ಶಿರಹಟ್ಟಿ: ವದಂತಿ, ಊಹಾಪೋಹ ಮತ್ತು ಪಕ್ಷಪಾತದ ಸುದ್ದಿಗಳಿಗಿಂತ ಜನರ ಬದುಕಿಗೆ ಸಂಬಂಧಿಸಿದ ನೈಜ ಸಮಸ್ಯೆಗಳು, ಸಾಧನೆಗಳು ಹಾಗೂ ಅಭಿವೃದ್ಧಿಯ ಸುದ್ದಿಗಳಿಗೆ ಓದುಗರು ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.
ಉತ್ತರ ಕರ್ನಾಟಕ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ರವಿಕಾಂತ ಅಂಗಡಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಕರ್ತರು ಸಮಾಜದ ಕಣ್ಣು ಮತ್ತು ಕಿವಿಯಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.
ಶ್ರೀ. ಜ. ಫಕೀರ ಸಿದ್ದರಾಮ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಶಿವಪ್ರಕಾಶ ಮಹಾಜನಶೆಟ್ಟರ, ಹುಮಾಯೂನ ಮಾಗಡಿ, ವೀರಯ್ಯ ಮಠಪತಿ, ಡಿ.ಕೆ. ಹೊನ್ನಪ್ಪನವರ, ಡಾ. ಪ್ರಕಾಶ ಹೊಸಮನಿ, ಡಾ. ವೆಂಕಟೇಶ ರಾಠೋಡ, ಶರಣಬಸವನಗೌಡ ಪಾಟೀಲ ಮಾತನಾಡಿದರು.ಪತ್ರಕರ್ತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹದೇವಪ್ಪ ಎಂ. ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಿ.ವಿ. ನ್ಯಾಮಗೌಡ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ವಿಶ್ವನಾಥ ಕಪ್ಪತ್ತನವರ, ಎನ್.ಆರ್. ಕುಲಕರ್ಣಿ, ಡಾ. ಸುನೀಲ್ ಬುರಬುರೆ, ಚಂದ್ರಕಾಂತ ನೂರಶೆಟ್ಟರ, ಭೀಮಸಿಂಗ್ ರಾಠೋಡ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ ಪಾಟೀಲ, ಸೂರ್ಯಕಾಂತ ಕಪ್ಪತ್ತನವರ, ಎಂ.ಕೆ. ಲಮಾಣಿ. ಕೆ.ಎ. ಬಳಿಗೇರ ಇದ್ದರು.