ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಶಿ.ಶಿ. ಬಸವನಾಳ ದತ್ತಿ ಅಂಗವಾಗಿ ಆರ್‌ಎಲ್‌ಎಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಮೊದಲ ಕವಿ ನೃಪತುಂಗ ಕನ್ನಡಿಗರ ಮನಸ್ಥಿತಿ ಕುರಿತು ಕೊಂಡಾಡಿದ್ದನ್ನು ಸ್ಮರಿಸಿದರು.
ರಾಜರ, ನಾಯಕರ, ಸಾಮಂತರ, ಉಳಿಗಮಾನ್ಯರ ಕಾಲದಲ್ಲಿನ ದೈನಂದಿನ ಬದುಕಿನಲ್ಲಿ ದಾನ ಪರಂಪರೆ ಶ್ರೇಷ್ಠವಾಗಿದೆ. ನೂರಕ್ಕೆ ತೊಂಭತ್ತರಷ್ಟು ದೊರೆತ ಶಾಸನಗಳು ದಾನ ಪರಂಪರೆಗೆ ಸಂಬಂಧಪಟ್ಟವುಗಳಾಗಿವೆ. ಕನ್ನಡ ನಾಡಿನವರು ಎಂಥವರು ಎಂದರೆ ಕೊಡಕೊಳ್ಳುವಿಕೆಗೆ ಹೆಸರುವಾಸಿಯಾಗಿದ್ದರು. ಇಂಥ ಶ್ರೇಷ್ಠ ದಾನ ಪರಂಪರೆಯ ವಾರಸ್ಸುದಾರರಾದ ಪ್ರೊ. ಶಿ.ಶಿ. ಬಸವನಾಳರೂ ಕೂಡ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ ಮಹನೀಯರು ಎಂದರು.ಕೆಎಲ್‌ಇ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಿದ್ದು, 1916ರಲ್ಲಿ ಆರಂಭವಾದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸಾಧನೆ ಹಿಂದೆ ಪ್ರೊ. ಶಿ.ಶಿ. ಬಸವನಾಳರ ಕೊಡುಗೆ ಅಪಾರ. ಆದ್ದರಿಂದ ವಿದ್ಯಾರ್ಥಿಗಳು ಇಂಥ ಮಹನೀಯರ ಜೀವನ-ಸಾಧನೆ ಅರಿತು ಉತ್ತೇಜನ ಪಡೆದುಕೊಂಡು ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಬೇಕೆಂದರು.