ವಿದ್ಯಾವಂತರೇ ಮೌಢ್ಯಕ್ಕೆ ಶರಣಾಗೋದು ವಿಷಾದನೀಯ ಸಂಗತಿ

KannadaprabhaNewsNetwork |  
Published : May 21, 2024, 12:36 AM ISTUpdated : May 21, 2024, 12:37 AM IST
ಹರಿಹರ ತಾಲೂಕಿನ ಹನಗವಾಡಿ ಸಮೀಪದ ಮೈತ್ರಿವನದಲ್ಲಿ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ವತಿಯಿಂದ ಮಾನವ ಬಂದುತ್ವ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪ್ರೋ. ಎ.ಬಿ. ರಾಮಚಂದ್ರಪ್ಪ. | Kannada Prabha

ಸಾರಾಂಶ

ವಿದ್ಯಾವಂತ ಹಾಗೂ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೇ ಮೌಢ್ಯಕ್ಕೆ ಶರಣಾಗುವಂಥ ಬೆಳವಣಿಗೆಗಳು ವಿಷಾದನೀಯ ಸಂಗತಿ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹರಿಹರದಲ್ಲಿ ಹೇಳಿದ್ದಾರೆ.

- ರಾಜ್ಯ ಸಂಚಾಲಕ ರಾಮಚಂದ್ರಪ್ಪ ಅಭಿಮತ । ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಕಾರ್ಯಕರ್ತರ ಶಿಬಿರ - - - ಕನ್ನಡಪ್ರಭ ವಾರ್ತೆ ಹರಿಹರ

ವಿದ್ಯಾವಂತ ಹಾಗೂ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೇ ಮೌಢ್ಯಕ್ಕೆ ಶರಣಾಗುವಂಥ ಬೆಳವಣಿಗೆಗಳು ವಿಷಾದನೀಯ ಸಂಗತಿ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ತಾಲೂಕಿನ ಹನಗವಾಡಿ ಸಮೀಪದ ಮೈತ್ರಿವನದಲ್ಲಿ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ವತಿಯಿಂದ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಕರ್ತರ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮೌಢ್ಯಾಚರಣೆ ಎನ್ನುವುದು ಸಮಾಜದ ಪ್ರಗತಿಗೆ ಮಾರಕವಾಗಿದೆ. ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಕೊರೋನಾ ಹಾವಳಿ ಸಂದರ್ಭ ದೇಶದ ಜನರಿಗೆ ಧೈರ್ಯ ತುಂಬುವ ಹಾಗೂ ವೈಜ್ಞಾನಿಕ ಮಾಹಿತಿಗಳನ್ನು ಒದಗಿಸಬೇಕಾಗಿದ್ದ ಕಾಲ. ಈ ವೇಳೆ ಜವಾಬ್ದಾರಿಯುತ ವ್ಯಕ್ತಿಗಳು ಗಂಟೆ ಬಾರಿಸಿ, ದೀಪ ಬೆಳಗಿಸಿ ಎಂದು ಜನರನ್ನು ಮೌಢ್ಯಕ್ಕೆ ಪ್ರಚೋದಿಸಿದ್ದರು. ಇಂಥ ನಡೆಗಳು ಎಷ್ಟು ಸರಿ ಎಂದು ಜನರು ಪ್ರಶ್ನಿಸುವಂತಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಆರ್.ಎನ್. ರಾಜಾ ನಾಯ್ಕ್ ಮಾತನಾಡಿ, ಮಾನವ ಬಂಧುತ್ವ ವೇದಿಕೆ ಹಾಗೂ ಪ್ರೊ. ಬಿ.ಕೃಷ್ಣಪ್ಪ ವೇದಿಕೆ ನೀಡಿದ ಸಹಕಾರವನ್ನು ಶ್ಲಾಘಿಸಿ, ನಮ್ಮ ಸಮಿತಿ ಜೊತೆಗೆ ಬದ್ಧತೆಯಿಂದ ದುಡಿಯುವ ನೂರಾರು ಕಾರ್ಯಕರ್ತರಿದ್ದಾರೆ. ಅವರ ಮೂಲಕ ಮುಂದಿನ ದಿನಗಳಲ್ಲಿ ವೈಜ್ಞಾನಿಕ ಜಾಗೃತಿ ಆಂದೋಲನ ರೂಪಿಸಲಾಗುವುದು ಎಂದರು.

ಈ ಸಂದರ್ಭ ನಿರ್ದೇಶಕ ರವೀಂದ್ರನಾಥ್ ಸಿರಿವರ, ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಕಾರ್ಯದರ್ಶಿ ಈ.ಬಸವರಾಜ್, ಖಜಾಂಚಿ ಕೆ.ಬಿ. ಮಹೇಶ್ವರಪ್ಪ, ಸದಸ್ಯರಾದ ವರಲಕ್ಷ್ಮೀ, ಸಿದ್ದರಾಮ ರೆಡ್ಡಿ, ಎಂ.ಗುರುಸಿದ್ಧಸ್ವಾಮಿ, ರವಿಪ್ರಸಾದ್, ಶಾಂತ ಕುಮಾರ್, ಕೆ.ವಿ. ಜಗನ್ನಾಥ್, ಡಾ. ಎಚ್.ಕೆ.ಎಸ್. ಸ್ವಾಮಿ, ಮಂಜೇಗೌಡ, ಶಿಕ್ಷಕರಾದ ಬಿ.ಅರುಣ್‌ಕುಮಾರ್, ರಿಯಾಜ್ ಅಹಮದ್, ಮಲ್ಲಿಕಾರ್ಜುನ ಅಂಗಡಿ, ಶೋಭಾ ಉಪಸ್ಥಿತರಿದ್ದರು.

- - - -೨೦ಎಚ್‌ಆರ್‌ಆರ್೧:

ಹರಿಹರ ತಾಲೂಕಿನ ಹನಗವಾಡಿ ಸಮೀಪದ ಮೈತ್ರಿವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾರ್ಯಕರ್ತರ ಶಿಬಿರವನ್ನು ಪ್ರೊ. ಎ.ಬಿ. ರಾಮಚಂದ್ರಪ್ಪ ಉದ್ಘಾಟಿಸಿದರು.

PREV

Recommended Stories

ದಕ್ಷಿಣ ಭಾರತದ ಮೊದಲ ಆ್ಯಪಲ್ ಸ್ಟೋರ್ ಬೆಂಗಳೂರಲ್ಲಿ ಆರಂಭ
ಜೈಲಲ್ಲಿರುವ ಸಿಎಂ, ಸಚಿವರ ಆಗಬೇಕು. ಏಕೆ ಗೊತ್ತಾ?