ಶಶಿಕಾಂತ ಮೆಂಡೆಗಾರ
ಜಗತ್ತಿನ 7ನೇ ಅದ್ಭುತ, ವಿಶ್ವವಿಖ್ಯಾತ ಗೋಳಗುಮ್ಮಟ ನೋಡಲು ಮುಗಿಬೀಳುತ್ತಿದ್ದ ಪ್ರವಾಸಿಗರ ಸಂಖ್ಯೆಯಲ್ಲಿ ಕ್ಷೀಣಗೊಂಡಿದೆ. ಮಹಾಮಾರಿ ಕೋವಿಡ್ ಆವರಿಸಿದ ಬಳಿಕ ಬಹುತೇಕ ಕಡಿಮೆಯಾಗಿದ್ದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷ ಜಾಸ್ತಿಯಾಗಿತ್ತು. ಆದರೆ, ಈ ಬಾರಿ ಮತ್ತೆ ಕಡಿಮೆಯಾಗಿದೆ. ಈ ಸಲದ ಬರಗಾಲದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಮೇಲೂ ಬೀರಿದೆ. ನಮ್ಮ ರಾಜ್ಯದ ಪ್ರವಾಸಿ ತಾಣಗಳ ವೀಕ್ಷಣೆಯಲ್ಲಿ ಭಾರತೀಯರ ಸಂಖ್ಯೆ ಕಡಿಮೆಯಾಗಿದ್ದರೇ, ವಿದೇಶಿಗರ ಸಂಖ್ಯೆ ಹೆಚ್ಚಾಗಿದ್ದು ಕೊಂಚ ಸಮಾಧಾನ ತಂದಿದೆ.
ದೇಶಿ ಪ್ರವಾಸಿಗರಲ್ಲಿ ನಿರಾಸಕ್ತಿ:
2023ರ ಜನವರಿಯಿಂದ ಜೂನ್‌ದವರೆಗೆ 4,43,513 ಭಾರತೀಯರು ಭೇಟಿ ಮಾಡಿದ್ದರೆ, 453 ವಿದೇಶಿಗರು ಭೇಟಿ ಕೊಟ್ಟಿದ್ದಾರೆ.
--------ಇಬ್ರಾಹಿಂ ರೋಜಾಕ್ಕೆ ಪ್ರವಾಸಿಗರು
2024ರಲ್ಲಿ ಅಂಕೆಸಂಖ್ಯೆ ಗಮನಿಸಿದಾಗ 88,099 ಭಾರತೀಯರು ಹಾಗೂ 587 ವಿದೇಶಿಗರು ಆಗಮಿಸಿರುವುದು ಕಂಡುಬಂದಿದೆ.
----------
ವಿಶ್ವದ ಅದ್ಭುತಗಳಲ್ಲೊಂದಾದ ಗೋಳಗುಮ್ಮಟ, ಹಾಗೂ ವಿಶ್ವಗುರು ಬಸವಣ್ಣನವರ ಜನ್ಮಭೂಮಿಯನ್ನು ಹೊಂದಿರುವ ವಿಜಯಪುರದಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. ವಾರದ ಕೊನೆಯ ಅಥವಾ ರಜಾ ದಿನಗಳಲ್ಲಿ ಸ್ನೇಹಿತರು ಅಥವಾ ಕುಟುಂಬ ಸಮೇತ ಬಂದರೆ ಇಲ್ಲಿ ಮಸ್ತ್ ಮಜಾ ಮಾಡಬಹುದಾಗಿದೆ.ನಗರದಲ್ಲಿ ಗೋಳಗುಮ್ಮಟ, ವಸ್ತುಸಂಗ್ರಹಾಲಯ, ಇಬ್ರಾಹಿಂ ರೋಜಾ, ಬಾರಾಕಮಾನ್, ಜೋಡಗುಮ್ಮಟ, ಆಸರ್ ಮಹಲ್, ಲಲಿತ ಮಹಲ್, ಸಂಗೀತ ಮಹಲ್, ಜಾಮಿಯಾ ಮಸಜೀದ್, ಶಿವಗಿರಿ ಸೇರಿದಂತೆ ಹಲವು ತಾಣಗಳನ್ನು ವೀಕ್ಷಿಸಬಹುದಾಗಿದೆ.
ಜಿಲ್ಲೆಯ ವಿವಿಧೆಡೆ ಭೇಟಿ ಕೊಟ್ಟಾಗ ಬಸವನ ಬಾಗೇವಾಡಿಯ ಬಸವೇಶ್ವರ ದೇವಸ್ಥಾನ, ಇಂಗಳೇಶ್ವರದಲ್ಲಿ ಬಸವೇಶ್ವರ ತಾಯಿಯ ತವರು, ವಚನಶಿಲಾ ಮಂಟಪ, ಆಲಮಟ್ಟಿ ಡ್ಯಾಂ ಸೈಟ್, ಲವಕುಶ ಉದ್ಯಾನವನ, ರಾಕ್ ಗಾರ್ಡನ್, ಬೋಟಿಂಗ್, ಮುಸ್ಸಂಜೆ ವೇಳೆ ಸಂಗೀತ ಕಾರಂಜಿ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳು ಹಾಗೂ ಅವುಗಳ ಮಹತ್ವ ಕುರಿತು ಇನ್ನಷ್ಟು ಪ್ರಚಾರ ಆಗಬೇಕಿದೆ. ನಗರದಲ್ಲಿ ಸ್ವಚ್ಚತೆ, ಬಂದ ಪ್ರವಾಸಿಗರಿಗೆ ಸಕಲ ವ್ಯವಸ್ಥೆಗಳು ಆದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಬಾರಿಯ ಬರಗಾಲವೂ ಸಹ ಪ್ರವಾಸಿಗರ ಮೇಲೆ ಪರಿಣಾಮ ಬೀರಿರಬಹುದು.
-ವಿಜಯಕುಮಾರ.ಎಂ.ವಿ ಪುರಾತತ್ವ ಸಂರಕ್ಷಕರು.ವಿಜಯಪುರಕ್ಕೆ ಮೊದಲಬಾರಿಗೆ ಭೇಟಿ ನೀಡಿದ್ದೆವು, ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಿದೆವು. ಅದರಲ್ಲೂ ಗೋಳಗುಮ್ಮಟ ಒಳಭಾಗದಲ್ಲಿ ನಿಂತು ಒಂದು ಬಾರಿ ಕೂಗಿದೆ 7 ಬಾರಿ ಕೆಳಿಸುವ ಅದ್ಭುತ್ ಶಿಲಾ ಗೋಪುರವನ್ನು ಕಂಡು ಬಹಳಷ್ಟು ಖುಷಿ ಆಯಿತು. ಇದುವರೆಗೂ ಬರದವರು ಜಿಲ್ಲೆಗೆ ಒಮ್ಮೆಯಾದರೂ ಬಂದು ಇಲ್ಲಿನ ತಾಣಗಳನ್ನು ನೋಡಬಹುದಾಗಿದೆ.
-ಧರಣೀಶ, ಪ್ರವಾಸಿಗ.