿಸಿದೆ. ಅದಕ್ಕೆ ೧೦೦ ಎಕರೆ ಜಾಗದ ಅವಶ್ಯಕತೆ ಇದೆ. ಅದರ ಸರ್ವೇ ಕಾರ್ಯ ನಡೆಯುತ್ತಿದೆ. ಜಾಗದ ವಿಚಾರವಾಗಿ ಅರಣ್ಯ ಇಲಾಖೆ ಸಮಸ್ಯೆ ಇದೆ. ನೈಸರ್ಗಿಕವಾಗಿ ಹರಿಯುವ ನೀರನ್ನು ಬಳಕೆ ಮಾಡಿಕೊಂಡು ಸುರಂಗ ಮತ್ಸ್ಯಾಲಯ ನಿರ್ಮಿಸಲಾಗುವುದು. ಮೇಲೆ ಮತ್ಸ್ಯಾಲಯವಿದ್ದು ಕೆಳಗೆ ಪ್ರವಾಸಿಗರು ವೀಕ್ಷಿಸುವಂತೆ ಅವಕಾಶ ಮಾಡಲಾಗುವುದು. ಸುರಂಗ ಮತ್ಸ್ಯಾಲಯದಿಂದ ಈ ಪ್ರದೇಶದ ಮಹತ್ವ ಹೆಚ್ಚಾಗಲಿದೆ. ಸ್ಥಳೀಯ ಜನರಿಗೆ ಉದ್ಯೋಗವಕಾಶಗಳೂ ದೊರೆಯಲಿವೆ. ಪ್ರವಾಸಿಗ ಆಕರ್ಷಣೆಯ ಕೇಂದ್ರವಾಗುವ ಆಶಾಭಾವನೆಯನ್ನು ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.ರೋಪ್-ವೇ ಸದ್ಯಕ್ಕಿಲ್ಲ, ಕೇಬಲ್ ಕಾರ್ ವ್ಯವಸ್ಥೆಗೆ ಚಿಂತನೆ
ಗಗನಚುಕ್ಕಿ ಜಲಪಾತೋತ್ಸವ ವೀಕ್ಷಣೆಗೆ ಬರುವವರಿಗೆ ೭೫ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ೫೦ ಬಸ್‌ಗಳನ್ನು ಮಳವಳ್ಳಿಯಿಂದ ಮಲ್ಲಿಕ್ಯಾತನಹಳ್ಳಿವರೆಗೆ ಮತ್ತು ಅಲ್ಲಿಂದ ಗಗನಚುಕ್ಕಿಗೆ ೨೫ ಬಸ್‌ಗಳನ್ನು ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ೬೦ ಶೌಚಾಲಯ, ಶುದ್ಧ ಕುಡಿಯುವ ನೀರು, ೪೦ ಊಟದ ಕೌಂಟರ್‌ಗಳನ್ನು ತೆರೆಯಲಾಗಿದೆ.