ದೇಶದ ಸೌಹಾರ್ದತೆಗೆ ಗ್ರಾಮದ ಸೌಹಾರ್ದತೆ ಉಳಿಯಬೇಕು: ಡಾ.ಎಂ.ಮೋಹನ್ ಆಳ್ವ

KannadaprabhaNewsNetwork |  
Published : Oct 28, 2024, 12:57 AM IST
27ಉದ್ಯಾವರ | Kannada Prabha

ಸಾರಾಂಶ

ಶ್ರೀ ಶಂಭುಶೈಲೇಶ್ವರ ದೇವಸ್ಥಾನದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಇದರ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಉದ್ಯಾವರ

ನಮ್ಮ ದೇಶದ ಸೌಹಾರ್ದತೆಯಿಂದ ಬಾಳಿ ಬದುಕಬೇಕಾದರೆ ನಮ್ಮ ನಮ್ಮ ಪುಟ್ಟ ಊರಿನ ಸೌಹಾರ್ದತೆ ಉಳಿಯಬೇಕು. ಅದಕ್ಕೆ ಸಮಾನ ಮನಸ್ಕ ಸಂಸ್ಥೆಗಳು ಒಂದಾಗಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಶ್ರೀ ಶಂಭುಶೈಲೇಶ್ವರ ದೇವಸ್ಥಾನದಲ್ಲಿ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಇದರ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸೌಹಾರ್ದತೆಯ ಬದುಕು ಗಾಂಧಿ ಕಂಡ ಕನಸು, ಅದು ಉದ್ಯಾವರದಲ್ಲಿ ಸಾಧ್ಯವಾಗಿದೆ. ಅದಕ್ಕೆ ಮುಖ್ಯ ಕಾರಣ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಎಂದು ಶ್ಲಾಘಿಸಿದರು.ಅತಿಥಿಗಳಾಗಿ ಮಂಗಳೂರು ವಿವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಡಾ. ಉದಯಕುಮಾರ್ ಇವತ್ತೂರು, ಉಡುಪಿ ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.ಇದೇ ಸಂದರ್ಭ ಸಾಧಕರಾದ ಅನ್ವರ್ ಯಾಸೀನ್, ಯು. ಅರುಣ್ ಕುಮಾರ್, ಮಾಧವ್ ಜಿ. ಕೋಟ್ಯಾನ್‌, ಮಾಸ್ಟರ್ ಅನ್ವಿತ್ ಆರ್. ಶೆಟ್ಟಿಗಾರ್, ಶೋಭಾ ದಿನೇಶ್ ಉದ್ಯಾವರ, ಯಜ್ಞೇಶ್ವರ ಆಚಾರ್ಯ, ಗಿರೀಶ್ ಕುಮಾರ್, ಸೋಮಪ್ಪ ಜತ್ತನ್ ಮತ್ತು ಮಹಾಪೋಷಕರಾದ ಅಬ್ದುಲ್ ಜಲೀಲ್ ಸಾಹೇಬರನ್ನ ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಶರತ್ ಕುಮಾರ್, ರಮೇಶ್ ಕುಮಾರ್ ಉದ್ಯಾವರ, ಯು. ಚೆಂದಾವತಿ ಭಂಡಾರಿ, ಯು. ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.ಉದ್ಯಾವರ ಸೈಂಟ್ಸ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಸಂವಿಧಾನ ಪೀಠಿಕೆ ಗಾಯನ ನಡೆಯಿತು. ಅಧ್ಯಕ್ಷ ತಿಲಕ್ ರಾಜ್ ಸ್ವಾಗತಿಸಿದರು. ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ, 50 ವರ್ಷದ ಸಂಘ ನಡೆದು ಬಂದ ದಾರಿಯನ್ನು ಸಭೆಯ ಮುಂದಿರಿಸಿದರು. ಕಾರ್ಯದರ್ಶಿ ಆಶಾ ವಾಸು, 50ನೇ ವರ್ಷದ ಸಂಸ್ಥೆಯ ವರದಿಯನ್ನ ಮಂಡಿಸಿದರು. ಉಪಾಧ್ಯಕ್ಷರಾದ ಸುಗಂಧಿ ಶೇಖರ್ ವಂದಿಸಿದರು, ಸತೀಶ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ