ಕನ್ನಡಪ್ರಭ ವಾರ್ತೆ ಉಡುಪಿ
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ವಿವರಗಳನ್ನು ನೀಡಿದರು.
ಮಲೆನಾಡಿನ ಆದಿವಾಸಿಗಳ ಜೀವನವನ್ನು ಆಧರಿಸಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಬಹುತೇಕ ಮಲೆನಾಡಿನ ಕಾಡುಗಳಲ್ಲಿ, ಸಕಲೇಶಪುರ, ಚೆನ್ನೈನಲ್ಲಿ ಶೂಟಿಂಗ್ ನಡೆಸಲಾಗಿದೆ ಎಂದರು.ನಾನು ಕೊರಗಜ್ಜನ ಭಕ್ತನಾಗಿದ್ದು, ಸಿನಿಮಾದಲ್ಲಿ ಆದಿವಾಸಿಗಳು ಆರಾಧಿಸುವ ಕೊರಗಜ್ಜ ದೈವದ ಕತೆಯನ್ನು ಬಳಸಿಲಾಗಿದೆ. ಇದು ಶುದ್ಧ ಕಮರ್ಶಿಯಲ್ ಸಿನಿಮಾವಾಗಿದೆ. ಸಿನಿಮಾದ ಪ್ರಿವ್ಯೂ ನೋಡಿಯೇ ತೆಲುಗು ಮತ್ತು ತಮಿಳು ಭಾಷೆಗೆ ಮಾರಾಟವಾಗಿದ್ದು, ಈ ಭಾಷೆಗಳಿಗೆ ಡಬ್ ಮಾಡಲಾಗಿದೆ. ಯಾವುದೇ ಬಹುಕೋಟಿ ಸಿನಿಮಾಗಳಿಗೆ ಕಡಿಮೆಯಾಗದಂತೆ ಬಹಳ ಕಷ್ಟಪಟ್ಟು ಸಿನಿಮಾ ಚಿತ್ರೀಕರಿಸಲಾಗಿದ್ದು, ಪ್ರೇಕ್ಷಕರಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭ ಉಪಸ್ಥಿತರಿದ್ದ ನಾಯಕನಟ ಸುನಾಮಿ ಕಿಟ್ಟಿ, ತರಕಾರಿ ಮಾರುತ್ತಿದ್ದ ತಾನು ಈ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದೇನೆ. ಕನ್ನಡದ ಜನತೆ ಸಿನಿಮಾವನ್ನು ನೋಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.ನಿರ್ದೇಶಕ ಒರಟಶ್ರೀ, ಸಿನಿಮಾದಲ್ಲಿ ಕೊರಗಜ್ಜನ ಕತೆಯನ್ನು ಬಳಸಿಕೊಳ್ಳಲಾಗಿದ್ದರೂ, ದೈವಗಳಿಗೆ ಅವಮಾನವಾಗದಂತೆ, ಜನರ ನಂಬಿಕೆಗಳಿಗೆ ಯಾವುದೇ ಚ್ಯುತಿ ಬರದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.