ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಿದ ಸಂಘಟನೆ ಶ್ಲಾಘನೀಯ

KannadaprabhaNewsNetwork |  
Published : Nov 10, 2026, 12:15 AM IST
೯ಟೇಕಲ್-೧ಟೇಕಲ್‌ನಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಂಗವಿಕಲರಿಗೆ ಗಾಲಿ ಕುರ್ಚಿ, ಬಡವರಿಗೆ ಸೀರೆ ವಿತರಿಸಿದ ಶಾಸಕ ಕೆ.ವೈ.ನಂಜೇಗೌಡ ಹಾಗೂ ಕರ್ನಾಟಕ ಜನಸೇವಕರ ಸಂಘದ ಪದಾಧಿಕಾರಿಗಳು. | Kannada Prabha

ಸಾರಾಂಶ

ಕರ್ನಾಟಕ ಜನಸೇವಕರ ಸಂಘವು ಸುಮಾರು ೨೦ ವರ್ಷಗಳಿಂದ ಕನ್ನಡಪರ ಸೇವೆ ಮಾಡುತ್ತಾ, ಈ ಭಾಗದ ಶ್ರಮಿಕ ವರ್ಗಕ್ಕೆ ಸಹಕಾರ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕೆ.ವೈ.ನಂಜೇಗೌಡ ಅಭಿಮತ

ಕನ್ನಡಪ್ರಭ ವಾರ್ತೆ ಟೇಕಲ್

ಗಡಿ ಭಾಗಗಳಲ್ಲಿ ಕನ್ನಡ ಉಳಿಸಿ ಬೆಳೆಸಿ, ಕನ್ನಡಕ್ಕೆ ತನ್ನದೇ ಸ್ಥಾನಮಾನ ನೀಡುತ್ತಾ ಭಾಷಾವಾರು ಪ್ರಾಂತ್ಯಗಳನ್ನು ಕನ್ನಡ ಭಾಷಿಕರಾಗಿ ಬೆಳೆಸುತ್ತಿರುವುದು ಕನ್ನಡಪರ ಸಂಘಟನೆಗಳು. ಅದಕ್ಕೆ ಉದಾಹರಣೆಯೆಂದರೆ ಕರ್ನಾಟಕ ಜನಸೇವಕರ ಸಂಘವು ಸುಮಾರು ೨೦ ವರ್ಷಗಳಿಂದ ಕನ್ನಡಪರ ಸೇವೆ ಮಾಡುತ್ತಾ, ಈ ಭಾಗದ ಶ್ರಮಿಕ ವರ್ಗಕ್ಕೆ ಸಹಕಾರ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಶಾಸಕ ಕೆ.ವೈ.ನಂಜೇಗೌಡ ತಿಳಿಸಿದರು.

ಟೇಕಲ್‌ನಲ್ಲಿ ಕರ್ನಾಟಕ ಜನಸೇವಕರ ಸಂಘ ಆಯೋಜಿಸಿದ್ದ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘದ ಸಂಸ್ಥಾಪಕ ಮಂಜುನಾಥಗೌಡ ಆರಂಭಿಸಿದ ಈ ಸಂಘಟನೆಯು ಬಡವರು, ಸಾಮಾನ್ಯ ಜನರಿಗೆ ಅನುಕೂಲವಾಗುವ ಸೇವಾ ಕಾರ್ಯಕ್ರಮ ಮಾಡಿಕೊಂಡು, ಉಚಿತ ಆರೋಗ್ಯ ಸೇವೆ ಒದಗಿಸಿ, ಅಂಗವಿಕಲರಿಗೆ ಅಗತ್ಯ ಸಹಾಯಕ ಸಾಮಗ್ರಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದೆ ಎಂದರು.

ಸಂಘದ ರಾಜ್ಯಾಧ್ಯಕ್ಷ ಕೆ.ವಿ.ಆರ್.ಮಂಜುನಾಥಗೌಡ ಮಾತನಾಡಿ, ಎಲ್ಲರಿಗೂ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕಳೆದ ಎರಡು ಬಾರಿಯಿಂದ ಟೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಗಡಿಭಾಗದಲ್ಲಿ ಕನ್ನಡದ ಸಾರ್ವಭೌಮತ್ವ, ಪೇಟೆ, ಪಟ್ಟಣ, ನಗರಗಳಲ್ಲಿ ಕನ್ನಡ ಭಾಷೆಯ ಕೊರತೆ ಇದೆ. ಕನ್ನಡಿಗರು ಗಮನಿಸಿ ಅವರನ್ನು ಕನ್ನಡ ಭಾಷಿಕರಾಗಿ ಮುಂಚೂಣಿಗೆ ತರಲು ಪ್ರಯತ್ನಿಸಬೇಕು. ಸರ್ಕಾರ ಆದ್ಯತೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಶಾಸಕರ ಸಮ್ಮುಖದಲ್ಲಿ ಅಂಗವಿಕಲರಿಗೆ, ಬಡವರಿಗೆ ಸೀರೆ ಹಾಗೂ ಗಾಲಿ ಕುರ್ಚಿ ವಿತರಿಸಲಾಯಿತು. ಟೇಕಲ್ ಆರೋಗ್ಯ ಕೇಂದ್ರದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಬಹುತೇಕ ಮಂದಿ ಭಾಗವಹಿಸಿ ಸದುಪಯೋಗಪಡಿಸಿಕೊಂಡರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಳ್ಳೇರಹಳ್ಳಿ ವೆಂಕಟೇಶ್, ಜಿಲ್ಲಾಧ್ಯಕ್ಷ ಎಸ್.ಪ್ರಕಾಶ್, ತಾಲೂಕು ಅಧ್ಯಕ್ಷ ಚಲಪತಿಗೌಡ, ಕೆಂಪಣ್ಣ, ಮೀಸೆ ಮುನಿಯಪ್ಪ, ಮಾಜಿ ತಾ.ಪಂ ಸದಸ್ಯ ರಮೇಶ್‌ಗೌಡ, ಎಸ್‌ಡಿಎಂಸಿ ಅಧ್ಯಕ್ಷ ಎ.ಕೆ.ವೆಂಕಟೇಶ್, ಸತೀಶ್‌ಬಾಬು, ಎಂ.ಮುರುಗೇಶ್, ಪ್ರಗತಿ ಶ್ರೀನಿವಾಸ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ