ಕನ್ನಡಪ್ರಭ ವಾರ್ತೆ ವಿಜಯಪುರ
ಕೇಂದ್ರ ಸರ್ಕಾರ ಜನಸಾಮಾನ್ಯರ ಬದುಕನ್ನು ದುರ್ಬಲಗೊಳಿಸಿದೆ, ಬೆಲೆ ಏರಿಕೆಯ ಪ್ರಹಾರ ಮಾಡಿ ಜನಸಾಮಾನ್ಯನ ಜೇಬಿಗೆ ಹೊರೆ ಹಾಕಿದ್ದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಸಂವಿಧಾನ ಬಚಾವೋ - ಮೆಹಂಗಾಯಿ ಹಠಾವೋ (ಸಂವಿಧಾನ ರಕ್ಷಿಸಿ - ಬೆಲೆ ಏರಿಕೆ ಕಡಿತಗೊಳಿಸಿ) ಎಂಬ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮನವಿ ಮಾಡಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನರ ಜೀವನಾವಶ್ಯಕ ವಸ್ತುಗಳಾದ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ನಿತ್ಯ ತೊಂದರೆ ನೀಡುತ್ತಿದೆ. ಇನ್ನೊಂದೆಡೆ ನಿತ್ಯ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುವಲ್ಲಿ ನಿರತವಾಗಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಒಂದು ಎಚ್ಚರಿಕೆ ಗಂಟೆ ರೂಪದಲ್ಲಿ ಈ ಬೆಳಗಾವಿಯಲ್ಲಿ ಸಮಾವೇಶವೊಂದನ್ನು ಆಯೋಜನೆ ಮಾಡಿದ್ದಾಗಿ ತಿಳಿಸಿದರು.
ಈ ಸಮಾವೇಶದಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎ.ಐ.ಸಿ.ಸಿ ಕಾರ್ಯದರ್ಶಿ ಗೋಪಿನಾಥ ಪನಿಯಾಳಮ್ಮ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಎ.ಐ.ಸಿ.ಸಿ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವಾರು ಹಿರಿಯ ಧುರೀಣರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸಭೆಯಲ್ಲಿ ಜಿಲ್ಲಾ ಉಸ್ತುವಾರಿಯಾಗಿರುವ ವೀಣಾ ಕಾಶಪ್ಪನವರ ಮಾತನಾಡಿದರು. ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಸುಧಾಕರ ಬಡಿಗೇರ, ಮಹ್ಮದ ರಫೀಕ ಟಪಾಲ, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ ಮುಶ್ರೀಫ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಸುಭಾಸ ಕಾಲೇಬಾಗ, ಜಾಕೀರ ಹುಸೇನ ಮುಲ್ಲಾ, ಎಂ.ಎಂ.ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಮೀರಹ್ಮದ ಬಕ್ಷಿ, ಆರತಿ ಶಾಹಪೂರ, ಶಾಜಾನ ಮುಲ್ಲಾ, ಬಾಳನಗೌಡ ಪಾಟೀಲ, ಸುರೇಶ ಹಾರನಾಳ, ರಫೀಕ ಪಕಾಳೆ, ಸುರೇಶ ಪೂಜಾರಿ, ಸಾದೀಕ ಸುಂಬಳ, ಜಾವೀದ ಮೋಮಿನ್, ಮುಂಚೂಳಿ ಘಟಕದ ಅಧ್ಯಕ್ಷರಾದ ಶಕೀಲ ಬಾಗಮಾರೆ, ವಿಜಯಕುಮಾರ ಕಾಳೆ, ಬಾಪುಗೌಡ ಪಾಟೀಲ, ಆನಂದ ಜಾಧವ, ಮಲ್ಲನಗೌಡ ಬಿರಾದಾರ, ಲಾಳಸಾಬ ಕೋರಬು, ಸುನಂದಾ ಸೊನ್ನಹಳ್ಳಿ, ಬೀರಪ್ಪ ಜುಮನಾಳ, ಶರಣಪ್ಪ ಯಕ್ಕುಂಡಿ, ಸಲೀಮ ಪೀರಜಾದೆ, ಸತೀಶಕುಮಾರ ಅಡವಿ, ಸರ್ಫರಾಜ್ ಮಿರ್ದೆ, ಲಕ್ಷ್ಮೀ ಶಿವಣಗಿ, ಸರಫರಾಜ ಅಗಸಬಾಳ, ಗಂಗೂಬಾಯಿ ಧುಮಾಳೆ, ಭಾರತಿ ನಾವಿ, ಸವಿತಾ ಧನರಾಜ, ಈರಪ್ಪ ಕುಂಬಾರ, ದಿಲಿಪ ಪ್ರಭಾಕರ ಮುಂತಾದವರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.