ತೊಟ್ಟಿಲು ತೂಗುವ ಕೈ ಜಗವ ತೂಗಬಲ್ಲದು

KannadaprabhaNewsNetwork |  
Published : Mar 13, 2026, 02:45 AM IST
೧೦ಕೆಪಿಎಲ್‌೦೩ ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಎಲ್ಲಾ ಮಹಿಳೆಯರಿಗೆ ಮತ್ತು ಬಾಲಕಿಯರಿಗಾಗಿ ಹಕ್ಕುಗಳು, ನ್ಯಾಯಕ್ರಮ ಎಂಬ ಘೋಷವಾಕ್ಯದಡಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮ ನಡೆಯಿತು | Kannada Prabha

ಸಾರಾಂಶ

೧೨ನೇ ಶತಮಾನದಲ್ಲಿ ಅಕ್ಕಮಹಾದೇವಿಯ ವಿಚಾರ ನಮಗೆ ಸ್ಫೂರ್ತಿಯಾಗಬೇಕು. ಹೆಣ್ಣು ಮಕ್ಕಳಿಗೆ ಅವಕಾಶ, ಹಕ್ಕು,ನ್ಯಾಯ ಕೊಟ್ಟಾಗ ಅವಳು ಸಮಾಜಕ್ಕೆ ಮರಳಿ ನೀಡುವ ಕೆಲಸ ಮಾಡುತ್ತಾಳೆ

ಕೊಪ್ಪಳ: ತೊಟ್ಟಿಲು ತೂಗುವ ಕೈ ಜಗವ ಆಳಬಲ್ಲದು. ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣುತ್ತಾರೆ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೂ ಎಲ್ಲ ಕ್ಷೇತ್ರದಲ್ಲಿ ಮಹಿಳೆ ಕೊಡುಗೆ ನೀಡಿರುವುದನ್ನು ಕಾಣಬಹುದು ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಸದಸ್ಯೆ ಹಾಗೂ ವಿಜಯನಗರ ರೋಟರಿ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ಸದಾಶಿವ ಹೇಳಿದರು.

ನಗರದ ಶ್ರೀಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಎಲ್ಲ ಮಹಿಳೆಯರಿಗೆ ಮತ್ತು ಬಾಲಕಿಯರಿಗಾಗಿ ಹಕ್ಕುಗಳು, ನ್ಯಾಯಕ್ರಮ ಎಂಬ ಘೋಷವಾಕ್ಯದಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಅಬಲೆಯಲ್ಲ ಅವಳು ಸಬಲಳು. ಅವಳಿಗೆ ಸಮಾನವಾದ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು.

ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮಾತನಾಡಿ, ೧೨ನೇ ಶತಮಾನದಲ್ಲಿ ಅಕ್ಕಮಹಾದೇವಿಯ ವಿಚಾರ ನಮಗೆ ಸ್ಫೂರ್ತಿಯಾಗಬೇಕು. ಹೆಣ್ಣು ಮಕ್ಕಳಿಗೆ ಅವಕಾಶ, ಹಕ್ಕು,ನ್ಯಾಯ ಕೊಟ್ಟಾಗ ಅವಳು ಸಮಾಜಕ್ಕೆ ಮರಳಿ ನೀಡುವ ಕೆಲಸ ಮಾಡುತ್ತಾಳೆ. ಕುಟುಂಬದ ಏಳಿಗೆಯಲ್ಲಿ ಮಹಿಳೆಯ ಪಾತ್ರ ಬಹಳ ಇದೆ. ಕುಟುಂಬ, ರಾಜಕೀಯ, ಸಾಮಾಜಿಕ ಕ್ಷೇತ್ರಗಳಲ್ಲಿ ಸಮಾನತೆಯ ಕೊರತೆ ಇದೆ. ಅವಳಿಗೆ ಅವಕಾಶ ನೀಡಿದರೆ ಅವಳು ಸಹ ದೇಶ, ರಾಜ್ಯಕ್ಕೆ ತನ್ನದೆ ಆದ ಕೊಡುಗೆ ನೀಡಬಲ್ಲಳು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿ ಡಾ.ಆರ್.ಮರೇಗೌಡ ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸಮಾನತೆ ತಂದರು. ಅವರ ವಿಚಾರ ನಮಗೆ ಪ್ರೇರಣೆಯಾಗಲಿ. ಸಮಾಜದ ಪ್ರತಿ ಹೆಣ್ಣುಮಗಳಿಗೆ ಸಮಾನವಾದ ಅವಕಾಶ ಮಾಡಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಹಿಳೆ ಅಭಿವೃದ್ಧಿಯಾದರೆ ಕುಟುಂಬ, ಸಮಾಜ ತಾನಾಗಿಯೇ ಸುಧಾರಣೆಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಮಹಿಳಾ ಏಳಿಗೆಗೆ ಪೂರಕವಾಗಿ ಸ್ಫೂರ್ತಿ ತಂದುಕೊಡುತ್ತೇವೆ ಎಂದರು.

ಡಾ.ರುದ್ರಾಕ್ಷಿ ದೇವರಗುಡಿ, ಡಾ.ಕಸ್ತೂರಿ ಕರಮುಡಿ, ಮಮತಾ ಕುದುರಿಮೋತಿ ಮಾತನಾಡಿದರು. ಮಹಾವಿದ್ಯಾಲಯದ ಶೈಕ್ಷಣಿಕ ಸಂಯೋಜಕ ಪ್ರೊ. ಎಚ್.ಬಿ.ಆನಂದಹಳ್ಳಿ, ಪ್ರಾಚಾರ್ಯ ಡಾ. ಎಸ್.ಬಿ ಕಂಬಾರ್, ಐಕ್ಯುಎಸಿ ಸಂಯೋಜಕಿ ಡಾ.ಕವಿತಾ ಕೆ, ಪ್ರಾಧ್ಯಾಪಕ ಡಾ.ಆನಂದ ದೇಸಾಯಿ, ಶ್ರೀಧರ್ ಪೂಜಾರ, ಡಾ.ನೀಲಾಂಬಿಕ ಹುದ್ದಾರ, ಡಾ.ಶೈಲಜಾ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಶಿಕ್ಷಣಾರ್ಥಿಗಳಾದ ಮಂಜುನಾಥ್ ಸ್ವಾಗತಿಸಿದರು, ಪವಿತ್ರ ಪ್ರಾರ್ಥಿಸಿದರು ಹಾಗೂ ಗುರುರಾಜ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಂಕರಪುರ ಕ್ಷೇತ್ರ: 31ರಿಂದ ಮುಖ್ಯಪ್ರಾಣ ಶಿಲಾಮೂರ್ತಿ ಬ್ರಹ್ಮಕಲಶೋತ್ಸವ
ಡಾ ಮಂತರ್ ಪ್ರಯತ್ನ: ಕೊಡವ ಹೆರಿಟೇಜ್ ಸೆಂಟರ್ ಶೀಘ್ರ ಲೋಕಾರ್ಪಣೆ