ಗುರು ಪರಂಪರೆಗಿದೆ ಬದುಕು ಅರಳಿಸಬಲ್ಲ ಶಕ್ತಿ: ಗುರುಪಾದ ಶ್ರೀ

KannadaprabhaNewsNetwork |  
Published : Jul 11, 2025, 12:32 AM IST
ಭಾರತೀಯ ಜನತಾ ಪಾರ್ಟಿಯಿಂದ ಗುರುಪಾದ ಪೂಜೆ ಮೂಲಕ ಗುರು ಪೂರ್ಣಿಮೆ ಆಚರಣೆಬದುಕು ಅರಳಿಸಬಲ್ಲ ಶಕ್ತಿ ಗುರು ಪರಂಪರೆಗೆ ಇದೆ: ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು | Kannada Prabha

ಸಾರಾಂಶ

ಮನದ ಕಲ್ಮಶಗಳನ್ನು ಹೋಗಲಾಡಿಸಿ ಉತ್ತಮ ಮೌಲ್ಯಗಳನ್ನು ತುಂಬಿ ಶ್ರೇಷ್ಠ ವ್ಯಕ್ತಿಯನ್ನಾಗಿಸಿ, ಮನುಷ್ಯನ ಬದುಕನ್ನು ಅರಳಿಸುವ ಶಕ್ತಿ ಗುರು ಪರಂಪರೆಗೆ ಇದೆ ಎಂದು ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮನದ ಕಲ್ಮಶಗಳನ್ನು ಹೋಗಲಾಡಿಸಿ ಉತ್ತಮ ಮೌಲ್ಯಗಳನ್ನು ತುಂಬಿ ಶ್ರೇಷ್ಠ ವ್ಯಕ್ತಿಯನ್ನಾಗಿಸಿ, ಮನುಷ್ಯನ ಬದುಕನ್ನು ಅರಳಿಸುವ ಶಕ್ತಿ ಗುರು ಪರಂಪರೆಗೆ ಇದೆ ಎಂದು ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀಗಳು ಹೇಳಿದರು.

ನಗರದ ಶಿವಾನಂದ ಜಿನ್ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಸಿ ಪಾದಪೂಜೆ ಸ್ವೀಕರಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡು ತಮ್ಮ ಪ್ರತಿ ಕೆಲಸದಲ್ಲಿ ಅವರ ಜೊತೆಗೆ ಇರುವಂತೆ ನೋಡಿಕೊಂಡಿದ್ದರು. ಹಡಪದ ಅಪ್ಪಣ್ಣನವರು ತಮ್ಮ ಕಾಯಕದೊಂದಿಗೆ ಜನರ ಮನಸ್ಸಿನಲ್ಲಿರುವ ಕಲ್ಮಶಗಳನ್ನು ತೆಗೆದುಹಾಕುವಲ್ಲಿ ಬಹುದೊಡ್ಡ ಕಾರ್ಯ ಮಾಡಿದ ಬಹುದೊಡ್ಡ ಶರಣರಾಗಿದ್ದರು. ವ್ಯಾಸ ಮಹರ್ಷಿಯ ಜನ್ನದಿನವನ್ನೇ ಗುರು ಪೂರ್ಣಿಮೆಯನ್ನಾಗಿ ಆಚರಿಸುತ್ತ ಬಂದಿದ್ದು, ಭಾರತದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದೆ. ಗುರುವಿನ ಸ್ಮರಣೆಯಿಂದ ಮನದ ಕಲ್ಮಶಗಳು ನಾಶವಾಗುತ್ತವೆ. ಇಂದಿನ ಯುವ ಜನಾಂಗಕ್ಕೆ ಗುರುವಿನ ಮಹತ್ವ ಭಾರತೀಯ ಗುರುಪರಂಪರೆ ತಿಳಿಸುವ ಅಗತ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, 12ನೇ ಶತಮಾನದಲ್ಲಿ ಮಹಾ ಶರಣರಾಗಿದ್ದ ಹಡಪದ ಅಪ್ಪಣ್ಣ ಅವರು ಕಾಯಕ ಹಾಗೂ ದಾಸೋಹದಲ್ಲಿ ತೊಡಗಿಸಿಕೊಂಡವರು. ಆ ಕಾಲದಲ್ಲಿ ಶರಣರು ಅನುಭವ ಮಂಟಪ ಮೂಲಕ ಜಾತಿ ರಹಿತ ಸಮಾಜ ಕಟ್ಟಬೇಕು. ಜಾತ್ಯತೀತ ಸಮಾಜ ನಿರ್ಮಾಣವಾಗಬೇಕು. ಮೇಲು-ಕೀಳು ಹೋಗಬೇಕು ಎಂಬ ಆಶಯದೊಂದಿಗೆ ಬಹುದೊಡ್ಡ ಕ್ರಾಂತಿಯಾಯಿತು. ಯಾವುದೇ ಕಾಯಕ ದೊಡ್ಡದು ಸಣ್ಣದು ಇರಲ್ಲ. ಕಾಯಕದಲ್ಲಿ ಕೀಳರಿಮೆ ಬೇಡ ನಮ್ಮ ಕಾಯಗಳ ಬಗ್ಗೆ ಗೌರವವಿರಬೇಕು. ಕಾಯಕದಲ್ಲಿ ಗೌರವವಿದ್ದಾಗ ಮನುಷ್ಯ ಮನುಷ್ಯನಾಗಿರಲು ಸಾಧ್ಯ. ನಮ್ಮ ಬದುಕಿನಲ್ಲಿ ಜ್ಞಾನ ನೀಡುವ ಗುರುವಿನ ಅವಶ್ಯವಿದೆ ಎಂದು ಹೇಳಿದರು.

ಬೀಳಗಿಯ ಕಲ್ಮಠದ ಪೂಜ್ಯರಾದ ಗುರುಪಾದ ಶಿವಾಚಾರ್ಯ ಶ್ರೀಗಳಿಗೆ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಲಾಯಿತು. ಮುಖಂಡರಾದ ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೆನ್ನವರ, ಗುಂಡುರಾವ ಶಿಂಧೆ, ರಾಜು ನಾಯ್ಕರ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೆಮಾದ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಭಾಗೀರಥಿ ಪಾಟೀಲ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನೆವರ, ಉಪಾಧ್ಯಕ್ಷೆ ಶೋಭಾ ರಾವ, ಯಲ್ಲಪ್ಪ ನಾರಾಯಣಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಶ್ರೀಧರ ನಾಗರಬೆಟ್ಟ, ಉಮೇಶ ಹಂಚಿನಾಳ, ಸದಸ್ಯರಾದ ಶಶಿಕಲಾ ಮಜ್ಜಗಿ, ರೇಖಾ ಕಲಬುರಗಿ, ಸ್ಮಜಾತಾ ಶಿಂದೆ, ಸ್ಮೀತಾ ಪವಾರ, ನಾಗಪ್ಪ ಹಡಪದ, ಸಂಗಮೇಶ ಹನುಮಸಾಗರ ಸೇರಿದಂತೆ ಸಮಾಜದ ಪ್ರಮುಖರು ಕಾರ್ಯಕರ್ತರು ಅನೇಕರು ಭಾಗವಹಿಸಿದ್ದರು.

PREV