ಶ್ರೀಗುರುಸಾರ್ವಭೌಮರ ವೈಭವೋಪೇತ ಉತ್ತರಾರಾಧನೆ

KannadaprabhaNewsNetwork |  
Published : Sep 01, 2026, 01:45 AM IST
31ಕೆಪಿಆರ್ಸಿಆರ್01ಮತ್ತು001 | Kannada Prabha

ಸಾರಾಂಶ

ತುಂಗಾತೀರ ನಿವಾಸಿ, ಕಲಿಯುಗದ ಕಲ್ಪತರು,ಕಾಮಧೇನು,ಯತಿಕುಲ ತಿಲಕ,ಮಂತ್ರಾಲಯ ನಿವಾಸಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355 ನೇ ವರ್ಷದ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಸುಕ್ಷೇತ್ರ ಮಂತ್ರಾಲಯದ ಮಠದಲ್ಲಿ ವಸಂತೋತ್ಸವ, ಶ್ರೀಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ,ವಮಹಾರಥೋತ್ಸವ ಸೇರಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಸಮಾರಂಭಗಳು ಅತ್ಯಂತ ವೈಭವೋಪೇತವಾಗಿ ಸೋಮವಾರ ನಡೆದವು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ತುಂಗಾತೀರ ನಿವಾಸಿ, ಕಲಿಯುಗದ ಕಲ್ಪತರು,ಕಾಮಧೇನು,ಯತಿಕುಲ ತಿಲಕ,ಮಂತ್ರಾಲಯ ನಿವಾಸಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355 ನೇ ವರ್ಷದ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಸುಕ್ಷೇತ್ರ ಮಂತ್ರಾಲಯದ ಮಠದಲ್ಲಿ ವಸಂತೋತ್ಸವ, ಶ್ರೀಪ್ರಹ್ಲಾದ ರಾಜರ ಉತ್ಸವ ಮೂರ್ತಿ ಮೆರವಣಿಗೆ, ಪೀಠಾಧಿಪತಿಗಳ ಅನುಗ್ರಹ ಸಂದೇಶ,ವಮಹಾರಥೋತ್ಸವ ಸೇರಿ ಮೊದಲಾದ ಧಾರ್ಮಿಕ ವಿಧಿವಿಧಾನಗಳು, ಸಾಂಸ್ಕೃತಿಕ ಸಮಾರಂಭಗಳು ಅತ್ಯಂತ ವೈಭವೋಪೇತವಾಗಿ ಸೋಮವಾರ ನಡೆದವು.

ಉತ್ತರಾರಾಧನೆ ನಿಮಿತ್ತ ಪ್ರಾತಃಕಾಲದಲ್ಲಿ ನೈಮಾಲ್ಯ ವಿಸರ್ಜನೆ,ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ, ಬಳಿಕ ಶ್ರೀರಂಗಂನ ವಿದ್ವಾನ್‌ ರಾಮಾ ಚಾರ್‌ಅವರಿಂದ ಪ್ರವಚನ, ಗ್ರಂಥಗಳ ಪಾರಾಯಣ ಮತ್ತು ದಾಸವಾಣಿ ನಡೆದವು. ಇದೇ ವೇಳೆ ಶ್ರೀಗಳು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ನವರತ್ನ ಖಚಿತ ಚಿನ್ನದ ಹೊದಿಕೆಯ ಅಲಂಕಾರವು ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿತು.

ವಸಂತೋತ್ಸವದ ಸಂಭ್ರಮ: ಚಿನ್ನಾಭರಣ, ತರಹೇವಾರಿ ಪುಷ್ಪಗಳಿಂದ ಅಲಂಕೃತಗೊಂಡ ಶ್ರೀ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀಮಠದ ಆವರಣದಿಂದ ಕಲಾತಂಡಗಳ ಮೆರವಣಿಗೆ ಮುಖಾಂತರ ಶ್ರೀಮಠ ಸಂಚಾಲಿತ ಗುರುಸಾರ್ವಭೌಮ ವಿದ್ಯಾಪೀಠಕ್ಕೆ ಕರೆದೊಯ್ದು ಪೂಜಾ ವಿಧಾನಗಳನ್ನು ನೆರವೇರಿಸಿ ಮತ್ತೆ ವಾಪಸ್ಸು ಶ್ರೀಮಧ್ವ ಮಾರ್ಗದ ಮುಖಾಂತರ ಶ್ರೀಮಠಕ್ಕೆ ಬರಲಾಯಿತು. ಬಳಿಕ ರಾಯರ ಮೂಲಬೃಂದಾವನ ಪಕ್ಕದಲ್ಲಿರುವ ದಶಾವತಾರ ಮಂಟಪದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ಸ್ವಾಮಿಗಳು ವಿಶೇಷ ಪೂಜೆ, ಮಹಾಮಂಗಳಾರತಿಯ ಸೇವೆಯನ್ನು ಮಾಡಿ ವಸಂತೋತ್ಸವ ವನ್ನು ಉದ್ಘಾಟಿಸಿದರು. ಈ ವೇಳೆ ಮಠದ ಹಿರಿಯ, ಕಿರಿಯ ಪಂಡಿತರು, ವಿದ್ವಾಂಸರು, ಅಧಿಕಾರಿ, ಸಿಬ್ಬಂದಿ ಪರಸ್ಪರ ಗುಲಾಲು,ಬುಕ್ಕಿಟ್ಟು ಎರಚಿಕೊಂಡು ಓಕುಳಿಯನ್ನಾಡಿ ಸಂಭ್ರಮಿಸಿದರು. ಬಳಿಕ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಮುಂಭಾಗದ ಆವರಣದಲ್ಲಿ ಆಕರ್ಷಕವಾಗಿ ಅಲಂಕರಿಸಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದ ಶ್ರೀಗಳು ನೆರೆದಂತಹ ಭಕ್ತ ಸಮೂಹವನ್ನುದ್ದೇಶಿಸಿ ಅನುಗ್ರಹ ಸಂದೇಶದೊಂದಿಗೆ ಆಶೀರ್ವಚನ ನೀಡಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ಡ್ರೋನ್‌ ಮತ್ತು ಹೆಲಿಕಾಫ್ಟರ್‌ನಿಂದ ಪುಷ್ಪವೃಷ್ಠಿ: ಶ್ರೀಮಠದ ಮುಂಭಾಗದಲ್ಲಿರುವ ಶ್ರೀಮಧ್ವಮಾರ್ಗದ ಮುಖಾಂತರ ಸಾಗಿದ ಮಹಾರಥೋತ್ಸವ ತೇರು ಬೀದಿಯಿಂದ ಸುಕ್ಷೇತ್ರದ ಮುಖ್ಯ ವೃತ್ತದವರೆಗೆ ಹೋಗಿ ಮತ್ತೆ ಶ್ರೀಮಠಕ್ಕೆ ವಾಪಸ್ಸಾಯಿತು. ರಥ ಚಲಿಸುತ್ತಿದ್ದ ಸಮಯದಲ್ಲಿ ಕರ್ನೂಲ್‌ ಜಿಲ್ಲೆ ಎಮ್ಮೆಗನೂರಿನ ದೇವ ಎಂಬುವವರು ಡ್ರೋನ್‌ ಬಳಸಿ ರಾಯರ ಹಾಗೂ ಶ್ರೀಗುರುಗಳ ಚಿತ್ರ ಪ್ರದರ್ಶಿಸಿ ಹಾಗೂ ರಥೋತ್ಸವದ ಮೇಲೆ ಡ್ರೋನ್‌ ಕೆಳಗಡೆ ಅಳವಡಿಸಿದ್ದ ವಿಶೇಷ ಡಬ್ಬಿ ಮುಖಾಂತರ ಪುಷ್ಪವೃಷ್ಠಿಯನ್ನು ಮಾಡಿದರು. ರಥ ಸಾಗುತ್ತಿದ್ದ ಸಮಯದಲ್ಲಿ ಶ್ರೀಗಳು ಹೆಲಿಕಾಫ್ಟರ್‌ನಲ್ಲಿ ಆಗಮಿಸಿ ರಥದ ಮೇಲೆ ಪುಷ್ಪವೃಷ್ಠಿಯನ್ನು ಗೈದರು.

ಬಳಿಕ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಶ್ರೀರಘುಪತಿ ವೇದವಾಸ್ಯ ದೇವರಿಗೆ ಸಂಸ್ಥಾನ ಪೂಜೆ, ಹಸ್ತೋದಕ ಸಮರ್ಪಣೆ, ಮಹಾಮಂಗಳಾರತಿ ಸೇವೆಗಳನ್ನು ಶ್ರೀಮಠದ ಧಾರ್ಮಿಕ ವಿಧಿ-ವಿಧಾನಗಳಂತೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದ ಪಂಡಿತರು, ವಿದ್ವಾಂಸರು ಜನಪ್ರತಿನಿಧಿಗಳು, ಅಧಿಕಾರಿ, ಸಿಬ್ಬಂದಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಸಾಗರವೇ ಸೇರಿತ್ತು.

---------------

31ಕೆಪಿಆರ್ಸಿಆರ್01ಮತ್ತು001: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರತೀರ್ಥಗುರುಸಾರ್ವಭೌಮರ 355ನೇ ವರ್ಷದ ಉತ್ತರಾರಾಧನೆ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿ ಪಹ್ಲಾದ ರಾಜರ ಮಹಾರಥೋತ್ಸವ ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ನಡೆಯಿತು.

31ಕೆಪಿಆರ್ಸಿಆರ್02:ಮಂತ್ರಾಲಯದಲ್ಲಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 355 ನೇ ವರ್ಷದ ಉತ್ತರಾರಾಧನೆ ಪ್ರಯುಕ್ತ ಚಿನ್ನಾಭರಣ, ಪುಷ್ಪಗಳಿಂದ ಅಲಂಕೃತಗೊಂಡ ಪ್ರಹ್ಲಾದ ರಾಜರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಅದ್ದೂರಿ ಮೆರವಣಿಗೆಯನ್ನು ಮಾಡಲಾಯಿತು.

12ಕೆಪಿಆರ್ಸಿಆರ್03:ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಉತ್ತರಾರಾಧನೆ ಪ್ರಯುಕ್ತ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಓಕುಳಿ ಎಸೆದು ವಸಂತೋತ್ಸವವನ್ನು ಆಚರಿಸಿದರು.

(ಕಡ್ಡಾಯ) 12ಕೆಪಿಆರ್ಸಿಆರ್04:ಮಂತ್ರಾಲಯ ಶ್ರೀಮಠದಲ್ಲಿಶ್ರೀ ಗುರುಸಾರ್ವಭೌಮರ 355 ನೇ ವರ್ಷದ ಉತ್ತರಾರಾಧನೆ ಹಿನ್ನೆಲೆಯಲ್ಲಿ ಶ್ರೀಗುರುರಾಯರ ಮೂಲಬೃಂದಾವನಕ್ಕೆ ನವರತ್ನ ವಜ್ರ ಖಚಿತ ಸುವರ್ಣ ಹೊದಿಕೆಯಿಂದ ಅಲಂಕರಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಜೀವನ ಮೌಲ್ಯಗಳನ್ನು ಕಲಿಸುವ ಪಾಠಶಾಲೆ
ಅಣ್ಣಾಭಾವು ಸಾಠೆ ಸಾಹಿತ್ಯವು ಸಾಮಾಜಿಕ ನ್ಯಾಯದ ಹಾದಿ: ಸೂರ್ಯಕಾಂತ