ಕನ್ನಡಪ್ರಭ ವಾರ್ತೆ ಕಲಬುರಗಿ
ಕನ್ನಡದ ಅಸ್ಮಿತೆ ಮತ್ತು ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಸಂವೇದನಾಶೀಲ ಮನಸ್ಸುಗಳು ಅಗತ್ಯವಾಗಿವೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ-ಹಿರಿಯ ಸಾಹಿತಿ ಡಾ. ಟಿ.ಎಂ.ಭಾಸ್ಕರ್ ಹೇಳಿದರು.
ಕಲಬುರಗಿ ಜಿಲ್ಲಾ 20 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಗೊಂಡ ನಂತರ ಜಿಲ್ಲಾ ಕಸಾಪ ದ ವತಿಯಿಂದ ನೀಡಿದ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದ ಅವರು, ನೆಲ ಮೂಲದ ಸಂಸ್ಕøತಿ ಹಾಗೂ ಜನಪದರ ಬದುಕನ್ನು ಉನ್ನತಿಕರಿಸಲು ಸಾಹಿತ್ಯದ ಪಾತ್ರ ದೊಡ್ಡದು. ರೈತರು ಮತ್ತು ಬಡವರ ಜೀವನಮಟ್ಟ ಸುಧಾರಿಸಲು ದಲಿತ ಬಂಡಾಯ ಸಾಹಿತ್ಯ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ, ಶಿಲ್ಪಾ ಜೋಶಿ, ಮಹಾನಂದಾ ಸಿಂಗೆ, ಡಾ. ಶಿವಶರಣಪ್ಪ ಮೋತಕಪಳ್ಳಿ, ಧರ್ಮಣ್ಣ ಹೆಚ್ ಧನ್ನಿ, ಬಸವರಾಜ ಶಿವಕೇರಿ, ಡಾ. ಲಿಂಗಪ್ಪ ಗೋನಾಳ, ಸಿದ್ಧಲಿಂಗ ಬಾಳಿ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ರಾಜೇಂದ್ರ ಮಾಡಬೂಳ, ಭೀಮರಾಯ ಹೇಮನೂರ, ಡಾ. ಚಂದ್ರಶೇಖರ ದೊಡ್ಮನಿ, ಡಾ. ಕೆ ಗಿರಿಮಲ್ಲ ಇತರರಿದ್ದರು.