ಅಥಣಿ ಮತಕ್ಷೇತ್ರ ಸಂಪೂರ್ಣ ನೀರಾವರಿ ಮಾಡುವ ಗುರಿ

KannadaprabhaNewsNetwork |  
Published : Jul 12, 2025, 12:32 AM IST
ಸ್ಥಳೀಯ ಜೈನ ಸಮಾಜಕ್ಕೆ ಸಮುದಾಯ ಭವನಕ್ಕೆ ಶಾಸಕ ಲಕ್ಷ್ಮಣ ಸವದಿ ಕಾಮಗಾರಿಗೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಅಥಣಿ ಮತಕ್ಷೇತ್ರ ಸಂಪೂರ್ಣ ನೀರಾವರಿ ಮಾಡುವ ಗುರಿಯಿದ್ದು, ಜೊತೆಗೆ ರೈತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಕಾರ್ಯದಲ್ಲಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಅಥಣಿ ಮತಕ್ಷೇತ್ರ ಸಂಪೂರ್ಣ ನೀರಾವರಿ ಮಾಡುವ ಗುರಿಯಿದ್ದು, ಜೊತೆಗೆ ರೈತನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಕಾರ್ಯದಲ್ಲಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಸ್ಥಳೀಯ ಜೈನ ಸಮುದಾಯಕ್ಕೆ ಅನುಕೂಲತೆಗಾಗಿ ಜೈನ ಸಮುದಾಯ ಸಭಾ ಭವನ ಮತ್ತು ಮುಖ್ಯ ಬಜಾರದಲ್ಲಿರುವ ಶ್ರೀ ಲಕ್ಷ್ಮೀ ದೇವಾಲಯದ ನೂತನ ಕಟ್ಟಡ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದ ಅವರು, ಅನೇಕ ಸಮುದಾಯಕ್ಕೆ ಸಭಾ ಭವನ ನಿರ್ಮಿಸಿದ್ದೇವೆ. ಅದರಂತೆ ಇಂದು ಜೈನ ಸಮಾಜಕ್ಕೆ ಭವನ ಪೂಜೆ ಆಗಿದೆ. ಸುಮಾರು ₹30 ಲಕ್ಷ ಕಾಮಗಾರಿಗೆ ವೆಚ್ಚ ತಗಲಿದೆ. ಅದರಂತೆ ಲಕ್ಷ್ಮೀ ಗುಡಿಗೆ ಸುಮಾರು ₹10 ಲಕ್ಷ ಅನುದಾನ ಬಿಡುಗಡೆ ಆಗಿದೆ. ಒಳ್ಳೆಯ ಗುಣಮಟ್ಟ ಕಾಮಗಾರಿ ಆಗಲಿ ಭವನದಲ್ಲಿ ಒಳ್ಳೆಯ ಕಾರ್ಯಯಾಗಲಿ ಅದರ ಸದುಪಯೋಗ ಪಡೆಯಿರಿ ಎಂದು ಕೋರಿದರು.

ಈ ವೇಳೆ ಗಣ್ಯರಾದ ಸಿ.ಎಸ್.ನೇಮಗೌಡ, ಶ್ರೀಶೈಲ ನಾಯಿಕ, ಎಂ.ಪಿ.ಮಾಕಾಣಿ, ಚಿಕ್ಕ ನೀರಾವರಿ ವಿಶ್ರಾಂತ ಅಧಿಕಾರಿ ಶ್ರೀಕಾಂತ ಮಾಕಾಣಿ, ಜಿಪಂ ಇಲಾಖೆಯ ಅಧಿಕಾರಿ ಈರಣ್ಣ ವಾಲಿ, ಆರ್.ಆರ್.ತೆಲಸಂಗ, ಗ್ರಾಪಂ ಅಧ್ಯಕ್ಷೆ ಶಕುಂತಲಾ ಪಾಟೀಲ, ಪಿಡಿಒ ರಾಜೇಂದ್ರ ಪಾಠಕ, ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಿಂಗನಗೌಡ ಪಾಟೀಲ, ಮುರಗೇಂದ್ರ ಬ್ಯಾಂಕಿನ ಉಪಾಧ್ಯಕ್ಷ ರುದ್ರಯ್ಯ ಹಿರೇಮಠ, ಗ್ರಾಪಂ ಸದಸ್ಯರಾದ ಬಸವರಾಜ ಬಿರಾದಾರ, ಸುರೇಶ ಬಿಜ್ಜರಗಿ, ಶ್ರೀಶೈಲ ಮಿರ್ಜಿ, ಓಂಕಾರಯ್ಯ ಮಠಪತಿ ಸೇರಿದಂತೆ ಅನೇಕರು ಇದ್ದರು.ಜೈನ ಸಮಾಜದ ಅಧ್ಯಕ್ಷ ಸುರೇಶ ಮಾಕಾಣಿ, ಉಪಾಧ್ಯಕ್ಷ ದೇವೆಂದ್ರ ಬೆಳಗಲಿ, ಅಪ್ಪಾಸಾಬ ಮಾಕಾಣಿ, ಬಾಹುಬಲಿ ಸಂಕನ್ನವರ, ಶಾಂತು ಸವದಿ, ಸಚಿನ ಮಾಕಾಣಿ ಸೇರಿದಂತೆ ಅನೇಕರು ಸೇರಿ ಶಾಸಕ ಲಕ್ಷ್ಮಣ ಸವದಿಯವರನ್ನು ಆತ್ಮೀಯವಾಗಿ ಸತ್ಕರಿಸಿದರು. ಶಿಕ್ಷಕ ಮಹಾಬಲ್ ಮಾಕಾಣಿ ಸ್ವಾಗತಿಸಿದರು. ಮಹಾವೀರ ಬೆಳಗಲಿ ವಂದಿಸಿದರು.

PREV