ಜೇವರ್ಗಿ, ಚಿಂಚೋಳಿ ಜನತೆಗೂ ತಟ್ಟಿದೆ ಮುಷ್ಕರದ ಬಿಸಿ

KannadaprabhaNewsNetwork | Published : Feb 17, 2025 12:36 AM

ಸಾರಾಂಶ

ಜೇವರ್ಗಿಯಲ್ಲಿ ಮಿನಿ ವಿಧಾನ ಸೌಧದ ಎದುರು 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರಿಂದಾಗಿ ಈ ತಾಲೂಕುಗಳಲ್ಲಿಯೂ ಜನ ಹಲವು ಸೇವೆಗಳು ಸಿಗದೆ ಪರದಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಜೇವರ್ಗಿ, ಚಿಂಚೋಳಿ

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಕಳೆದ 8 ದಿನದಿಂದ ಶುರುವಾಗಿರುವ ಮುಷ್ಕರದಿಂದಾಗಿ ಜೇವರ್ಗಿ ಹಾಗೂ ಚಿಂಚೋಳಿ, ಕಮಲಾಪುರ, ಕಾಳಗಿಯಲ್ಲೂ ಭಾರಿ ಸಮಸ್ಯೆ ತಲೆದೋರಿದೆ.

ಜೇವರ್ಗಿಯಲ್ಲಿ ಮಿನಿ ವಿಧಾನ ಸೌಧದ ಎದುರು 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿದ್ದಾರೆ. ಇದರಿಂದಾಗಿ ಈ ತಾಲೂಕುಗಳಲ್ಲಿಯೂ ಜನ ಹಲವು ಸೇವೆಗಳು ಸಿಗದೆ ಪರದಾಡುತ್ತಿದ್ದಾರೆ.

ತಾಲೂಕು ಅಧ್ಯಕ್ಷ ಶರಣು ನಾಟಿಕಾರ, ಸಂಘದ ಗೌರವಾಧ್ಯಕ್ಷ ಗೌಡಪ್ಪಗೌಡ ಪಾಟೀಲ್,ಸರ್ಕಾರಿ ನೌಕರರ ಸಂಘದ ಖಜಾಂಚಿ ಸತೀಶ ರಾಠೊಡ, ಆಡಳಿತ ಅಧಿಕಾರಿಗಳಾದ ಅಂಬರೀಶ ಚವ್ಹಾಣ, ಅಂಬಿಕಾ, ದೀಪಾ ಹೂಗಾರ, ಸಿದ್ದಣ್ಣ ಸಾಲೋಡಗಿ, ಶಿವಾನಂದ ಮಠಪತಿ, ರಮೇಶ ಬಡಿಗೇರ, ಪರಶುರಾಮ ಪಾಟೀಲ್, ಮಂಜುಳಾ ಎನ್.ವಿ, ರಮೇಶ ಪವಾರ, ಲಕ್ಷ್ಮೀಕಾಂತ ಸಾಸನೂರ್, ಛಾಯಾದೇವಿ ಎಚ್, ಶಬ್ಬೀರ, ಶಿವಾನಂದ ಮಠಪತಿ, ನಾಸೀರುದ್ದೀನ್, ಮಕ್ಬುಲ್ ಪಟೇಲ್, ಹಣಮಂತ ರಡ್ಡಿ,ಗಂಗಾಧರ ಮಣ್ಣೂರ, ಸರೋಜಾ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು ಪಾಲ್ಗೊಂಡಿದ್ದರು.

ಚಿಂಚೋಳಿಯಲ್ಲೂ ಸಮಸ್ಯೆ:ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರವನ್ನು ತಹಸೀಲ ಕಚೇರಿ ಮುಂದೆ ಪ್ರಾರಂಭಿಸಿದ್ದಾರೆ. ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಬೇಕಾಗುವ ಅಗತ್ಯ ಕಂದಾಯ ದಾಖಲೆಗಳ ಪ್ರಮಾಣ ಪತ್ರಗಳನ್ನುಪಡೆದುಕೊಳ್ಳಲು ಸೇವೆಗಳು ಸ್ಥಗಿತಗೊಂಡಿದ್ದರಿಂದ ತೊಂದರೆಪಡಬೇಕಾಗಿದೆ.

ಗ್ರಾಮ ಆಡಳಿತಾಧಿಕಾರಿಗಳ ಅಧ್ಯಕ್ಷ ಬಸವರಾಜ ಭಜಂತ್ರಿ,ಕಾರ್ಯದರ್ಶಿ ಕಾರ್ತಿಕ ಸಜ್ಜನ, ಸುಭಾಷ ಕಾಶಿ, ಶಿವಾಜಿ ಚವ್ಹಾಣ,ರವಿಚಂದ್ರ ಮಾನೆ, ಬಳಿರಾಮ, ಈಶಪ್ಪ, ಲಲಿತಾ, ಶಾಂಭವಿ,ಅನೀತಾ, ಜ್ಯೋತಿ ಇನ್ನಿತರಿದ್ದರು.

ಬಿಜೆಪಿ ಮುಖಂಡರು ಬೆಂಬಲ: ತಹಸೀಲ ಕಚೇರಿ ಮುಂದೆ ಗ್ರಾಮಾಡಳಿತಾಧಿಕಾರಿಗಳು ತಮ್ಮ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿದ್ದ ಧರಣಿ ಸತ್ಯಾಗ್ರಹಕ್ಕೆತಾಲೂಕ ಬಿಜೆಪಿ ಅಧ್ಯಕ್ಷ ವಿಜಯಕುಮಾರ ಚೇಂಗಟಿ, ಪ್ರೇಮಸಿಂಗ ಚವ್ಹಾಣ, ರಾಜೂಪವಾರ ,ಕೆ.ಎಮ.ಬಾರಿ, ಯಮರಾಜ ಸಚೀನ ರಾಠೋಡ,ಗಿರಿರಾಜ ನಾಟೀಕಾರ, ನಾರಾಯಣರಾವ ನಾಟೀಕಾರ ಬೆಂಬಲ ನೀಡಿದರು.

Share this article