ಜನರ ಸುಲಿಗೆಗೆ ಇಳಿದ ಸರ್ಕಾರ

KannadaprabhaNewsNetwork |  
Published : Jun 21, 2024, 01:02 AM IST
ನವಲಗುಂದದಲಲ್ಲೂ ಪ್ರತಿಭಟನೆ | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ 2000 ಕೊಟ್ಟ ಹಾಗೇ ಮಾಡಿ, ಪೆಟ್ರೋಲ್, ಡೀಸೆಲ್‌, ದಿನಸಿ ಪದಾರ್ಥಗಳ ಬೆಲೆ ಏರಿಸಿ, ಅವರ ಪತಿ, ಮಕ್ಕಳ ಮೂಲಕ ವಸೂಲಿ ಮಾಡುತ್ತಿದೆ.

ನವಲಗುಂದ:

ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ರೈತನ ವೀರಗಲ್ಲಿಗೆ ನಮನ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಕೆಲಕಾಲ ತಡೆದರು.ಈ ವೇಳೆ ಮಾತನಾಡಿದ ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಭಾಗ್ಯಗಳನ್ನು ಕೊಟ್ಟು, ಮನೆಯಲ್ಲಿನ ಎಲ್ಲರಿಂದಲೂ ವಸೂಲಿ ಮಾಡುವ ಹುನ್ನಾರ ಮಾಡಿದೆ. ಇಂತಹ ಸರ್ಕಾರ ತೊಲಗಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ₹ 2000 ಕೊಟ್ಟ ಹಾಗೇ ಮಾಡಿ, ಪೆಟ್ರೋಲ್, ಡೀಸೆಲ್‌, ದಿನಸಿ ಪದಾರ್ಥಗಳ ಬೆಲೆ ಏರಿಸಿ, ಅವರ ಪತಿ, ಮಕ್ಕಳ ಮೂಲಕ ವಸೂಲಿ ಮಾಡುತ್ತಿದೆ. ಇದನ್ನು ಜನರು ಗಂಭೀರವಾಗಿ ಪರಿಗಣಿಸಬೇಕು. ಇಂತಹ ವ್ಯವಸ್ಥೆಗೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರ ತೊಲಗಲಿ ಎಂದರು. ನಂತರ ತಹಸೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ತಾಲೂಕು ಅಧ್ಯಕ್ಷ ಶರಣಪ್ಪಗೌಡ ದಾನಪ್ಪಗೌಡ್ರ, ಬಸಣ್ಣ ಬೆಳವಣಿಕಿ, ಷಣ್ಮುಖ ಗುರಿಕಾರ, ಸಿದ್ದಣ್ಣ ಕಿಟಗೇರಿ, ಮುತ್ತಣ್ಣ ಮನಮಿ, ಮೃತ್ಯುಂಜಯ ಹಿರೇಮಠ, ಸೋಮು ಪಟ್ಟಣಶೆಟ್ಟಿ, ರೋಹಿತ ಮತ್ತಿಹಳ್ಳಿ, ಮುತ್ತು ಗಾಳಪ್ಪನವರ, ಪ್ರಭು ಬಳಗಣ್ಣನವರ, ಸಿದ್ಧನಗೌಡ ಪಾಟೀಲ, ಈರಣ್ಣ ಹಸಬಿ, ಮಂಜುನಾಥ ಅಕ್ಕಿ, ಅಣ್ಣಪ್ಪ ಬಾಗಿ, ನಿಂಗಪ್ಪ ಬಾರಕೇರ, ನಾಗಪ್ಪ ಹರ್ತಿ, ಜಕ್ಕನಗೌಡ್ರ, ನಿಂಗಪ್ಪ ಬಿಇದಲೂಮಠ, ದಾಡಿಬಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.20ಹುಬ4,5ನವಲಗುಂದದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ