ಪ್ರತಿಭಟನಾ ಸ್ಥಳದಲ್ಲೇ ಕಡಲೆ ಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಿ ಸರ್ಕಾರದ ಧೋರಣೆಗೆ ಖಂಡನೆ
ಅತಿಥಿ ಉಪನ್ಯಾಸಕರ ಹೋರಾಟ 22ನೇ ದಿನಕ್ಕೆ ಕಾಲಿಟ್ಟಿದ್ದು, ಕಡಲೆಕಾಯಿ ಮತ್ತು ಹಣ್ಣುಗಳ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಪ್ರತಿಭಟನಾ ಸ್ಥಳದಲ್ಲೇ ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮುಖೇನ ಸರ್ಕಾರದ ಧೋರಣೆ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕಿ ಚೈತ್ರ, ಸರ್ಕಾರಗಳು, ರಾಜಕೀಯ ನಾಯಕರು ವಿರೋಧ ಪಕ್ಷದಲ್ಲಿದ್ದಾಗ ಮಾತನಾಡುವುದೇ ಬೇರೆ, ಸರ್ಕಾರ ನಡೆಸುತ್ತಿರುವಾಗ ಮಾತನಾಡುವುದೇ ಬೇರೆ ಆಗಬಾರದು. ಯಾವಾಗಲೂ ಒಂದೇ ರೀತಿಯಾಗಿ ವರ್ತಿಸಬೇಕು. ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗವೆಂದರೆ ಅದು ಅತಿಥಿ ಉಪನ್ಯಾಸಕರ ವರ್ಗ. ೨೨ ದಿನ ಕಳೆದರೂ ಸರ್ಕಾರ ನಮ್ಮ ಸಮಸ್ಯೆ ಬಗೆಹರಿಸದೆ ಇರುವುದು ದುರಂತವಾಗಿದೆ. ನಮ್ಮ ಸೇವೆ ಕಾಯಮಾತಿ ಮಾಡುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ. ಶಿವಣ್ಣ ತಿಮ್ಲಾಪುರ್, ಡಾ. ಮಲ್ಲಿಕಾರ್ಜುನ್ ಎಂ.ಟಿ., ಕಾಂತರಾಜು, ಶಂಕರಪ್ಪ ಹಾರೋಗೆರೆ, ಗಿರಿಜಮ್ಮ ಟಿ.ಆರ್., ಅನಿತಾ, ವಿನುತಾ, ಯಶಸ್ವಿನಿ, ಸುರೇಶ, ಟಿ. ತೊಂಟಾರಾಧ್ಯ, ದೀಪಕ್, ಗಿರೀಶ್, ಮಹೇಶ್, ಶಶಿಕುಮಾರ್, ಸೌಮ್ಯಾ, ಡಾ. ಸವಿತ ಸೇರಿದಂತೆ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.ಬಾಕ್ಸ್......
ಪಂಜಿನ ಮೆರವಣಿಗೆ21ನೇ ದಿವಸ ಸೇವೆ ಖಾಯಮಾತಿ ಮತ್ತು ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರು ಪಂಜಿನ ಮೆರವಣಿಗೆ ಮೂಲಕ ಪ್ರತಿಭಟಿಸಿದರು. ನಗರದ ಸ್ವಾತಂತ್ರ್ಯ ಚೌಕದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಆಯೋಜಿಸಿದ್ದ ಪಂಜಿನ ಮೆರವಣಿಗೆಯಲ್ಲಿ ನೂರಾರು ಅತಿಥಿ ಉಪನ್ಯಾಸಕರು ಭಾಗವಹಿಸಿ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಫೋಟೊಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.