ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ಬುಜರಿ ಮತ್ತು ಬಿರಾದಾರ ಶಿಕ್ಷಣ ಸಂಸ್ಥೆಯಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಬಿ.ಇಡಿ ವ್ಯಾಸಂಗ ಮಾಡುವ ನೀವೆಲ್ಲಾ ಈ ದೇಶವನ್ನು ಸಮರ್ಥವಾಗಿ ಕಟ್ಟುವ ಶಿಲ್ಪಿಗಳಾಗುತ್ತೀರಿ. ಹೀಗಾಗಿ ಬಹಳ ಅಚ್ಚುಕಟ್ಟಾಗಿ, ಶುದ್ದ ಮನಸ್ಸಿನಿಂದ ಎಲ್ಲವನ್ನು ಕಲಿತು ಮೌಲ್ಯಾಧಾರಿತ ಶಿಕ್ಷಕರಾಗಿ ಹೊರ ಹೊಮ್ಮಬೇಕು. ನಿಮ್ಮ ಕೈಯಲ್ಲಿ ಕಲಿಯುವ ಮಕ್ಕಳು ದೇಶಕ್ಕೆ ದೊಡ್ಡ ಕೊಡುಗೆ ನೀಡುವ ಆಸ್ತಿಗಳಾಗಿ ರೂಪಗೊಳ್ಳಬೇಕು. ಈ ನಿಟ್ಟಿನಲ್ಲಿ ಮೊದಲು ನೀವುಗಳು ಪರಿಪೂರ್ಣರಾಗಬೇಕು ಎಂದು ಸಲಹೆ ನೀಡಿದ ಅವರು ಶಿಕ್ಷಕರಾದವರಿಗೆ ನವರಸಗಳ ಬಗ್ಗೆಯೂ ಬಹಳ ಚೆನ್ನಾಗಿ ತಿಳಿದಿರಬೇಕು. ಪಠ್ಯದಲ್ಲಿನ ಪಾಠಗಳಲ್ಲಿನ ಸನ್ನಿವೇಶಗಳಿಗೆ ತಕ್ಕಂತೆ ವರ್ತಿಸಿ ಅಭಿನಯಿಸಿ ಕಲಿಸಿದಾಗ ಮಾತ್ರ ಮಕ್ಕಳ ಮನಸ್ಸಿಗೆ ಮುಟ್ಟುವಂತೆ ಪಾಠ ಮಾಡಲು ಸಾದ್ಯ ಎಂದರು.ಸಂಸ್ಥೆಯ ಅಧ್ಯಕ್ಷ ನಾಗರಾಜ ಬುಜರಿ ಮಾತನಾಡಿ ಅನೇಕ ವರ್ಷಗಳಿಂದ ಅಫಜಲ್ಪುರ ಪಟ್ಟಣದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿರುವ ಸಂಸ್ಥೆ ನಮ್ಮದು. ನಮ್ಮಲ್ಲಿ ಬಿ.ಇಡಿ ಕಲಿತವರು ಸಾಕಷ್ಟು ಸಂಖ್ಯೆಯಲ್ಲಿ ಶಿಕ್ಷಕರಾಗಿ ಹಾಗೂ ಬೇರೆ ಬೇರೆ ಇಲಾಖೆಗಳಲ್ಲಿ ಸರ್ಕಾರಿ ಸೇವೆಯಲ್ಲಿದ್ದಾರೆ. ಇದನ್ನೆಲ್ಲಾ ನೋಡಿದಾಗ ನಾವು ಪಟ್ಟ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಸಂತಸವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಾದ್ಯಾಪಕರು ಹಾಗೂ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಇದ್ದರು.