ನವಲಗುಂದ: ರೈತ ಬಂಡಾಯದ ನೆಲದಲ್ಲಿ ರೈತರು ಹಾಗೂ ಜನಸಾಗರದ ಮಧ್ಯೆ ಜೋಡೆತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ ನಡೆಯುತ್ತಿರುವುದು ಸಂತೋಷ ತರಿಸಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.ಶ್ರೀ ಅಜಾತ ನಾಗಲಿಂಗಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಎನ್.ಹೆಚ್. ಕೋನರಡ್ಡಿ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಹೊರ ವಲಯದಲ್ಲಿರುವ ವಾಲ್ಮೀಕಿ ಭವನದ ಎದುರಿಗೆ ಆಯೋಜಿಸಿದ್ದ ಜೋಡೆತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು
ನಂತರ ಜೋಡಿ ಎತ್ತುಗಳ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ಪ್ರಥಮ ಮೈಲಾರಲಿಂಗೇಶ್ವರ, ದ್ವಿತೀಯ ಬಸವೇಶ್ವರ ಅಂಬರೇಶ, ತೃತೀಯ ಶರಣಬಸವೇಶ್ವರ, ಚತುರ್ಥ ದುರ್ಗಾದೇವಿ, ಐದನೇ ಕ್ರಾಂತಿವೀರ ಸಾಮ್ರಾಜ್ಯ ಅವರಿಗೆ ಬಹುಮಾನ ವಿತರಿಸಿ ಅಭಿನಂದನೆ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸ್ಥಾಯಿ ಸಮಿತಿ ಚೇರಮನ್ ಹನಮಂತಪ್ಪ ವಾಲೀಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ವಿಕಾಸ ತದ್ದೆವಾಡಿ, ಜೀವನ ಪವಾರ, ನವೀನ ಹೊಸಗೌಡ್ರ, ಪ್ರಕಾಶ ಗೊಂದಳೆ, ಆನಂದ ಹವಳಕೊಡ, ಚಕ್ಕಡಿ ಓಡಿಸುವ ಸ್ಪರ್ಧೆಯ ಸಂಘಟಕರಾದ ಸಿದ್ದಪ್ಪ ಹೂಗಾರ, ಮುತ್ತಪ್ಪ ಹೂಗಾರ, ಉಮೇಶ ದೋಟಿಕಲ್, ಮುತ್ತು ಡಾಲೀನ, ಆನಂದ ಡಾಲೀನ್, ಭೀಮಶಿ ಹೊಸಮನಿ, ಈರಣ್ನ ಹೊಸಮನಿ, ಶಿವಪ್ಪ ಕಟ್ಟಿ, ನಾಗರಾಜ ಹರಿವಾಳದ, ಕುಬೇರ ಡಾಲೀನ್, ನಿಂಗಪ್ಪ ತೋಟಪ್ಪನವರ ಇತರರು ಇದ್ದರು.