ವಿಶ್ವಕ್ಕೆ ಸಮಾನತೆ ಸಂದೇಶ ನೀಡಿದ ಧೀಮಂತ ಬಸವೇಶ್ವರರು: ಶಾಸಕ ರಾಘವೇಂದ್ರ ಹಿಟ್ನಾಳ

KannadaprabhaNewsNetwork |  
Published : Apr 21, 2026, 02:15 AM IST
ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಸಮಾನತೆಯ ಕಲ್ಪನೆಯೇ ಇಲ್ಲದ ಕಾಲದಲ್ಲಿಯೇ ವಿಶ್ವಗುರ ಶ್ರೀ ಬಸವೇಶ್ವರರು ವಿಶ್ವಕ್ಕೆ ಸಮಾನತೆಯ ಸಂದೇಶವನ್ನು 12ನೇ ಶತಮಾನದಲ್ಲಿಯೇ ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ: ಸಮಾನತೆಯ ಕಲ್ಪನೆಯೇ ಇಲ್ಲದ ಕಾಲದಲ್ಲಿಯೇ ವಿಶ್ವಗುರ ಶ್ರೀ ಬಸವೇಶ್ವರರು ವಿಶ್ವಕ್ಕೆ ಸಮಾನತೆಯ ಸಂದೇಶವನ್ನು 12ನೇ ಶತಮಾನದಲ್ಲಿಯೇ ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ ನಗರದಲ್ಲಿ ಬಸವೇಶ್ವರ ಪುತ್ಥಳಿಗೆ ಬಸವ ಜಯಂತಿ ಅಂಗವಾಗಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. 12ನೇ ಶತಮಾನದಲ್ಲಿಯೇ ಸಮಾನತೆಗಾಗಿ ಮತ್ತು ಮೌಢ್ಯಾಚರಣೆಗಳ ವಿರುದ್ಧ ಜಾಗೃತಿ ಮೂಡಿಸಿದರು. ಮಹಿಳೆಯರು ಸೇರಿದಂತೆ ಎಲ್ಲ ಜಾತಿ ವರ್ಗಗಳನ್ನೂ ಪ್ರೀತಿಯಿಂದ ಕಂಡಿದ್ದೂ ಅಲ್ಲದೆ ಸಮಾಜದಲ್ಲಿ ಸಮಾನತೆಯ ಜೀವನ ನಡೆಸುವ ಸಂದೇಶ ಸಾರಿದರು.

ಸಮಾನತೆಯ ಸಂದೇಶದ ಮೂಲಕ ವಿಶ್ವಕ್ಕೆ ಮಾನವೀಯತೆ ಸಾರಿದರು. ಇಂಥ ಮಹಾನ್ ನಾಯಕ ಶ್ರೀ ಬಸವೇಶ್ವರ ಅವರ ಫೋಟೋವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಆದೇಶ ಮಾಡಿ, ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ಕಾರ್ಯ ಮಾಡಿದರು. ಈಗ ಸಚಿವ ಸಂಪುಟದಲ್ಲಿ ಪ್ರತಿಯೊಂದು ಜಾತಿಗೂ ಆದ್ಯತೆ ನೀಡಲಾಗುತ್ತದೆ. ಅಧಿಕಾರ ಹಂಚಿಕೆಯಲ್ಲಿಯೂ ಪ್ರತಿಯೊಂದು ಸಮಾಜವನ್ನು ಪರಿಗಣಿಸಲಾಗುತ್ತದೆ ಎಂದರೆ ಅದು ಬಸವಣ್ಣ ಅವರು ನೀಡಿದ ಕೊಡುಗೆಯಾಗಿದೆ ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಮಾತನಾಡಿ, ಅಸಮಾನತೆಯ ಸಮಾಜದಲ್ಲಿನ ದೋಷಗಳನ್ನು ಎತ್ತಿ ಹಿಡಿದು, ಇದರಿಂದ ಸಮಾನತೆಯ ಬದುಕು ಸಾಧ್ಯವಿಲ್ಲ. ಎಲ್ಲರೂ ಸಮಾನತೆಯಿಂದ ಬದುಕುಬೇಕು ಎನ್ನುವ ಕುರಿತು 12ನೇ ಶತಮಾನದಲ್ಲಿಯೇ ಶ್ರೀ ಬಸವೇಶ್ವರ ಅವರು ಕ್ರಾಂತಿ ಮಾಡಿದರು. ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಅಲ್ಲದೆ ಅನುಭವ ಮಂಟಪದ ಮೂಲಕ ಅದನ್ನು ಅನುಸರಿಸಿದರು. ಇಂಥ ಶ್ರೇಷ್ಠ ಕೊಡುಗೆ ನೀಡುವ ವಿಶ್ವದಲ್ಲಿಯೇ ಶ್ರೀ ಬಸವೇಶ್ವರ ಅವರು ಅಜರಾಮರವಾಗಿ ಉಳಿದಿದ್ದಾರೆ ಎಂದರು.ಜಿಲ್ಲಾಡಳಿತ ನಿರ್ಲಕ್ಷ್ಯ

ಶ್ರೀ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ. ಜಯಂತಿ ಇದ್ದರೂ ಪುತ್ಥಳಿಗೆ ಅಲಂಕಾರ ಮಾಡಿಲ್ಲ, ವಿದ್ಯುತ್ ದೀಪ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೆಲ್ಲ ಸರಿಯಲ್ಲ ಎಂದ ಅವರು, ಇಡೀ ವಿಶ್ವವೇ ಹೆಮ್ಮೆಪಡುವ ಶ್ರೀ ಬಸವೇಶ್ವರ ಅವರನ್ನು ನಾವು ಗೌರವಿಸದೆ ಇದ್ದರೇ ದೊಡ್ಡ ಅಪಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಬಾರಿ ಆಚರಣೆ ಮಾಡುವ ವೇಳೆಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ವಿಭಾಗದ ಹಿರಿಯ ಕಾನೂನು ಅಧಿಕಾರಿ ಬಿ.ಎಸ್. ಪಾಟೀಲ್. ಸಿ.ವಿ. ಚಂದ್ರಶೇಖರ, ಪ್ರಸನ್ ಗಡಾದ, ಗುರುರಾಜ ಹಲಿಗೇರಿ, ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿಯಲ್ಲಿ ಕಿಡಿಗೇಡಿಗಳಿಂದ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಧ್ವಂಸ
ವಚನಗಳು ಸರ್ವಕಾಲಕ್ಕೂ ಶ್ರೇಷ್ಠ: ಅಪರ ಜಿಲ್ಲಾಧಿಕಾರಿ