ಕನ್ನಡಪ್ರಭ ವಾರ್ತೆ ಸಿಂಧನೂರು
ನಂತರ ಮಾತನಾಡಿದ ಅವರು ಚಿತ್ರಕಲಾವಿದರು ಶ್ರದ್ಧೆ ಪ್ರಯತ್ನ ಮತ್ತು ಛಲ ಅಳವಡಿಸಿಕೊಳ್ಳಬೇಕು. ರಾಯಚೂರು ಜಿಲ್ಲೆ 80ರ ದಶಕದಲ್ಲಿ ಚಿತ್ರಕಲಾವಿದರ ಕ್ಷೇತ್ರದಲ್ಲಿ ಹಿಂದುಳಿದಿತ್ತು ಆದರೆ ಈಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೂರಾರು ಚಿತ್ರಕಲಾವಿದರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದಾರೆ. ಸರ್ಕಾರ ಕಳೆದ ಅನೇಕ ವರ್ಷಗಳಿಂದ ಚಿತ್ರಕಲಾ ಶಿಕ್ಷಕರನ್ನು ನೇಮಕ ಮಾಡಿಕೊಂಡಿಲ್ಲ.ಕೂಡಲೇ ನೇಮಕ ಮಾಡಿಕೊಂಡು ಅವರ ಬದುಕಿಗೆ ನೆರವಾಗಬೇಕು ಎಂದು ಅಗ್ರಹಿಸಿದರು.
ಉಪನ್ಯಾಸಕ ಗೋವಿಂದರಾಜ ಬಾರಿಕೇರ ಮಾತನಾಡಿ, ಬದುಕಿಗೆ ಹಣ ಅವಶ್ಯಕ. ಆದರೆ ಹಣಗಳಿಸುವುದೇ ಬದುಕಾಗಬಾರದು. ಕಲಾವಿದರು ಸಹ ತಮ್ಮ ಕಲೆಯನ್ನು ಪ್ರದರ್ಶಿಸುವ ಬದ್ಧತೆಯನ್ನು ಹೊಂದಿರಬೇಕು ಎಂದು ರಮಣ ಮಹರ್ಷಿಗಳ ಉದಾಹರಣೆಯೊಂದಿಗೆ ವಿವರಿಸಿದರು. ಪತ್ರಕರ್ತ ಪ್ರಹ್ಲಾದ ಗುಡಿ ವಕೀಲ ಮಾತನಾಡಿ, ಸರ್ಕಾರ ಬಡ ಕಲಾವಿದರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಯೋಜನೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುತ್ತಾ ಬಂದಿದೆ. ಪ್ರಸ್ತುತ ಚಿತ್ರಕಲಾವಿದ ಉಮೇಶ್ ಪತ್ತಾರ್ ಸಹ ಇಲಾಖೆಯ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇತರೆ ಕಲಾವಿದರಿಗೆ ಪ್ರೇರಣೆಯಾಗಿದೆ ಎಂದರು.ಬಿಜೆಪಿ ಮುಖಂಡ ನಬಿಸಾಬ ಅನಗವಾಡಿ ಮಾತನಾಡಿ, ಬೆಂಗಳೂರಿನಲ್ಲಿ ರಾಷ್ಟ್ರೀಯ ಚಿತ್ರಕಲಾ ಸಂತೆಯನ್ನು ಸಪ್ಟೆಂಬರ್‌ನಲ್ಲಿ ತಮ್ಮ ಟ್ರಸ್ಟ್ ನಿಂದ ಏರ್ಪಡಿಸುವ ಉದ್ದೇಶ ಹೊಂದಲಾಗಿದೆ. ಈ ಭಾಗದ ಚಿತ್ರಕಲಾವಿದರನ್ನು ಗುರುತಿಸಿ ಅವಕಾಶ ಕಲ್ಪಿಸಲಾಗುವುದು ಜೊತೆಗೆ ಟ್ರಸ್ಟ್ ವತಿಯಿಂದ ಎಲ್ಲ ರೀತಿಯ ಸಹಾಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ವೀಕ್ಷಣೆ- ಜಾನಪದ ಶೈಲಿ, ತೈಲವರ್ಣ, ಸೇರಿದಂತೆ ವಿವಿಧ ಕಲಾ ಕೃತಿಗಳನ್ನು ಚಿತ್ರಕಲಾವಿದರು ಹಾಗೂ ಗಣ್ಯರು ವೀಕ್ಷಿಸಿದರು.ಚಿತ್ರ ಕಲಾವಿದ ಉಮೇಶ ಪತ್ತಾರ ತಾವು ಬಿಡಿಸಿದ ಸಿಂಧನೂರಿನ ಸುತ್ತಮುತ್ತ ನಿಸರ್ಗ ಚಿತ್ರಗಳ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಮತ್ತು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ದಾಖಲೆಯಾದ ಕಲಾಕೃತಿಗಳ ಕುರಿತು ವಿವರಿಸಿದರು. ಕಲಾವಿದರಾದ ವೆಂಕಟೇಶ ಬಾದರ್ಲಿ, ರಾಮೇಶಪ್ಪ, ಮಹಮ್ಮದ್ ಉಸ್ಮಾನ್ ಅಲಿ, ಅಂಬಣ್ಣ, ಪ್ರಸನ್ನ ಪತ್ತಾರ್, ದೀಕ್ಷಾ,ಮನು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಮಲ್ಲಯ್ಯ ಕೆಂಭಾವಿ ನಿರೂಪಿಸಿದರು.