ಸೊಳ್ಳೆ ಉತ್ಪತ್ತಿ ತಾಣಗಳ ನಾಶವೇ ಉದ್ದೇಶ: ಡಾ.ನರಸಿಂಹಮೂರ್ತಿ

KannadaprabhaNewsNetwork |  
Published : Jun 25, 2025, 01:18 AM IST
ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯ ಪದ್ದತಿಯ ವೈದ್ಯರಿಗೆ, ಖಾಸಗಿ ವೈದ್ಯರಿಗೆ, ಪ್ರಯೋಗ ಶಾಲಾ ತಂತ್ರಜ್ಞರಿಗೆ ನಡೆದ ಅಡ್ವೋಕೆಸಿ ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ನರಸಿಂಹಮೂರ್ತಿ,ಡಾ.ಪ್ರಸನ್ನ ಕುಮಾರ್, ಡಾ.ಸುರೇಶ್ ಮತ್ತಿತರರು ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಜೂನ್ ತಿಂಗಳಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ ನಡೆಸುತ್ತಿದ್ದೇವೆ. ಮನೆ ಮನೆ ಭೇಟಿ, ಜ್ವರ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಮಾಸಾಚರಣೆ ಉದ್ದೇಶವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಭಾರತೀಯ ವೈದ್ಯ ಪದ್ಧತಿ ವೈದ್ಯರಿಗೆ ಅಡ್ವೋಕೆಸಿ ಸಭೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಜೂನ್ ತಿಂಗಳಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ ನಡೆಸುತ್ತಿದ್ದೇವೆ. ಮನೆ ಮನೆ ಭೇಟಿ, ಜ್ವರ ಸಮೀಕ್ಷೆ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು ಮಾಸಾಚರಣೆ ಉದ್ದೇಶವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ ತಿಳಿಸಿದರು.

ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಮಲೇರಿಯಾ ಮಾಸಾಚರಣೆ ನಿಮಿತ್ತ ಖಾಸಗಿ ವೈದ್ಯರಿಗೆ ಮತ್ತು ಪ್ರಯೋಗ ಶಾಲಾ ತಂತ್ರಜ್ಞರಿಗೆ ಹಾಗೂ ಭಾರ ತೀಯ ವೈದ್ಯಕೀಯ ಪದ್ಧತಿ ಅನುಸರಿಸುವಂತಹ ವೈದ್ಯರಿಗೆ ನಡೆದ ಅಡ್ವೋಕೆಸಿ ಸಭೆಯಲ್ಲಿ ಮಾತನಾಡಿದರು. ಮಲೇರಿಯಾದ ಘೋಷ ವಾಕ್ಯ ಮಲೇರಿಯ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಮರು ಹೂಡಿಕೆ ಮಾಡಿ, ಮರು ಕಲ್ಪನೆ ಮಾಡಿ, ಮರು ಉತ್ತೇಜನ ನೀಡೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಮಾಸಾಚರಣೆ ಆಚರಿಸಲಾಗುತ್ತಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.ಜಿಲ್ಲೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಕಾಶ್ ಮಾತನಾಡಿ, ಮಲೇರಿಯ ಕಾಯಿಲೆ ಪುರಾತನವಾಗಿದ್ದು ವಿಪರೀತ ಚಳಿ, ಜ್ವರ, ಮೈಕೈ ನೋವು, ವಾಂತಿ ಪ್ರಮುಖ ಲಕ್ಷಣವಾಗಿದೆ. ಮಲೇರಿಯವನ್ನು ಜ್ವರದ ಹಂತ, ಬೆವರಿನ ಹಂತ ಎಂದು ವಿಂಗಡಿಸಬಹುದು. ಈ ರೀತಿ ಲಕ್ಷಣ ಕಂಡು ಬಂದಲ್ಲಿ ಕಾಯಿಲೆ ಪತ್ತೆ ಹಚ್ಚಲು ರಕ್ತ ಲೇಪನ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ನೋಡಲ್ ಪ್ರಯೋಗ ಶಾಲಾ ತಂತ್ರಜ್ಞಾಧಿಕಾರಿ ಹೇಮಲತಾ ಮಲೇರಿಯಾ ಕಾಯಿಲೆಯನ್ನ ಪತ್ತೆ ಹಚ್ಚಲು ಪ್ರಯೋಗಶಾಲ ತಂತ್ರಜ್ಞರು ಯಾವ ರೀತಿ ಕಾರ್ಯ ಪ್ರವೃತ್ತರಾಗಬೇಕು ಎಂಬುದರ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ, ಸ್ಥಿರ ರಕ್ತ ಲೇಪನ, ದಪ್ಪ ರಕ್ತ ಲೇಪನ ಹಾಗೂ ತೆಳು ರಕ್ತ ಲೇಪನ ಸಂಗ್ರಹಿಸುವ ಕುರಿತು ತರಬೇತಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕಿ ಲಲಿತಾ, ಪಟ್ಟಣದ ಖಾಸಗಿ ವೈದ್ಯರಾದ ಡಾ. ಪ್ರಸನ್ನಕುಮಾರ್, ಡಾ. ಸುರೇಶ್, ಡಾ.ಶಿವಕುಮಾರ್, ಡಾ.ಸಾತ್ವಿಕ್‌ಸುರೇಶ್, ಡಾ.ನಾಗೇಶ್, ಡಾ.ರಮೇಶ್, ತಾಲೂಕು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ, ಡಾ,ಆಕರ್ಷ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್, ಪಿ.ಕೆ.ಭಗವಾನ್, ಸಂತೋಷ್, ಆರ್.ಕೇಶವಮೂರ್ತಿ , ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ವೆಂಕಟೇಶ್, ಸುಜಾತಾ, ಅಜಯ್, ತಾಲೂಕು ವ್ಯವಸ್ಥಾಪಕ ಕಿರಣ್, ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಪವನ್‌ ಕರ್, ತಾಲೂಕಿನ ಎಲ್ಲಾ ಖಾಸಗಿ ಪ್ರಯೋಗಾಲಯ ತಂತ್ರಜ್ಞಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ