ಇದ್ದು ಇಲ್ಲದಂತಾದ ಶರಾವತಿಯ ಹಳೆಯ ಸೇತುವೆ

KannadaprabhaNewsNetwork |  
Published : Dec 09, 2025, 01:45 AM IST
ಹೊನ್ನಾವರದ ಶರಾವತಿಯ ಹಳೆಯ ಸೇತುವೆ | Kannada Prabha

ಸಾರಾಂಶ

ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶರಾವತಿ ನದಿಯ ಸೇತುವೆ ಮಂಗಳೂರು ನಗರವನ್ನು ಸಂಪರ್ಕಿಸುತ್ತದೆ.

ದುರಸ್ತಿ ಮಾಡಿ ಲಘು ವಾಹನ ಓಡಿಸಲು ಅವಕಾಶ ಮಾಡಲಿ: ಸಾರ್ವಜನಿಕರ ಒತ್ತಾಯ

ವಾಹನ ದಟ್ಟಣೆ ನಿಯಂತ್ರಣಕ್ಕೆ ಅನುಕೂಲಪ್ರಸಾದ್ ನಗರೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕು ಹೆಚ್ಚಿನ ಪ್ರವಾಸಿ ತಾಣಗಳನ್ನು ಹೊಂದಿರುವುದರಿಂದ ಇಲ್ಲಿಗೆ ಜನರು ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಶರಾವತಿ ನದಿಯ ಸೇತುವೆ ಮಂಗಳೂರು ನಗರವನ್ನು ಸಂಪರ್ಕಿಸುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ಆದರೆ ಶರಾವತಿ ನದಿಗೆ ನಿರ್ಮಿಸಿದ್ದ ಹಳೆಯ ಸೇತುವೆ ಇದ್ದೂ ಇಲ್ಲದಂತಾಗಿದೆ.

ಈಗಾಗಲೇ ಹೊಸ ಸೇತುವೆ ರಸ್ತೆಯಲ್ಲಿ ಸಂಚಾರದ ಅನುಕೂಲಕ್ಕೆ ಹಾಕಿದ, ಗುರುತುಗಳೆಲ್ಲ ಪುಡಿ ಪುಡಿಯಾಗಿ ಹೋಗಿದೆ. ಹೊಸ ಸೇತುವೆಯ ಮೇಲೆ ದ್ವಿಮುಖ ಸಂಚಾರ ಪ್ರಾರಂಭ ಆದ ಮೇಲೆ ಅನೇಕ ಸಾವು-ನೋವು ಆಗಿವೆ.ಹಳೆಯ ಸೇತುವೆ ಬಂದ್ ಮಾಡಿ ಸಾಧಿಸಿದ್ದೇನು?:

ಸಂಚಾರ ದಟ್ಟಣೆ ಹೆಚ್ಚುತ್ತಿದೆ ಎಂದು ಗೊತ್ತಿದ್ದರೂ ಸಹ ಹಳೆಯ ಸೇತುವೆ ಬಳಸಲು ಅವಕಾಶ ನೀಡದೆ ಇರುವುದು ದುರಂತವೇ ಸರಿ. ಅಲ್ಲದೆ ಈ ಸೇತುವೆ ಮೇಲೆ ಅಪಘಾತಗಳಾಗಿ ಸಾವು-ನೋವು ಉಂಟಾಗಿದ್ದೇ ದೊಡ್ಡ ಸಾಧನೆ ಆಯ್ತೆ ವಿನಃ ಬೇರೆನು ಆಗಿಲ್ಲ. ಹಳೆಯ ಸೇತುವೆ ಸ್ವಲ್ಪ ಪ್ರಮಾಣದಲ್ಲಿ ಹಾಳಾಗಿದೆ ಎಂದರೂ ಅದನ್ನು ಸರಿ ಪಡಿಸಿ ಬೈಕ್, ರಿಕ್ಷಾ, ಸೈಕಲ್ ಎಂದು ಚಿಕ್ಕ ವಾಹನಗಳಿಗೆ ಬಿಡಬಹುದಿತ್ತು. ಆದರೆ ಆ ಕೆಲಸವನ್ನೂ ಮಾಡಿಲ್ಲ.

ಒಂದು ವೇಳೆ ಹೊಸ ಸೇತುವೆ ನಿರ್ಮಾಣ ಆಗದೇ ಇದ್ದರೆ ಹಳೆಯ ಸೇತುವೆಯ ಮೇಲೆ ಓಡಾಡಬೇಕಿತ್ತು ಅಲ್ಲವೆ? ಹಾಗಿದ್ದರೆ ಹಳೆಯ ಸೇತುವೆ ಬಂದ್ ಆಗಿದ್ದು ಯಾಕೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಜನರಿಗೆ ಸಹಾಯವಾಗುವ ಕೆಲಸಕ್ಕೆ ಜಿಲ್ಲಾಡಳಿತವಾಗಲಿ, ರಾಜಕಾರಣಿಗಳಾಗಲಿ ಮುಂದಾಗದೇ ಇರುವುದು ನಿಜಕ್ಕೂ ಬೇಸರ ಹುಟ್ಟಿಸುತ್ತದೆ.ಸೇತುವೆಯ ಮೇಲೆ ಹಾಕಿದ್ದ ಗುರುತು ಮಾಯ:

ಇನ್ನು ಈ ಸೇತುವೆಯ ಮೇಲೆ ಅಪಘಾತಗಳು ಆದಾಗ ರಸ್ತೆಯ ಮೇಲೆ ಗುರುತು ಹಾಕಲಾಗಿತ್ತು. ಹೋಗುವ ಮತ್ತು ಬರುವ ಎರಡು ವಿಭಾಗ ಮಾಡಲಾಗಿತ್ತು. ಆದರೆ ಅದನ್ನು ವಿಭಾಗಿಸಲು ಹಾಕಿದ್ದ ಗುರುತುಗಳು ಈಗ ಕಣ್ಮರೆಯಾಗಿದೆ. ಬ್ರಿಡ್ಜ್ ಮೇಲೆ ಇದೀಗ ಯಾವ ವಿಭಜನೆಯೂ ಇಲ್ಲದಂತಾಗಿದೆ.ಎನ್‌ಎಚ್‌ಎಐಗೆ ಅರ್ಜಿ:

ಇನ್ನು ಈ ಸೇತುವೆ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹೊನ್ನಾವರದ ಸಾರ್ವಜನಿಕರು ಸೇರಿ ಲಿಖಿತ ಅರ್ಜಿ ನೀಡಿದ್ದರು. ಆ ಅರ್ಜಿಯಲ್ಲಿ ಹಳೆಯ ಸೇತುವೆಯ ಮೇಲೆ ಭಾರಿ ವಾಹನ ಓಡಿಸದೆ, ಲಘು ವಾಹನವನ್ನು ಓಡಿಸಲು ಅವಕಾಶ ಮಾಡಿಕೊಡಿ ಎಂದು ವಿನಂತಿಸಲಾಗಿತ್ತು. ಆದರೆ ಎನ್‌ಎಚ್‌ಎಐ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಹೊನ್ನಾವರಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅದರಲ್ಲೂ ಶರಾವತಿ ಸೇತುವೆಯ ಮೇಲೆ ಬಂದು ಹೋಗುವ ವಾಹನಗಳ ಸಂಖ್ಯೆಯೂ ಅಧಿಕ. ಈ ನಿಟ್ಟಿನಲ್ಲಿ ಜನರ ಬಗ್ಗೆ ಕಾಳಜಿ ವಹಿಸಲು ಶರಾವತಿಯ ಇನ್ನೊಂದು ಸೇತುವೆಯನ್ನು ಉಪಯೋಗಕ್ಕೆ ಬಿಟ್ಟಿದ್ದರೆ ಅನುಕೂಲವಾಗುತ್ತಿತ್ತು.ಈ ಹಿಂದೆಯೇ ಸಾರ್ವಜನಿಕರು ಸೇರಿಕೊಂಡು ಶರಾವತಿ ಹಳೆಯ ಸೇತುವೆ ಮೇಲೆ ಸಣ್ಣ ವಾಹನ ಓಡಿಸಲು ಕೇಳಿದ್ದೇವು. ಅಲ್ಲದೆ ತಾಲೂಕಿನಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಹೀಗಾಗಿ ಶರಾವತಿ ಹಳೆಯ ಸೇತುವೆಯನ್ನು ಓಡಾಟಕ್ಕೆ ಮತ್ತೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಹೊನ್ನಾವರ ಸಾರ್ವಜನಿಕರು ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ. ಇನ್ನು ೧೫ ದಿನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿ ಎನ್‌ಎಚ್‌ಎಐ ಒಂದು ತೀರ್ಮಾನ ಪ್ರಕಟಿಸಬೇಕು ಎಂದು ವಕೀಲ ವಿಕ್ರಂ ನಾಯ್ಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ನಿವೃತ್ತಿ ಇಲ್ಲದವರು: ಗೋಕುಲ್ ಶೆಟ್ಟಿ
ಭದ್ರಕಾಳಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಸೋಲಾರ್ ಘಟಕ ಲೋಕಾರ್ಪಣೆ