ಶೀಘ್ರದಲ್ಲೇ ತಾಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣ ಪೂರ್ಣ-ಶಾಸಕ ಶಿವಣ್ಣನವರ

KannadaprabhaNewsNetwork |  
Published : Oct 28, 2025, 12:36 AM IST
ಮ | Kannada Prabha

ಸಾರಾಂಶ

ಶೀಘ್ರದಲ್ಲೇ ತಾಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣ ಪೂರ್ಣಗೊಳಿಸುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

ಬ್ಯಾಡಗಿ: ಶೀಘ್ರದಲ್ಲೇ ತಾಲೂಕು ಕ್ರೀಡಾಂಗಣದಲ್ಲಿರುವ ಒಳಾಂಗಣ ಕ್ರೀಡಾಂಗಣ ಪೂರ್ಣಗೊಳಿಸುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮಿಳುನಾಡಿನ ಪಯನ್ನೂರ-ಚೆಂಗಲಪಟ್ಟಿಯಲ್ಲಿ ಅ. 29ರಿಂದ ಆರಂಭವಾಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಹಾವೇರಿ ವಿಶ್ವವಿದ್ಯಾಲಯದ ಮಹಿಳಾ ಕಬಡ್ಡಿ ತಂಡಕ್ಕೆ ಶುಭವನ್ನು ಕೋರಿ ಮಾತನಾಡಿದರು.

ಹಾವೇರಿ ವಿವಿ ಮಹಿಳಾ ತಂಡವು ಕಬಡ್ಡಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಹಾವೇರಿ ವಿಶ್ವ ವಿದ್ಯಾಲಯದ ಹೆಸರನ್ನು ಇತರೆ ರಾಜ್ಯಗಳಿಗೂ ತಲುಪಿಸುವ ಜವಾಬ್ದಾರಿ ತಮ್ಮ ಮೇಲಿದೆ, ಅಂತಹದ್ದೊಂದು ಫಲಿತಾಂಶ ಜಿಲ್ಲೆಯು ಎದರು ನೋಡುತ್ತಿದೆ ಎಂದು ಆಶಯ ವ್ಯಕ್ತಪಡಿಸಿದರು.

ಹಾವೇರಿ ವಿವಿ ಸ್ಥಾಪನೆಯಾದ ಬಳಿಕ ಜಿಲ್ಲೆ ನೂರಾರು ಕ್ರೀಡಾಪಟುಗಳಿಗೆ ಅಂತರ ವಿವಿ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ, ಅದರಲ್ಲೂ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಹೆಚ್ಚು ಅವಕಾಶಗಳು ಲಭಿಸುತ್ತಿರುವುದು ಸಂತಸದ ಸಂಗತಿ. ಹೀಗಾಗಿ ಯಾವುದೇ ಕಾರಣಕ್ಕೂ ಹಾವೇರಿ ವಿವಿಯನ್ನು ಸ್ಥಗಿತಗೊಳಿಸುವಂತಹ ಪ್ರಮೇಯ ಎದುರಾಗುವುದಿಲ್ಲ ಎಂದರು.

ತರಬೇತಿಗೆ ಎಲ್ಲಾ ಸೌಲಭ್ಯವಿದೆ: ಪಟ್ಟಣದಲ್ಲಿ ಹಾವೇರಿ ವಿವಿ ಮಹಿಳಾ ತಂಡಕ್ಕೆ ಮೂಲಸೌಕರ್ಯಗಳಿಂದ ಅನುಭವಿ ತರುಬೇತುದಾರರಿಂದ ಅತ್ಯಂತ ಸುಸಜ್ಜಿತವಾದ ತರಬೇತಿ ದೊರೆತಿದೆ. ತಂಡವು ಸಮತೋಲನದಿಂದ ಕೂಡಿದ್ದು ಉತ್ತಮ ಪ್ರದರ್ಶನ ತೋರುವ ನೀರಿಕ್ಷೆಯಲ್ಲಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಪ್ರತಿ ಕ್ರೀಡಾಪಟುಗಳಿಗೂ ಆರ್ಥಿಕ ಸಹಾಯ ನೀಡುವ ಮೂಲಕ ಶುಭ ಕೋರಿದರು.ಈ ಸಂದರ್ಭದಲ್ಲಿ ಕಬಡ್ಡಿ ಕೋಚ್ ಮಂಜುಳ ಭಜಂತ್ರಿ, ಮುಖಂಡರಾದ ಬೀರಣ್ಣ ಬಣಕಾರ, ಆರ್.ಜಿ .ಕಳ್ಯಾಳ, ಮುನಾಫ್ ಎರೇಶೀಮಿ, ದಾನಪ್ಪ ಚೂರಿ, ಸೋಮು ಕರ್ಚಡ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ಜಗದೀಶ ಪೂಜಾರ, ಲಿಂಗರಾಜ ಕುಮ್ಮೂರ ರಮೇಶ ಸುತ್ತಕೋಟಿ, ಸುರೇಶ ಹುಳಬುತ್ತಿ, ರಫೀಕ್ ಮುದ್ಗಲ್, ಹನುಮಂತ ಬೊಮ್ಮಲಾಪುರ, ಸುಭಾಸ್ ಹುಳಬುತ್ತಿ, ಮಜೀದ ಮುಲ್ಲಾ ಶ್ರೀನಿವಾಸ ಕುರಕುಂದಿ, ಮಾರುತಿ ಅಚ್ಚಿಗೇರಿ ದುರ್ಗೇಶ ಗೋಣೆಮ್ಮನವರ, ನಜೀರಹ್ಮದ ಶೇಖ, ಜೈಭೀಮ್ ರಾರಾವಿ, ಪ್ರಕಾಶ ಲಮಾಣಿ ಸೇರಿದಂತೆ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ