ಸ್ಥಿರ ನಾಗಬಿಂಬ ಪ್ರತಿಷ್ಠಾಪನಾ ಮಹೋತ್ಸವ

KannadaprabhaNewsNetwork |  
Published : Nov 11, 2025, 01:15 AM IST
೧೦ಶಿರಾ೧: ಶಿರಾ ತಾಲ್ಲೂಕು ಯಲಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಡಿಗರದಾಸರಹಳ್ಳಿ ಗ್ರಾಮದಲ್ಲಿ ಸ್ಥಿರನಾಗಬಿಂಬ ಪ್ರತಿಷ್ಠಾಪನಾ ಮಹೋತ್ಸವ ಕಳಸ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಶಿವು ಚಂಗಾವರ ಭಾಗವಹಿಸಿ ಪೂಜೆ ಸಲ್ಲಿಸಿದರು. | Kannada Prabha

ಸಾರಾಂಶ

ನಮ್ಮ ನಾಡಿನ ಪರಂಪರೆ ಹಾಗೂ ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ದೇವತಾ ಉತ್ಸವ ಕಾರ್ಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ನಮ್ಮ ನಾಡಿನ ಪರಂಪರೆ ಹಾಗೂ ಸಂಪ್ರದಾಯ ಉಳಿಸಿ ಬೆಳೆಸುವಲ್ಲಿ ದೇವತಾ ಉತ್ಸವ ಕಾರ್ಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಶಿವು ಚಂಗಾವರ ಹೇಳಿದರು.

ಅವರು ತಾಲೂಕು ಯಲಿಯೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಈಡಿಗರದಾಸರಹಳ್ಳಿ ಗ್ರಾಮದಲ್ಲಿ ಜರುಗಿದ ಸ್ಥಿರ ನಾಗಬಿಂಬ ಪ್ರತಿಷ್ಠಾಪನಾ ಮಹೋತ್ಸವ ಕಳಸ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ದೇವತಾ ಉತ್ಸವ, ಪೂಜಾ ಕೈಂಕರ್ಯ ನಡೆಯುತ್ತಾ ಬರುತ್ತಿದ್ದು ಪರಸ್ಪರ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ, ಎಲ್ಲಾ ಜನಸಾಮಾನ್ಯರ ನೋವು, ದುಃಖ ದುಮ್ಮಾನಗಳನ್ನು ಹೋಗಲಾಡಿಸಿ ಮನಸ್ಸಿಗೆ ಶಾಂತಿ ನೆಮ್ಮದಿ ಹಾಗೂ ಜೀವನದಲ್ಲಿ ಸುಭಿಕ್ಷೆ ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಂದ್ರಣ್ಣ, ಮಾಜಿ ಸದಸ್ಯ ಹನುಮಂತರಾಜು, ಗುತ್ತಯ್ಯ, ರಾಮು, ಗ್ರಾಮ ಪಂ. ಸದಸ್ಯೆ ಸುಷ್ಮಾ ಮೋಹನ್, ಬಾಲರಾಜು, ತಿಮ್ಮಪ್ಪ, ಗೋವಿಂದರಾಜು, ಬಲರಾಮ, ಸುರೇಶ್, ಶಿವರಾಜು, ಆರ್ಯ ಈಡಿಗರ ಕುಲಬಾಂಧವರು ಹಾಗೂ ಗ್ರಾಮಸ್ಥರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ದೇಸಾಯಿ ಕೊಡುಗೆ ವಿದ್ಯಾರ್ಥಿಗಳಿಗೆ ದಾರಿದೀಪ
ದುರ್ಗಮ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ವಾಹನ: ಸಚಿವರಿಂದ ಚಾಲನೆ