ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಶಿಕ್ಷಣದ ಪ್ರಮುಖ ಉದ್ದೇಶ-ಡಾ. ಕಾಳಪ್ಪನವರ

KannadaprabhaNewsNetwork |  
Published : Jan 16, 2024, 01:47 AM IST
ಪೊಟೋ-ಸಮೀಪದ ಶಿಗ್ಲಿಯ ಜಿಎಸ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಚಿಕ್ಕಮಕ್ಕಳ ವೈದ್ಯ ಡಾ.ಎನ್.ಕೆ.ಕಾಳಪ್ಪನವರ ಮಾತನಾಡಿದರು.  | Kannada Prabha

ಸಾರಾಂಶ

ಮಕ್ಕಳಿಗೆ ಹೆಚ್ಚು ಅಂಕಗಳಿಸು ಎಂದು ಒತ್ತಡ ಹಾಕುವುದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡುವುದು ನಮ್ಮ ಗುರಿಯಾಗಬೇಕು ಎಂದು ಮಕ್ಕಳ ವೈದ್ಯ ಡಾ.ಎನ್.ಕೆ. ಕಾಳಪ್ಪನವರ ಹೇಳಿದರು.

ಲಕ್ಷ್ಮೇಶ್ವರ: ಮಕ್ಕಳಿಗೆ ಹೆಚ್ಚು ಅಂಕಗಳಿಸು ಎಂದು ಒತ್ತಡ ಹಾಕುವುದು ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ನೀಡುವುದು ನಮ್ಮ ಗುರಿಯಾಗಬೇಕು ಎಂದು ಮಕ್ಕಳ ವೈದ್ಯ ಡಾ.ಎನ್.ಕೆ. ಕಾಳಪ್ಪನವರ ಹೇಳಿದರು.

ಸಮೀಪದ ಶಿಗ್ಲಿಯ ಜಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಈಚೆಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳಿಗೆ ಹೆಚ್ಚು ಅಂಕಗಳಿಸು ಎಂದು ಒತ್ತಡ ಹಾಕುವುದು ಸರಿಯಾದ ಲಕ್ಷಣವಲ್ಲ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಹೋಗುವಂತೆ ಮಾಡುವುದೇ ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು. ಮಕ್ಕಳ ಮೇಲೆ ಹೆಚ್ಚು ಒತ್ತಡ ಹಾಕುವುದರಿಂದ ಬೇರೆ ರೀತಿಯ ಪರಿಣಾಮಗಳು ಆ ಮಕ್ಕಳಲ್ಲಿ ಕಂಡು ಬರುತ್ತದೆ. ಮಕ್ಕಳ ಮನಸ್ಸನ್ನು ಅರಳಿಸುವ ಕಾರ್ಯವನ್ನು ಶಿಕ್ಷಣ ಮಾಡಬೇಕು ಎಂದು ಹೇಳಿದರು. ಈ ವೇಳೆ ಹೂವಿನ ಶಿಗ್ಲಿಯ ವಿರಕ್ತಮಠದ ಚನ್ನವೀರ ಸ್ಮಾಮಿಗಳು ಸಾನಿಧ್ಯವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಲ್.ಎಸ್. ಅರಳಹಳ್ಳಿ ಸಂಸ್ಥೆಯು ನಡೆದು ಬಂದ ದಾರಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿತಾರಾಮಪ್ಪ ಹುಲಗೂರ, ರಂಜನ್ ಪಾಟೀಲ, ಎಂ.ಕೆ. ಲಮಾಣಿ, ರಾಜರತ್ನ ಹುಲಗೂರ, ಬಾಬುಸಾಬ ಪಟ್ಟಣದ, ಶಿವಾನಂದ ಮೂಲಿಮನಿ, ಸಿ.ಆರ್. ಗೋಕಾವಿ, ಚಾಮರಾಜ ಹುಲಗೂರ, ಎನ್.ಆರ್. ಪಾಟೀಲ, ಸಿದ್ರಾಮಪ್ಪ ಪವಾಡದ, ಕೇಶವ ಗುಲಗಂಜಿ, ವಿದ್ಯಾಧರಸ್ವಾಮಿ ದೇವಾಂಗಮಠ ಇದ್ದರು. ಎ.ವಿ. ತಿಮ್ಮಾಪೂರ ಕಾರ್ಯಕ್ರಮ ನಿರೂಪಿಸಿದರು, ವಿ. ಅಶೋಕ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು