ಕನ್ನಡಪ್ರಭ ವಾರ್ತೆ ಅರಕಲಗೂಡು
ಯಾರ ಬಗ್ಗೆಯೂ ಭಯ ಭಕ್ತಿ ಇಲ್ಲ. ಹಲವಾರು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಎಲ್ಲದಕ್ಕೂ ದಾಖಲೆ ಕೇಳುತ್ತಾರೆ. ಇವರು ಬಿಜೆಪಿ ಬಗ್ಗೆ ಮಾತಾಡಿದ್ರಲ್ಲಾ ನೀವು ಯಾವ ದಾಖಲಾತಿ ಇಟ್ಟುಕೊಂಡಿದ್ದಿರಿ. ಅದನ್ನೇ ಬಳಸಿಕೊಂಡು ಅಧಿಕಾರಕ್ಕೆ ಬಂದ್ರು. ಗುತ್ತಿಗೆದಾರರ ಸಂಘದವರೇ ಇವರ ಬಗ್ಗೆ ಹೇಳುತ್ತಿದ್ದಾರಲ್ಲ, ಸರ್ಕಾರ ಕ್ರಮ ಕೈಗೊಳ್ಳೋದಾದ್ರೆ ಶಾಸಕರ ಹೆಸರು ಸಮೇತ ಹೇಳುತ್ತೇವೆ ಎನ್ನುತ್ತಾರಲ್ಲ. ದೇವರಾಜ ಅರಸು ದಾಖಲ ಮೀರಿಸಿದ್ದಾರೆ ಎನ್ನುತ್ತಿದ್ದೀರಿ. ಅದು ದಾಖಲೆ ಅಲ್ಲಾ ಜನರ ಮನಸ್ಸಿನಲ್ಲಿ ಉಳಿದುಕೊಳ್ಳಬೇಕು. ಅದು ನಿಜವಾದ ಆಡಳಿತ ಅಷ್ಟೇ ಎಂದರು. ಪರಮೇಶ್ವರ್, ದಲಿತ ಸಿಎಂ ಚರ್ಚೆ ವಿಚಾರಕ್ಕೆ ಅಲ್ಲೆ ಕುರ್ಚಿ ಉಳಿಸಿಕೊಳ್ಳೊದಕ್ಕೆ ಡ್ರಾಮಾ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿದರು.ಹಾಸನದಲ್ಲಿ ನಡೆದ ರೀತಿ ಬಿಜಾಪುರದಲ್ಲಿ ನಾಳೆ ಸಮಾವೇಶ ನಡೆಯುತ್ತಿದೆ. ಮಾ. 8ನೇ ತಾರೀಖು ಬೆಂಗಳೂರಿನಲ್ಲಿ ಬೆಳ್ಳಿಹಬ್ಬ ಸಮಾವೇಶ ನಡೆಯಲಿದೆ ಎಂದರು.ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂಬ ಅಭಿಮಾನಿಗಳ ಕೂಗು ವಿಚಾರಕ್ಕೆ ಪ್ರತಿಕ್ರಿಯಿಸಿ, ಹಲವಾರು ಬಾರಿ ಹೇಳಿದ್ದೇನೆ ನಾನು ಮುಖ್ಯಮಂತ್ರಿ ಆಗೋದು ಮುಖ್ಯ ಅಲ್ಲ, ಜನರ ಬದುಕನ್ನ ಸರಿಪಡಿಸಬೇಕು ಅನ್ನೋದು ನನ್ನ ಉದ್ದೇಶ. ಈ ಕೆಟ್ಟ ರೀತಿಯ ಸರ್ಕಾರವನ್ನ ಕಿತ್ತು ಹಾಕಬೇಕು. ನಮ್ಮ ಮೈತ್ರಿ ಒಪ್ಪಂದದ ಸ್ನೇಹಿತರ ಜೊತೆ ಹೋರಾಟ ಮಾಡಬೇಕು ಎಂದುಕೊಂಡಿದ್ದೇನೆ. ನಮ್ಮ ಹಣೆಯಲ್ಲಿ ಏನು ಬರೆದಿರುತ್ತೆ ಅದು ಆಗುತ್ತೆ. ನಮ್ಮನ್ನ ಯಾವುದೋ ಶಕ್ತಿ ಆಡಿಸುತ್ತಿರುತ್ತದೆ. ನಮ್ಮಕರ್ತವ್ಯ ನಾವು ಮಾಡಬೇಕು ಅಷ್ಟೇ ಎಂದು ಹೇಳಿದರು.
ಸ್ಥಳೀಯ ಸಂಸ್ಥೆ ಚುನಾವಣೆಯನ್ನ ಈಗ ಮಾಡಲೇಬೇಕು. ಅದು ನ್ಯಾಯಾಲಯದ ಆದೇಶ ಇದೆ. ನಾವು ಚುನಾವಣೆ ನಡೆದ್ರೆ ಎದುರಿಸೋದಕ್ಕೆ ಸಿದ್ಧರಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರದ ಬಗ್ಗೆ ನಮ್ಮಿಬ್ಬರಲ್ಲೂ ಒಂದೇ ಅಭಿಪ್ರಾಯ ಇದೆ. ಯಾವುದೇ ಗೊಂದಲಗಳು ಆಗಿಲ್ಲ. ಎಲ್ಲರೂ ಕೂತು ತೀರ್ಮಾನ ಮಾಡುತ್ತೇವೆ ಎಂದರು. ನಿಖಿಲ್ ಕೂಡ ಕುಮಾರಸ್ವಾಮಿ ಸಿಎಂ ಆಗಬೇಕು ಎಂದಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ನಿಖಿಲ್ ಕುಮಾರಸ್ವಾಮಿನಾ ನನ್ನ ಮುಖ್ಯಮಂತ್ರಿ ಮಾಡೋದು, ಜನ ತೀರ್ಮಾನ ಮಾಡಬೇಕು. ಜನರ ಅಭಿಪ್ರಾಯವನ್ನು ನಿಖಿಲ್ ಹೇಳುತ್ತಿದ್ದಾರೆ. ಸಾಕಷ್ಟು ಜನ 2028ಕ್ಕೆ ಮುಖ್ಯಮಂತ್ರಿ ಆಗೋದಕ್ಕೆ ರೇಸ್ ನಲ್ಲಿ ಇದ್ದಾರೆ. ಸಾಕಷ್ಟು ಜನ ಮುಖ್ಯಮಂತ್ರಿಗಳಾಗಬೇಕು ಅಂತ ಹಲವಾರು ಜನ ಇದ್ದಾರೆ. ಅವರನ್ನೆಲ್ಲಾ ಓವರ್ ಟೇಕ್ ಮಾಡಿ ಮುಖ್ಯಮಂತ್ರಿ ಆಗಬೇಕಲ್ಲ. ನೋಡೋಣ ಏನಾಗುತ್ತೆ ಎಂದರು.ಕಾರ್ಯಕ್ರಮದಲ್ಲಿ ಶಾಸಕ ಎ.ಮಂಜು ಮಾತನಾಡಿದರು. ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಹೊನ್ನವಳ್ಳಿ ಸತೀಶ್, ನರಸೇಗೌಡ, ಚೌಡೇಗೌಡ, ದಿವಾಕರ್, ಅಶೋಕ್, ವಿಜಯ ಕುಮಾರ್,ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
* ಬಾಕ್ಸ್...... ಒಳಗಡೆ ಇರೋರೇ ಪ್ರಶ್ನೆ ಪತ್ರಿಕೆ ಲೀಕ್ ಆಗಲು ಕಾರಣಪಿಯುಸಿ ಪ್ರಶ್ನೆ ಲೀಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರದ ಸಾಮರ್ಥ್ಯ ಎಷ್ಟಿದೆ ಎಂಬುದನ್ನ ನೋಡಿ. ಯಾವ ರೀತಿ ಸರ್ಕಾರ ಕೆಲಸ ಮಾಡುತ್ತಿದೆ ಅನ್ನೋದು ಗೊತ್ತಾಗ್ತಿದೆ. ಒಳಗಡೆ ಇರೋರೇ ಪ್ರಶ್ನೆ ಪತ್ರಿಕೆ ಲೀಕ್ ಮಾಡೋದಕ್ಕೆ ಕಾರಣರಾಗಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಸದ್ಯ ಕಮಿಷನ್ ಬಗ್ಗೆ ಆರೋಪ ಕೇಳಿ ಬರಲಿಲ್ಲ. ಎರಡು ನೇಮಕಾತಿಗಳಾಯ್ತು ಎಲ್ಲಿಯೂ ಹಣ ತೆಗೆದುಕೊಂಡ್ರು ಅನ್ನೋದು ಕೇಳಲಿಲ್ಲ. ನಾನು ಆಡಳಿತ ಯಾವ ರೀತಿ ಕೊಟ್ಟೆ ಅನ್ನೋದನ್ನ ಜನ ತಿಳ್ಕೊಂಡಿದ್ದಾರೆ ಎಂದರು.