- ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ 2ನೇ ರಾಜ್ಯ ಸಮಾವೇಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಉತ್ತರ ಭಾರತದ ಟ್ಯೂಷನ್ ಕಂಪನಿಗಳು ಕರ್ನಾಟಕಕ್ಕೂ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಶೈಕ್ಷಣಿಕ ಸಂಸ್ಥೆಗಳು ಜಾಗ್ರತೆ ವಹಿಸಬೇಕಲ್ಲದೇ, ಸರ್ಕಾರವೂ ಇಂತಹ ಕಂಪನಿಗಳಿಗೆ ಕಡಿವಾಣ ಹಾಕಲಿ ಎಂದು ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ ರಾಜ್ಯಾಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.ನಗರದ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಭಾರತದ ಟ್ಯೂಷನ್ ಕಂಪನಿಗಳಿಗೆ ಸರ್ಕಾರ ಮೊದಲು ಕಡಿವಾಣ ಹಾಕಲಿ ಎಂದರು.
ಟ್ಯೂಷನ್ ಕಂಪನಿಗಳ ಜೊತೆಗೆ ಡಮ್ಮಿ ಕಾಲೇಜುಗಳ ಬಗ್ಗೆಯೂ ಮಾತುಗಳು ಕೇಳಿಬರುತ್ತಿವೆ. ಇಂತಹ ಹಲವಾರು ಸಮಸ್ಯೆಗಳ ಕಾಲಚಕ್ರದಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಸರ್ಕಾರಗಳು ಸಹ ಇಂತಹ ವಿಚಾರದಲ್ಲಿ ಜಾಗ್ರತೆ ವಹಿಸಿ, ಅವುಗಳಿಗೆ ಕಡಿವಾಣ ಹಾಕಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕೈಗೊಳ್ಳುವ ಯಾವುದೇ ಕಾರ್ಯ, ಕ್ರಮಗಳಿಗೆ ಕುಪ್ಮಾ ಸಂಪೂರ್ಣವಾಗಿ ಕೈಜೋಡಿಸಲಿದೆ ಎಂದು ಅವರು ಘೋಷಿಸಿದರು.
ಕುಪ್ಮಾ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೊ. ಎಲ್.ನರೇಂದ್ರ ನಾಯಕ್, ಸಂಸ್ಥೆ ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಡಾ.ಮಂಜುನಾಥ ರೇವಣಕರ್, ಸುಬ್ರಹ್ಮಣ್ಯ ನಾಡೋಜ, ವಿಶ್ವನಾಥ ಶೇಷಾಚಲ, ವಿಸ್ಟೆಂಟ್ ಕಾಸ್ಟಾ, ಎಂ.ಬಿ.ಸತೀಶ, ಡಾ.ಬಿ.ಕೆ.ದೇವರಾಜ, ಡಾ.ಜಯಂತ್ ಶೆಟ್ಟಿ, ಪಿ.ವಿಶ್ವನಾಥ ಇತರರು ಇದ್ದರು. ಕುಪ್ಮಾದ ದಾವಣಗೆರೆ ಜಿಲ್ಲಾಧ್ಯಕ್ಷ, ಸರ್ ಎಂ.ವಿ. ಕಾಲೇಜಿನ ಎಸ್.ಜೆ.ಶ್ರೀಧರ್ ಸ್ವಾಗತಿಸಿದರೆ, ಜಂಟಿ ಕಾರ್ಯದರ್ಶಿ ವೈ.ಯು.ವಿನಯ್ ವಂದಿಸಿದರು.
- - -
ನಮ್ಮಲ್ಲಿ ಎಲ್ಲ ವಿಧದಲ್ಲೂ ಸ್ಪರ್ಧೆಗಳಿವೆ. ಇಂತಹ ಸ್ಪರ್ಧೆ ಜೊತೆ ಜೊತೆಗೆ ಅನ್ಯೂನವಾದ ಸಂಬಂಧ, ಪ್ರೀತಿ ಇರಬೇಕಾದುದೂ ನಮ್ಮ ಕರ್ತವ್ಯವಾಗಿದೆ. ಕುಪ್ಮಾ ಸಂಘಟನೆಯಡಿ ನಾವೆಲ್ಲರೂ ಒಂದಾಗಿದ್ದರೆ ಮಾತ್ರವೇ ಸರ್ಕಾರಗಳ ಬಳಿ ನಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು, ನ್ಯಾಯ ಕೇಳುವುದಕ್ಕೆ ಸಾಧ್ಯ ಎಂಬುದನ್ನು ರಾಜ್ಯದ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳೂ ಅರ್ಥ ಮಾಡಿಕೊಳ್ಳಬೇಕು.
- - -
ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶವನ್ನು ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. -12ಕೆಡಿವಿಜಿ11.ಜೆಪಿಜಿ:
ದಾವಣಗೆರೆಯಲ್ಲಿ ಶುಕ್ರವಾರ ಕರ್ನಾಟಕ ಅನುದಾನ ರಹಿತ ಪಿಯು ಕಾಲೇಜುಗಳ ಆಡಳಿತ ಮಂಡಳಿಗಳ ಸಂಘದ 2ನೇ ರಾಜ್ಯಮಟ್ಟದ ಪಿಯು ಶಿಕ್ಷಣ ಸಮಾವೇಶದಲ್ಲಿ ಕುಪ್ಮಾ ರಾಜ್ಯಾಧ್ಯಕ್ಷ ಡಾ.ಎಂ.ಮೋಹನ ಆಳ್ವ ಇತರರು ಭಾಗವಹಿಸಿದ್ದರು.