ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಚೌಳೂರು ಸಮೀಪದ ಜೆಜೆ ಕಾಲೋನಿಯಲ್ಲಿ ಶನಿವಾರ ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಬಂದಿರುವ ಸೈನಿಕ ಡಿ.ಎಂ.ಯೋಗೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಬದಲಾದ ಕಾಲಘಟ್ಟದಲ್ಲಿ ದೇಶಾಭಿಮಾನದ ಪ್ರಜ್ಞೆ ಯುವ ಜನತೆಯಲ್ಲಿ ಕಡಿಮೆಯಾಗುತ್ತಿದೆ. ಬರೀ ಭಾವನಾತ್ಮಕವಾಗಿ ದೇಶಪ್ರೇಮವನ್ನು ತೆಗೆದುಕೊಂಡರೆ ಸಾಲದು. ಬದಲಾಗಿ ತ್ಯಾಗ, ಬಲಿದಾನ, ಸೇವೆ, ಪ್ರಾಮಾಣಿಕತೆ ದೇಶಪ್ರೇಮವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದರು.ಪ್ರಸ್ತುತ ಕಾಲಘಟ್ಟದಲ್ಲಿ ಓದುವ ವಿದ್ಯಾರ್ಥಿಗಳು ಡಾಕ್ಟರ್, ಎಂಜಿನಿಯರ್ ಆಗುವ ಕಡೆಗೆ ತಮ್ಮ ಆಲೋಚನೆಗಳನ್ನು ಹರಿಯ ಬಿಡುತ್ತಾರೆ. ಬದಲಾಗಿ ದೇಶ ರಕ್ಷಣೆ ಮಾಡುವ ಯೋಧರಾಗುವ ಕಡೆಗೆ ಮನಸ್ಸು ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯೆ ಶ್ರೀದೇವಿ ಪ್ರಕಾಶ್, ಲಿಂಗಪ್ಪ, ಡಿ.ಟಿ.ಶ್ರೀನಿವಾಸ್, ಶಿಕ್ಷಕ ಜೆ.ಎಂ. ವೆಂಕಟೇಶ್, ದಸಂಸ ಜಿಲ್ಲಾಧ್ಯಕ್ಷ ಎಚ್. ಮಂಜುನಾಥ್, ಎಂ.ಎನ್.ರಂಗಸ್ವಾಮಿ, ಕುಮಾರ್ ಇದ್ದರು.