ನಾಯಕ ಜನಾಂಗ ಬಿಜೆಪಿ ಪಕ್ಷಕ್ಕೆ ಅಡವಿಟ್ಟಿಲ್ಲ

KannadaprabhaNewsNetwork |  
Published : Apr 23, 2024, 12:49 AM IST
22ಸಿಎಚ್‌ಎನ್‌59ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕಾಂಗ್ರೇಸ್‌ ಮುಖಂಡ  ಶ್ರೀನಿವಾಸನಾಯಕ ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ನಾಯಕ ಜನಾಂಗದ ಮತಗಳನ್ನು ಬಿಜೆಪಿ ಪಕ್ಷಕ್ಕೆ ಅಡವಿಟ್ಟಿಲ್ಲ, ಬಿಜೆಪಿ ಪಕ್ಷಕ್ಕೆ ಮಾತ್ರ ನಾಯಕ ಜನಾಂಗದ ಮತಗಳು ಸಿಗುವುದಿಲ್ಲ ಕಾಂಗ್ರೆಸ್‌ ಪಕ್ಷಕ್ಕೂ ಸಿಗಲಿದೆ ಅದರಲ್ಲಿ ವ್ಯತ್ಯಾಸವಿರಲಿದೆ ಅಷ್ಟೇ ಎಂದು ಕಾಂಗ್ರೆಸ್‌ ಮುಖಂಡ ಶ್ರೀನಿವಾಸನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾಯಕ ಜನಾಂಗದ ಮತಗಳನ್ನು ಬಿಜೆಪಿ ಪಕ್ಷಕ್ಕೆ ಅಡವಿಟ್ಟಿಲ್ಲ, ಬಿಜೆಪಿ ಪಕ್ಷಕ್ಕೆ ಮಾತ್ರ ನಾಯಕ ಜನಾಂಗದ ಮತಗಳು ಸಿಗುವುದಿಲ್ಲ ಕಾಂಗ್ರೆಸ್‌ ಪಕ್ಷಕ್ಕೂ ಸಿಗಲಿದೆ ಅದರಲ್ಲಿ ವ್ಯತ್ಯಾಸವಿರಲಿದೆ ಅಷ್ಟೇ ಎಂದು ಕಾಂಗ್ರೆಸ್‌ ಮುಖಂಡ ಶ್ರೀನಿವಾಸನಾಯಕ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿವಾರ ತಳವಾರ ಎಸ್ಟಿಗೆ ಸೇರ್ಪಡೆಗೊಳ್ಳಲು ಬಿಜೆಪಿ ಪಕ್ಷ ಮಾತ್ರ ಕಾರಣವಾಗಿಲ್ಲ, ಕಾಂಗ್ರೆಸ್‌ ಪಕ್ಷವೂ ಸಹ ಕೈ ಜೊಡಿಸಿದೆ ಅಲ್ಲದೇ ಯಾವುದೇ ರಾಜಕಾರಣಿಗಳು ಉಪವಾಸ ಮಾಡಲಿಲ್ಲ, ನಾಯಕ ಸಮಾಜದ ಸ್ವಾಮೀಜಿ ಉಪವಾಸ ಮಾಡಿದ್ದರಿಂದ ಸರ್ಕಾರ ಮಣಿದು ಪರಿವಾರ, ತಳವಾರ ಜಾತಿಯನ್ನು ಎಸ್ಟಿಗೆ ಸೇರಿಸಲಾಗಿದೆ ಎಂದರು.ನಾಯಕ ಸಮಾಜದ ಸ್ವಾಮೀಜಿ ಉಪವಾಸ ಸತ್ಯಗ್ರಹ ಮಾಡಿದಾಗ ಎಲ್ಲಾ ರಾಜಕೀಯ ಪಕ್ಷಗಳ ರಾಜಕಾರಣಿಗಳು ಸ್ವಾಮೀಜಿಗೆ ಬೆಂಬಲ ನೀಡಿದ್ದಾರೆ ಬರಿ ಬಿಜೆಪಿ ಪಕ್ಷದ ರಾಜಕೀಯ ನಾಯಕರು ಮಾತ್ರ ಉಪವಾಸ ಸತ್ಯಗ್ರಹಕ್ಕೆ ಬೆಂಬಲ ನೀಡಿಲ್ಲ. ಕಾಂಗ್ರೆಸ್‌ ನಾಯಕರು ಭಾಗಿಯಾಗಿ ಬೆಂಬಲ ನೀಡಿದ್ದಾರೆ ಎಂದರು.ಬಿಜೆಪಿ ಪಕ್ಷ ಚುನಾವಣೆಗೆ ಮತ ಬಳಸಿಕೊಳ್ಳಲು ಎಸ್ಟಿಗೆ ಸೇರ್ಪಡೆ ಮಾಡಿದೆ. ರಾಜಕೀಯಕ್ಕೆ ಜಾತಿ ವ್ಯವಸ್ಥೆಯನ್ನು ತರಬಾರದು. ರಾಜಕೀಯ ಮುಖಂಡರು ತಮ್ಮ ಅನುಕೂಲಕ್ಕೆ ಜಾತಿಯನ್ನು ತರುತ್ತಿದ್ದಾರೆ ಯಾವುದೇ ಜಾತಿ ಒಂದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿರಲ್ಲ ಎಂದರು.ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರಾಮಕೃಷ್ಣ ಹೆಗ್ಗಡೆ ಅವರು ಪರಿವಾರ, ತಳವಾರ ಜನಾಂಗದ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫರಸ್ಸು ಮಾಡಿದ್ದರು ಕಾಂಗ್ರೆಸ್‌ ಪಕ್ಷವೂ ಕೂಡ ಪರಿವಾರ, ತಳವಾರ ಎಸ್ಟಿ ಸೇರ್ಪಡೆಗೆ ಕೊಡುಗೆ ನೀಡಿದ್ದು, ನಾಯಕ ಜನಾಂಗದವರು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅರಕಲವಾಡಿ ಸೋಮನಾಯಕ, ಎಪಿಎಂಸಿ ಉಪಾಧ್ಯಕ್ಷ ರಾಮಚಂದ್ರ, ವೃಷಬೇಂದ್ರ, ಕೃಷ್ಣ, ರಮೇಶ್‌ ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ