ಕನ್ನಡಪ್ರಭ ವಾರ್ತೆ ಹಿರಿಯಡಕ
ಸಂಜೆ ನಡೆದ ಧರ್ಮಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಹೈಕೋರ್ಟ್ ನ್ಯಾಯಾಧೀಶ ದೇವದಾಸ್ ಅವರು ಆಗಮಿಸಿದ್ದರು. ಖ್ಯಾತ ಸಂಗೀತ ಕಲಾವಿದ ಪದ್ಮಭೂಷಣ ಡಾ. ಎಲ್ .ಸುಬ್ರಹ್ಮಣ್ಯಂ ಅವರಿಗೆ ''''''''''''''''''''''''''''''''ಸಂಗೀತ ಕಲಾವಾರಿಧಿ'''''''''''''''''''''''''''''''' ಪ್ರಶಸ್ತಿ ನೀಡಿ ವಿಶೇಷ ಸನ್ಮಾನ ಸಲ್ಲಿಸಲಾಯಿತು. ಅಲ್ಲದೇ ಮೂಡುಬಿದಿರೆಯ ಡಾ. ಮೋಹನ್ ಆಳ್ವಾ, ವಿದ್ವಾಂಸ ಪಡುಬಿದ್ರೆ ಲಕ್ಷ್ಮೀನಾರಾಯಣ ಶರ್ಮ, ಖ್ಯಾತ ವೈದ್ಯ ಡಾ.ಜಿ.ಎಸ್.ಚಂದ್ರಶೇಖರ್, ವಿದ್ವಾಂಸ ಪ್ರಮೋದಾಚಾರ್ ಪೂಜಾರ್, ದಾನಿ ಉದ್ಯಮಿ ಎಸ್.ಅನಂತಕೃಷ್ಣ ರಾವ್ ಮೂಡುಬಿದ್ರೆ, ಅಂತರಾಷ್ಟ್ರೀಯ ಜಾದೂಗಾರ ಪ್ರೊ.ಶಂಕರ್, ಖ್ಯಾತ ಚಿತ್ರಕಲಾವಿದ ಪಿ.ಎನ್.ಆಚಾರ್ಯ, ಉದ್ಯಮಿ ಸಾಧು ಸಾಲ್ಯಾನ್, ಕೆ. ಕಮಲಾಕ್ಷ ನಿಟ್ಟೆ ಪ್ರಸನ್ನಾಚಾರ್ ಅವರಿಗೆ ರಾಮಾವಿಠಲಾನುಗ್ರಹ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ವಿದ್ವಾಂಸ ಕೆ.ರಾಮಪ್ರಸಾದ್ ಭಟ್ ಚೆನೈ, ಸ್ವಾಗತ ಸಮಿತಿ ಅಧ್ಯಕ್ಷ ಹರಿದಾಸ್ ಭಟ್, ಮಠದ ದಿವಾನರಾದ ರಘುರಾಮ ಆಚಾರ್ ವೇದಿಕೆಯಲ್ಲಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.
----------------------ಬದುಕೇ ಪೂಜೆಯಾಗಬೇಕು - ಪೇಜಾವರ ಶ್ರೀಆಶೀರ್ವಚನ ನೀಡಿದ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು, ಬದುಕು ಬೇರೆ ಭಗವಂತನ ಆರಾಧನೆ ಬೇರೆಯಲ್ಲ, ಬದುಕೆಲ್ಲ ಭಗವಂತನ ಆರಾಧನೆ ಆಗಬೇಕು, ಆಗ ಮಾತ್ರ ಸಕಲ ಸಂಕಷ್ಟಗಳು ಪರಿಹಾರವಾಗಲು ಸಾಧ್ಯ ಎಂದರು.